Site icon Vistara News

Monkey Death : ಕರುಳು ಹಿಂಡುವ ದೃಶ್ಯ; ಅಪಘಾತದಲ್ಲಿ ಮೃತಪಟ್ಟ ಮರಿ ಕೋತಿಯನ್ನು ತಬ್ಬಿ ಅಮ್ಮನ ರೋದನೆ

Baby monkey dies in car accident Mothers cry

ಬೆಳಗಾವಿ: ಆ ತಾಯಿ ಕೋತಿಯು ಮರಿ ಕೋತಿಯ ಕೈ ಹಿಡಿದು ರಸ್ತೆ ದಾಟಲು ಮುಂದಾಗಿತ್ತು. ಇದೇ ವೇಳೆ ವೇಗವಾಗಿ ಬಂದ ಯಮರೂಪಿ ಕಾರೊಂದು ಮರಿ ಕೋತಿ ಹಾಗೂ ತಾಯಿ ಕೋತಿಗೆ ರಭಸವಾಗಿ ಬಡಿದಿತ್ತು. ಮರಿ ಕೋತಿ ಮೇಲೆ ಕಾರು ಹರಿದ ಪರಿಣಾಮ (Road Accident) ಅದು ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಕೋತಿಯು ಗಾಯಗೊಂಡಿತ್ತು. ಮರಿ ಸಾವಿಗೆ ತಾಯಿ ಕೋತಿ ರೋದನೆ ಎಂತಹವರಿಗೂ ಕರುಳು ಹಿಂಡುವಂತೆ (Monkey Death) ಮಾಡಿತ್ತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗೇಟ್ ಬಳಿ ಈ ಅಪಘಾತ (Belgavi News) ನಡೆದಿದೆ.

ರಸ್ತೆ ಅಪಘಾತಗಳಲ್ಲಿ ಹೆಚ್ಚು ಬಲಿಯಾಗುವುದೆಂದರೆ ಅದು ಪ್ರಾಣಿಗಳು. ಪ್ರಾಣಿಗಳಿಗೆ ವಾಹನದಿಂದ ಡಿಕ್ಕಿ ಹೊಡೆಸಿ, ಅದನ್ನು ತಿರುಗಿಯೂ ನೋಡದೆ ಹೋಗುವ ಕೆಟ್ಟ ಮನಸ್ಥಿತಿಗೆ ಜನರು ತಲುಪಿಬಿಟ್ಟಿದ್ದಾರೆ. ಕಾರು ಅಪಘಾತದಿಂದ ಮೃತಪಟ್ಟ ಮರಿ ಕೋತಿಯೊಂದನ್ನು ತಾಯಿ ಕೋತಿ ತಬ್ಬಿಕೊಂಡು ಎಬ್ಬಿಸಲು ಯತ್ನಿಸಿದೆ. ರಸ್ತೆ ಬದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮರಿಯನ್ನು ತಾಯಿಯು ತಬ್ಬಿ ಹಿಡಿದುಕೊಂಡಿತ್ತು. ಎದ್ದೇಳು ಎಂದು ಮುಖವನ್ನು ಹಿಡಿದುಕೊಳ್ಳುತ್ತಿತ್ತು.

Baby monkey dies in car accident Mothers cry

ತಾಯಿ ಕೋತಿಯೂ ಅಪಘಾತದಲ್ಲಿ ಗಾಯಗೊಂಡು ಮುಖ ಹಾಗೂ ಕೈಯಲ್ಲಿ ರಕ್ತ ಸೋರುತ್ತಿದ್ದರೂ ಮರಿಗಾಗಿ ಹಂಬಿಸುತ್ತಿತ್ತು. ಸತ್ತು ಹೋದ ಮರಿ ಕೋತಿಯನ್ನು ಬಿಟ್ಟು ಆಗದೇ ಅಲ್ಲೇ ಕುಳಿತಿತ್ತು. ಇತ್ತ ಅಪಘಾತದಲ್ಲಿ ಗಾಯಗೊಂಡ ತಾಯಿ ಕೋತಿಗೆ ಸ್ಥಳೀಯರು ಉಪಚರಿಸಿದ್ದರು. ಕೆಲವರು ರಸ್ತೆ ಬಿಟ್ಟು ಪಕ್ಕಕ್ಕೆ ಕರೆದುಯುತ್ತಿದ್ದರೂ ಮರಿ ಕೋತಿಯ ಕಡಗೆ ಗಮನವಿಟ್ಟಿತ್ತು. ಕೋತಿಯ ಪರಿಸ್ಥಿತಿ ‌ಕಂಡು ಮಮ್ಮಲ ಮರುಗಿದ ಜನರು, ನೀರು ಕುಡಿಸಿ ಉಪಚರಿಸಿದ್ದರು.

ಬೈಕ್‌ಗೆ ಟಿಪ್ಪರ್‌ ಡಿಕ್ಕಿ; ಇಬ್ಬರು ಸಾವು

ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರು. ಕುಟುಂಬಸ್ಥರು ರಸ್ತೆಯಲ್ಲೇ ಇಬ್ಬರ ಮೃತದೇಹಗಳನ್ನು ಇಟ್ಟು ಪ್ರತಿಭಟಿಸಿದರು. ರಸ್ತೆಯಲ್ಲೆ ಪೆಂಡಾಲ್ ಹಾಕಿ ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿಟ್ಟಗಾನಹಳ್ಳಿಯಲ್ಲಿ ನಡೆದಿದೆ.

ಮಿಟ್ಟಗಾನಹಳ್ಳಿ ಗ್ರಾಮದ ಬಂಗಾರಪೇಟೆ ಹಾಗೂ ಮಾಲೂರು ರಸ್ತೆ ತಡೆದು‌ ಪ್ರತಿಭಟಿಸಿದ್ದಾರೆ. ಈ ಭಾಗದಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿದೆ. ಈ ಭಾಗದಲ್ಲಿರುವ ಹತ್ತಾರು ಕ್ರಷರ್‌ಗಳಿಂದ ಹಗಲು ರಾತ್ರಿ ಎನ್ನದೆ ನೂರಾರು ಟಿಪ್ಪರ್‌ಗಳು ಸಂಚಾರಿಸುತ್ತಿದೆ. ಹೀಗಾಗಿ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹಚ್ಚಾಗಿದೆ. ಬುಧವಾರ ರಾತ್ರಿ ಮೃತಪಟ್ಟ ಇಬ್ಬರು ಯುವಕರ ಸಾವಿಗೆ ಪರಿಹಾರಕ್ಕೆ ಆಗ್ರಹಿಸಿದರು. ಇತ್ತ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರು ಗ್ರಾಮಸ್ಥರ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version