ಬೆಳಗಾವಿ: ಗೋಕಾಕ ನಗರದ ಕಿಲ್ಲಾ ಪ್ರದೇಶದಲ್ಲಿ ಬೇರೊಬ್ಬರ ಮನೆಯ ಗ್ಯಾಲರಿಯಲ್ಲಿ ಯುವತಿಯೊಬ್ಬಳು ನೇಣು ಬಿಗಿದು ಶವವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮುಂಜಾನೆ ವಾಯುವಿಹಾರಿಗಳು ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ರಸ್ತೆಯ ಪಕ್ಕದಲ್ಲೇ ಈ ಘಟನೆ ನಡೆದಿದೆ.
ಶವವಾಗಿ ಪತ್ತೆಯಾಗಿರುವ ಯುವತಿ ರೇಷ್ಮಾ ಮುಲ್ಲಾ (40) ಎಂದು ಗುರುತಿಸಲಾಗಿದೆ. ಈಕೆ ಗೋಕಾಕ ನಗರದ ಮರಾಠಾಗಲ್ಲಿಯ ನಿವಾಸಿ. ಗೋಕಾಕ ನಗರದ ಕಿಲ್ಲಾದಲ್ಲಿರುವ ಕಿರಣ್ ದಿಕ್ಷಿತ್ ಎಂಬವರ ಮನೆಯ ಮುಂದಿನ ಗ್ಯಾಲರಿಯಲ್ಲಿ ಮೃತದೇಹ ನೇತಾಡುತ್ತಿತ್ತು. ನೇತಾಡುತ್ತಿದ್ದ ಮೃತದೇಹ ಕಂಡು ಮುಂಜಾನೆಯ ವಾಯು ವಿಹಾರಿಗಳು ಬೆಚ್ಚಿದ್ದಾರೆ. ಯುವತಿಯ ನಿಗೂಢ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗೋಕಾಕ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Hit and Run | ಸಿಸಿ ಕ್ಯಾಮೆರಾದಿಂದ ಸಿಕ್ಕಿದ ಸುಳಿವು, ಪರಾರಿಯಾದ ಉದ್ಯಮಿ ಮೇಲೆ ಎಫ್‌ಐಆರ್