Site icon Vistara News

Modi at Belagavi: ಬಿಸಿಲಲ್ಲಿ ನಿಲ್ಲಿಸಿ ಖರ್ಗೆಗೆ ಅವಮಾನ; ಕರ್ನಾಟಕವನ್ನು ಕಾಂಗ್ರೆಸ್‌ ದ್ವೇಷಿಸುತ್ತದೆ: ʼಅವಮಾನದ ಇತಿಹಾಸʼ ಕೆದಕಿದ ಪ್ರಧಾನಿ ಮೋದಿ

modi-at-belagavi-modi-lashes-out-over-congress-regarding-humiliation-to-kharge

#image_title

ಬೆಳಗಾವಿ: ಸರ್ಕಾರಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಜತೆಜತೆಗೆ ನೇರವಾಗಿ ರಾಜಕೀಯ ಅಸ್ತ್ರ ಪ್ರಯೋಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ ಎಂಬ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ. ಬೆಳಗಾವಿಯಲ್ಲಿ (Modi at Belagavi) ರೈಲ್ವೆ, ಜಲಜೀವನ್‌ ಮಿಷನ್‌ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಪಿಎಂ ಕಿಸಾನ್‌ ಯೋಜನೆಯ ಹಣ ಬಿಡುಗಡೆ ನಂತರ ನೆರೆದಿದ್ದ ಬೃಹತ್‌ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು.

ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮಂತ್ರದ ಸ್ಫೂರ್ತಿಯಾದ ಭಗವಾನ್‌ ಬಸವೇಶ್ವರರಿಗೆ ನಮಸ್ಕಾರಗಳು. ಬೆಳಗಾವಿ ಕುಂದಾ ಹಾಗೂ ಜನರ ಪ್ರೀತಿ ಎರಡೂ ಮರೆಯಲಾಗದ ಸಿಹಿ. ಬೆಳಗಾವಿಯ ಬಂಧು ಭಗಿನಿಯರಿಗೆ ನಮಸ್ಕಾರಗಳು ಎಂದರು.

ಬೆಳಗಾವಿ ಜನರ ಪ್ರೀತಿ ಹಾಗೂ ಆಶೀರ್ವಾದವನ್ನು ಪಡೆದು, ನಿಮ್ಮ ಸೇವೆಗೆ ದಿನರಾತ್ರಿ ಶ್ರಮಿಸುವ ಪ್ರೇರಣೆ ನೀಡುತ್ತಿದೆ. ಬೆಳಗಾವಿಯ ಭೂಮಿಯಲ್ಲಿ ಆಗಮಿಸುವುದು ತೀರ್ಥಯಾತ್ರೆಗೆ ಕಡಿಮೆಯಿಲ್ಲದ್ದು. ಇದು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಭೂಮಿ. ದೇಶ ಇಂದಿಗೂ ಇವರನ್ನು ವೀರತೆಗಾಗಿ ಹಾಗೂ ಗುಲಾಮತನದ ವಿರುದ್ಧ ದನಿಯೆತ್ತಿದ್ದಕ್ಕೆ ಸ್ಮರಿಸಿಕೊಳ್ಳುತ್ತದೆ.

ಈ ಹಿಂದೆ ಎಸ್‌. ನಿಜಲಿಂಗಪ್ಪ ಹಾಗೂ ವೀರೇಂದ್ರಪಾಟೀಲರಿಗೆ ಕಾಂಗ್ರೆಸ್‌ ಅವಮಾನಿಸಿದ್ದರಿಂದ ಆ ಪಕ್ಷದ ವಿರುದ್ಧ ಪ್ರಮುಖವಾಗಿ ವೀರಶೈವ ಲಿಂಗಾಯತ ಸಮುದಾಯ ದೂರ ಉಳಿಯಿತು. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ತರುವ ಮೂಲಕ ಇತಿಹಾಸವನ್ನು ಮೋದಿ ಕೆದಕಿದ್ದಾರೆ.

ಕಾಂಗ್ರೆಸ್‌ ಯಾವ ರೀತಿ ಕರ್ನಾಟಕವನ್ನು ದ್ವೇಷಿಸುತ್ತದೆ ಎನ್ನುವುದು ತಿಳಿಯಿರಿ. ಕರ್ನಾಟಕದ ನಾಯಕರನ್ನು ಅವಮಾನಿಸುವುದು ಇವರ ಅಭ್ಯಾಸ. ಕಾಂಗ್ರೆಸ್‌ ಪಕ್ಷದ ಪರಿವಾರದ ಮುಂದೆ ಎಸ್‌.ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರನ್ನು ಹೇಗೆ ಅವಮಾನಿಸಲಾಗಿತ್ತು ಎನ್ನುವುದನ್ನು ಕರ್ನಾಟಕ ಮರೆತಿಲ್ಲ. ಇಂದು ಕಾಂಗ್ರೆಸ್‌ ಕುಟುಂಬದ ಎದುರು ಕರ್ನಾಟಕದ ಮತ್ತೊಬ್ಬ ನಾಯಕನನ್ನು ಅವಮಾನಿಸಲಾಗಿದೆ.

ಇದನ್ನೂ ಓದಿ: Congress Plenary Session: ಸಿಡಬ್ಲ್ಯೂಸಿಗೆ ಎಲೆಕ್ಷನ್ ಇಲ್ಲ, ಸದಸ್ಯರ ನೇಮಕಕ್ಕೆ ಖರ್ಗೆ ಅಧಿಕಾರ ನೀಡಿದ ಕಾಂಗ್ರೆಸ್

ಇದೇ ನೆಲದ ಪುತ್ರ, 50 ವರ್ಷ ಸಾರ್ವಜನಿಕ ಜೀವನದಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರ ಕುರಿತು ನನಗೆ ಗೌರವವಿದೆ. ತಮ್ಮ ಕೈಲಾದಷ್ಟು ಸೇವೆ ಮಾಡಿದ್ದಾರೆ ಅವರು. ಇತ್ತೀಚೆಗೆ ಕಾಂಗ್ರೆಸ್‌ನ ಛತ್ತೀಸ್‌ಗಢದ ಕಾರ್ಯಕ್ರಮದಲ್ಲಿ ಅತ್ಯಂತ ಹೆಚ್ಚಿನ ವಯಸ್ಸಿನ, ಅನುಭವಿಯಾದ ಖರ್ಗೆಯವರೂ ಇದ್ದರು. ಬಿಸಿಲು ಇತ್ತು. ಆದರೆ ಬಿಸಿಲಿನಲ್ಲಿ ಛತ್ರಿಯ ಸೌಲಭ್ಯ, ಅವರ ಪಕ್ಕದಲ್ಲಿದ್ದವರಿಗೆ ಲಭಿಸಿತ್ತು (ಸೋನಿಯಾ ಗಾಂಧಿ). ಹೇಳಲು ಮಾತ್ರ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷ. ಆದರೆ ಯಾವ ರೀತಿ ರಿಮೋಟ್‌ ಕಂಟ್ರೋಲ್‌ ಯಾರ ಜತೆಗೆ ಇದೆ ಎನ್ನುವುದನ್ನು ಇಡೀ ದೇಶ ನೋಡುತ್ತಿದೆ ಎಂದರು.

ಇಂದು ದೇಶದ ಅನೇಕ ಪಕ್ಷಗಳು ಕುಟುಂಬದ ರಾಜಕಾರಣದಲ್ಲಿ ಮುಳುಗಿವೆ. ಕರ್ನಾಟಕದ ಜನರೂ ಕಾಂಗ್ರೆಸ್‌ನಿಂದ ಎಚ್ಚರವಾಗಿರಬೇಕು ಎಂದರು.

Exit mobile version