ಬೆಳಗಾವಿ: ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲೂ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳಿದ್ದಾರೆ, ಅಲ್ಲಿಯೂ ಹೋಗಿ ಪ್ರಚಾರ ಮಾಡುತ್ತೇವೆ ಎನ್ನುವ ಮೂಲಕ ಅವರನ್ನು ಸೋಲಿಸುತ್ತೇವೆ ಎಂಬ ಸಂದೇಶವನ್ನು ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಆರೋಪ ಹೊರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಸುದ್ದಿಗೋಷ್ಠಿ ನಡೆಸಿದರು. ಗೋಕಾಕ್‌ಗೆ ಹೋಗಿಯೂ ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್ ಪಕ್ಷವನ್ನು ಏಕೆ ಆಯ್ಕೆ ಮಾಡಬೇಕು ಎಂದು ಜನರಿಗೆ ತಿಳಿಸುತ್ತೇವೆ. ಇವತ್ತು ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಉಳಿದಿಲ್ಲ. ಅವರೀಗ ಒಬ್ಬ ಜಿಲ್ಲಾ ನಾಯಕಿಯಾಗಿದ್ದಾರೆ. ಈ ರೀತಿ ಮಾತನಾಡುವಾಗ, ನಿಮ್ಮನ್ನು ಆಯ್ಕೆ ಮಾಡಿದ ಗೋಕಾಕ್ ಜನರ ಮಾನ ಮರ್ಯಾದೆ ಬಗ್ಗೆಯಾದರೂ ಯೋಚನೆ ಮಾಡಬೇಕು. ಸ್ವಲ್ಪ ಕಾಮನ್‌ಸೆನ್ಸ್ ಇರಬೇಕು.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅಷ್ಟೆ ಅಲ್ಲದೆ ಅನೇಕರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಜಿಲ್ಲೆಯ ಹಾಗೂ ರಾಜ್ಯದ ಜನರು ಮುಂದಿನ ದಿನಗಳಲ್ಲಿ ವರಿಗೆ ತಕ್ಕ ಪಾಠ ಕಲಿಸುತ್ತಾರೆ. ಜಾರಕಿಹೊಳಿ ಮೊದಲು ಸುಳ್ಳು ಮಾತನಾಡುತ್ತಿರಲಿಲ್ಲ, ಈಗ ತುಂಬಾ ಸುಳ್ಳು ಹೇಳುತ್ತಿದ್ದಾರೆ.
ಇದನ್ನೂ ಓದಿ : Karnataka election | ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಆ್ಯಕ್ಟಿವ್; ಎಲೆಕ್ಷನ್ ಗೆಲ್ಲಲು ಮರಾಠ ಅಸ್ತ್ರ
ಆರೋಪ ಮಾಡುವುದು, ಇನ್ನೊಬ್ಬರತ್ತ ಕೈ ತೋರುವುದು ಬಹಳ ಸುಲಭ. ಸುಳ್ಳು ಹೇಳುವುದು ಬಿಟ್ಟು ದಾಖಲೆ ನೀಡಿದರೆ ಅದಕ್ಕೆ ಉತ್ತರ ನೀಡುತ್ತೇವೆ. ಎಲ್ಲೊ ಭ್ರಷ್ಟಾಚಾರ ನಡೆಯಿತು ಎನ್ನುವುದು, ಇವರೇ ಟಿಕೆಟ್ ಕೊಡಿಸಿದರು ಎನ್ನುವುದು ಬೇಜವಾಬ್ದಾರಿ ಹೇಳಿಕೆ ಎಂದರು.