Site icon Vistara News

KS Eshwarappa : ಪ್ರಿಯಾಂಕ್‌ ಖರ್ಗೆಯಂಥ ಚಿಲ್ಲರೆಗಳಿಗೆ ಉತ್ತರ ಕೊಡಲ್ಲ ಎಂದ ಈಶ್ವರಪ್ಪ

Priyanka Kharge KS Eshwarappa

ಬೆಳಗಾವಿ: ಸಚಿವ ಪ್ರಿಯಾಂಕ್ ಖರ್ಗೆಯಂಥ (Priyank Kharge) ಚಿಲ್ಲರೆಗಳಿಗೆ ಉತ್ತರ ಕೊಡಲ್ಲ ಎಂದು ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಶನಿವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರನ್ನು ಭೇಟಿ ಮಾಡಿ ತಮ್ಮ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ (MP Election Ticket) ಟಿಕೆಟ್‌ ಕೊಡಿಸುವಂತೆ ಮನವಿ ಮಾಡಿದ್ದ ಅವರು ಭಾನುವಾರ ಬೆಳಗಾವಿಗೆ ಆಗಮಿಸಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ ಅವರು ಪ್ರಿಯಾಂಕ್‌ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ʻʻರಾಮಮಂದಿರ ಆಯ್ತು ರಾಮರಾಜ್ಯ ಆಗೋದು ಯಾವಾಗʼʼ ಎಂಬ ಪ್ರಶ್ನೆ ಕೇಳಿದ್ದ ಪ್ರಿಯಾಂಕ್‌ ಅವರನ್ನು ಚಿಲ್ಲರೆ ಎಂದ ಈಶ್ವರಪ್ಪ, ಅಂಥವರ ಮಾತಿಗೆಲ್ಲ ನಾನು ಉತ್ತರ ಕೊಡೊಲ್ಲ ಎಂದರು.

ʻʻರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಸಂತೋಷದ ವಿಚಾರ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೂ ಸಾರ್ಥಕ ಆಯ್ತು, ಭಾರತೀಯ ಸಂಸ್ಕೃತಿ ಉಳಿಸಬೇಕು ಎಂದು ಸಾವಿರಾರು ಜನ ಬಲಿದಾನ ಮಾಡಿದರು. ಕಾಂಗ್ರೆಸ್‌ನವರು ಬಿಜೆಪಿಯವರು ರಾಮ ಮಂದಿರ ಕಟ್ಟಲ್ಲ ಅಂತಿದ್ದರು. ಚುನಾವಣೆಯಲ್ಲಿ ಅದೊಂದು ಪ್ರಣಾಳಿಕೆ ಮಾಡ್ಕೊತಾರೆ ಅಷ್ಟೆ ಎಂದಿದ್ದರು. ಈಗ ಪ್ರಿಯಾಂಕ್ ಖರ್ಗೆಯಂತವರು ರಾಮಮಂದಿರ ಕಟ್ಟಾಯ್ತು ರಾಮರಾಜ್ಯ ಯಾವಾಗ ಅಂತಾರೆ. ಚಿಲ್ಲರೆಗಳಿಗೆ ಉತ್ತರ ಕೊಡಬೇಕಿಲ್ಲ,ʼʼ ಎಂದು ಈಶ್ವರಪ್ಪ ಹೇಳಿದರು.

ʻʻಕಾಂಗ್ರೆಸ್‌ನವರು ನೋವು ಮಾಡುವ ವಿಷಯಗಳ ಬಗ್ಗೆ ಮಾತಾಡ್ತಾರೆ. ಪ್ರಪಂಚದಲ್ಲಿ ಭಾರತದ ಸಂಸ್ಕೃತಿ ಬೆಳೆಯಬೇಕು. ಇದು ರಾಮ ಮಂದಿರ ಅಲ್ಲ‌ ರಾಷ್ಟ್ರ ಮಂದಿರʼʼ ಎಂದು ಹೇಳಿದರು ಈಶ್ವರಪ್ಪ.

ʻʻಸಿದ್ದರಾಮಯ್ಯ ಅವರು ಅಹಿಂದ ಅಂತ ಹೋಗ್ತಿದ್ರು. ಊಗ ಹಿಂದುಳಿದವರು, ದಲಿತರು ಕೈ ಬಿಟ್ರು. ಇನ್ನು ಉಳಿದಿದ್ದು ಅಲ್ಪಸಂಖ್ಯಾತರು ಮಾತ್ರ, ಅವರನ್ನೆ ಇಟ್ಕೊಂಡು ರಾಜಕೀಯ ಮಾಡಬೇಕು ಎನ್ನುವುದು ಸಿದ್ದರಾಮಯ್ಯ ಲೆಕ್ಕ,. ಹೀಗಾಗಿ ದೇಶದ್ರೋಹಿಗಳಿಗೆ ತೃಪ್ತಿ ಆಗೋ ರೀತಿಯಲ್ಲಿ ಸಿದ್ದರಾಮಯ್ಯ ಮಾತಾಡ್ತಾರೆʼʼ ಎಂದು ಹೇಳಿದರು ಈಶ್ವರಪ್ಪ.

ʻʻರಾಮಮಂದಿರ ಆಗಬಾರದು ಎಂದು ಕೋರ್ಟಿಗೆ ಹೋದವರು ಕೂಡಾ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುಷ್ಪ ವೃಷ್ಟಿ ಮಾಡಿದ್ದಾರೆ. ರಾಮಮಂದಿರ ಕಟ್ಟಿದ್ದು ಒಳ್ಳೆಯದು ಎಂದು ಹೇಳಿದ್ದಾರೆ. ಆದರೆ, ಹಿಂದೂ-ಮುಸ್ಲಿಂ ಒಟ್ಟಾಗಬಾರದು ಎನ್ನುವುದು ಕಾಂಗ್ರೇಸ್ ಮತ್ತು ಸಿದ್ದರಾಮಯ್ಯ ಉದ್ದೇಶʼʼ ಎಂದು ವಿವರಿಸಿದರು.

ʻʻಮೋದಿ ಅವರು ಜಾರಿಗೆ ತಂದ ತ್ರಿವಳಿ ತಲಾಕ್‌ ರದ್ದತಿಯನ್ನು ಮುಸ್ಲಿಮರೇ ಒಪ್ಪಿದರೂ ಸಹ ಕಾಂಗ್ರೆಸ್‌ನವರು ಒಪ್ತಿಲ್ಲʼʼ ಎಂದು ಗೇಲಿ ಮಾಡಿದ ಈಶ್ವರಪ್ಪ ಅವರು, ಬಿಜೆಪಿ ಒಂದೊಂದೇ ಕಾನೂನು ತರುತ್ತದೆ. ಕಾಶಿ ವಿಶ್ವನಾಥ, ಮಥುರಾ ಎಲ್ಲವೂ ಮುಕ್ತಿ ಹೊಂದುತ್ತವೆʼʼ ಎಂದು ಹೇಳಿದ ಈಶ್ವರಪ್ಪ ಅವರು, ಮೋದಿಯಂತ ಪ್ರಧಾನಿ ನಮಗೆ ಬೇಕಿತ್ತು ಅಂತ ಪಾಕಿಸ್ತಾನದಲ್ಲಿ ಹೇಳ್ತಾರೆ ಎಂದು ಖುಷಿಪಟ್ಟರು.

ಇದನ್ನೂ ಓದಿ: Rahul Gandhi: ಹೊಸ ವರ್ಷ; ದುಬೈಗೆ ಹಾರಿದ ರಾಹುಲ್‌ ಗಾಂಧಿ, ಪಾರ್ಟಿ ಜೋರಾ ಎಂದ ಜನ

ಮಗನಿಗಾಗಿ ಟಿಕೆಟ್‌ ಕೇಳುತ್ತಿರುವುದು ನಿಜ ಎಂದ ಈಶ್ವರಪ್ಪ

ʻʻನನ್ನ ಮಗ ಕಾಂತೇಶ್‌ ಗೆ ಲೋಕಸಭಾ ಚುನಾವಣೆ ಟಿಕೆಟ್‌ ಪಡೆಯಬೇಕು ಎಂದು ಪ್ರಯತ್ನ ಮಾಡಿದ್ದೇನೆ. ಟಿಕೇಟ್ ಕೊಟ್ರೆ ಚುನಾವಣೆಗೆ ಮಗನನ್ನು ನಿಲ್ಲಿಸ್ತೀನಿ. ಟಿಕೇಟ್ ಕೊಟ್ರೆ ಹಾವೇರಿಯಿಂದ ಸ್ಪರ್ಧೆ ಮಾಡ್ತಾನೆʼʼ ಎಂದರು ಈಶ್ವರಪ್ಪ.

ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಬಿಜೆಪಿ ಸರ್ಕಾರ ಮೇಲೆ ಮಾಡಿರುವ 40000 ಕೋಟಿ ರೂ. ಹಗರಣದ ಆರೋಪ ಹಾಗೂ ವಿಜಯೇಂದ್ರ-ಯತ್ನಾಳ್‌ ಸಂಘರ್ಷದ ವಿಚಾರದಲ್ಲಿ, ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹೆದರ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಯಾರಿಗಾದರೂ ಹೆದರಿದ್ದರೆ ನಾವು ಪಂಚಾಯಿತಿಯಿಂದ ಹಿಡಿದು ಪ್ರಧಾನಿ ಹುದ್ದೆಯವರೆಗೆ ಗೆಲ್ಲುತ್ತಿರಲಿಲ್ಲ, ಬಿಜೆಪಿ ಹೆದರಿದ್ದರೆ ನಾವು 17 ರಾಜ್ಯದಲ್ಲಿ ಗೆಲ್ತಿರಲಿಲ್ಲ ಎಂದರು ಈಶ್ವರಪ್ಪ.

Exit mobile version