Site icon Vistara News

KS Eshwarappa: ದೇಗುಲ ಒಡೆದು ಮಸೀದಿ ಕಟ್ಟಿದ್ರೆ ಒಂದನ್ನೂ ಉಳಿಸಲ್ಲ, ಹಿಂದುಗಳು ಒಡೆದು ಹಾಕ್ತಾರೆ: ಈಶ್ವರಪ್ಪ

KS Esharappa

ಚಿಕ್ಕೋಡಿ: ಮುಸ್ಲಿಮರು ಎಲ್ಲೆಲ್ಲಿ ದೇವಸ್ಥಾನ‌ (Hindu Temple) ಒಡೆದು ಮಸೀದಿ ನಿರ್ಮಿಸಿದ್ದೀರೋ ಮರ್ಯಾದೆಯಿಂದ ಮಸೀದಿಗಳನ್ನು (mosque) ವಾಪಸ್ ತೆಗೆದುಕೊಳ್ಳಿ.‌ ಇಲ್ಲವಾದಲ್ಲಿ ಹಿಂದು ಸಮಾಜ ಮಸೀದಿಗಳನ್ನು ಒಡೆದು ಪುಡಿ ಪುಡಿ ಮಾಡುತ್ತದೆ ಎಂದು ಮಾಜಿ ಡಿಸಿಎಂ ಹಾಗೂ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ (KS Eshwarappa) ಪ್ರಚೋದನಾಕಾರಿ ಭಾಷಣ ಮಾಡಿದ್ದು, ವಿವಾದಕ್ಕೀಡಾಗಿದೆ.

ಚಿಕ್ಕೋಡಿ ಪಟ್ಟಣದಲ್ಲಿ ಶ್ರೀರಾಮಸೇನೆಯಿಂದ ಆಯೋಜನೆ ಮಾಡಿರುವ ಅಭಿಯಾನದಲ್ಲಿ ಮಾತನಾಡಿದ ಕೆ.ಎಸ್.‌ ಈಶ್ವರಪ್ಪ, ಮಥುರಾ, ಕಾಶಿ ದೇವಸ್ಥಾನಗಳ ಸರ್ವೆ ಮಾಡಲಾಗುತ್ತದೆ. ಕೋರ್ಟ್‌ ಮುಖಾಂತರ ಸರ್ವೇ ನಡೆಯುತ್ತದೆ. ಕಾಶಿ ವಿಶ್ವನಾಥ, ಮಥುರಾ ಶ್ರೀ ಕೃಷ್ಣ ದೇವಸ್ಥಾನವೂ ಶೀಘ್ರದಲ್ಲಿ ನಿರ್ಮಾಣ ಆಗುತ್ತವೆ ಎಂದು ಹೇಳಿದರು.

ದೇಶದಲ್ಲಿ ಶ್ರೀರಾಮನ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮನ್ನು ವಿರೋಧ ಮಾಡಿದವರ ಹೊಟ್ಟೆಯಲ್ಲಿ ಕಸಿವಿಸಿ ಆಗುತ್ತಿದೆ. ಸಚಿವ ಪ್ರಿಯಾಂಕ್‌ ಖರ್ಗೆ ಎನ್ನುವ ಚಿಲ್ಲರೆ ಮನುಷ್ಯ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಸೂರ್ಯ ಇದ್ದ ಹಾಗೆ. ಸೂರ್ಯನಿಗೆ ಉಗಿದರೆ ಪ್ರಿಯಾಂಕ್ ಖರ್ಗೆ ಅವರಿಗೆ ಮರಳಿ ಬರುತ್ತದೆ.‌ ನರೇಂದ್ರ ಮೋದಿ ನಡೆದರೆ ನಾಯಿಗಳು ಬೊಗಳುತ್ತಿರುತ್ತವೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.

ಕಾಂಗ್ರೆಸ್‌ ಅವಧಿಯಲ್ಲಿ ದೇಶ ತುಂಡಾಯಿತು

ಪಾಕಿಸ್ತಾನ ಸೇರಿ ಅಖಂಡ ಭಾರತ ನಿರ್ಮಾಣಕ್ಕೆ ಜೈ ಶ್ರೀರಾಮ ಘೋಷಣೆಯು ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ. ಪಾಕಿಸ್ತಾನದವರು ಮೋದಿ ಪ್ರಧಾನಿ ಆಗಿ ಬರಲಿ ಎಂದು ಬಯಸುತ್ತಿದ್ದಾರೆ. ಮೋದಿ ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರಿದರು. ದೇಶವನ್ನು ಲೂಟಿ ಮಾಡಿದವರಿಗೆ ಭಾರತೀಯ ಸಂಸ್ಕೃತಿ ನಾಶ ಮಾಡಲು ಆಗಲಿಲ್ಲ. ಕಾಂಗ್ರೆಸ್ ಅವರ ಅಧಿಕಾರದ ಆಸೆಯಿಂದ ದೇಶ ತುಂಡು ತುಂಡಾಯಿತು. ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ದಿನದಂದು ಸ್ವತಂತ್ರ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಕೆ.ಎಸ್.‌ ಈಶ್ವರಪ್ಪ ಹೇಳಿದರು.

ಸಿಎಂ ಸಿದ್ದರಾಮಯ್ಯನವರು 1 ಸಾವಿರ ಕೋಟಿ ಮುಸ್ಲಿಂರಿಗೆ ಇವರ ಅಪ್ಪನ‌ಮನೆ ದುಡ್ಡು ಕೊಡುತ್ತಾರಾ? ಎಂದು ಕೆ.ಎಸ್.‌ ಈಶ್ವರಪ್ಪ ಕಿಡಿಕಾರಿದರು.

ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಅವರ ಭಾಷಣದ ವಿಡಿಯೊ ಇಲ್ಲಿದೆ

ಇದನ್ನೂ ಓದಿ: Wood Smuggling: ಮರಗಳ ಕಡಿತ ಪ್ರಕರಣ; ವಿಕ್ರಮ್‌ ಸಿಂಹಗೆ ಜಾಮೀನು ಮಂಜೂರು

ಮೋದಿ ಕಾಲದಲ್ಲಿ ಇದು ಮುಸ್ಲಿಮರಿಗೆ ಸಾಧ್ಯವಿಲ್ಲ

ಹಮ್ ದೋ ಹಮಾರೆ ದೋ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾನೂನು ತಂದಿದ್ದಾರೆ. ಮುಸ್ಲಿಮರು ಹಮ್ ಪಾಂಚ್ ಹಮಾರಾ ಪಚ್ಚಿಸ್ ಎನ್ನುವುದು ಮೋದಿ ಕಾಲಾವಧಿಯಲ್ಲಿ ಸಾಧ್ಯವಿಲ್ಲ. ಹಿಜಾಬ್ ಧರಿಸಿ ಬಂದರೆ ಹಿಂದು ಸಮಾಜ‌ದ ವಿದ್ಯಾರ್ಥಿಗಳು ಕೇಸರಿ ಶಾಲ್ ಧರಿಸುವ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಕೋರ್ಟ್‌ ಆದೇಶವನ್ನು ತಿರಸ್ಕರಿಸಿ ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಈಶ್ವರಪ್ಪ ಕಿಡಿಕಾರಿದರು.

Exit mobile version