ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಸತೀಶ ಪಾಟೀಲ್ ಎಂಬುವವರ ಹತ್ಯೆಯಾಗಿದ್ದು, ಈಗ ಇದಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗಿದೆ.
ಗೌಂಡವಾಡ ಗ್ರಾಮದ ಬೈರೋನಾಥ್ ಮಂದಿರ ದೇವಸ್ಥಾನಕ್ಕೆ ಸೇರಿದ ಜಮೀನು ಪರಬಾರೆ ಕುರಿತು ವಿವಾದ ಉಂಟಾಗಿತ್ತು. ಜಮೀನು ಉಳಿಸಲು ಸತೀಶ್ ಪಾಟೀಲ್ ಹೋರಾಟ ನಡೆಸಿದ್ದರು. ಪಾರ್ಕಿಂಗ್ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿತ್ತು. ಜೂನ್ ೧೮ರಂದು ನಡೆದ ಈ ಘರ್ಷಣೆಯಲ್ಲಿ ಸತೀಶ ಪಾಟೀಲ್ (37) ಕೊಲೆ ಆಗಿತ್ತು.
ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಸತೀಶ್ ಕುಟುಂಬಸ್ಥರು ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಪೊಲೀಸರು 10 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆಯರು, ಪುರುಷರು ಸೇರಿದಂತೆ 21 ವರ್ಷದ ಯುವಕ ಹಾಗೂ ಯುವತಿ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದು ಕಂಡುಬಂದಿದೆ.
ಆನಂದ ಕುಟ್ರೆ (60), ಜಾಯಪ್ಪ ನೀಲಜಕರ (52), ಸುರೇಖಾ ನೀಲಜಕರ (47), ಸಂಜನಾ ನೀಲಜಕರ (21), ವೆಂಕಟೇಶ ಕುಟ್ರೆ (50) ದೌಲತ್ ಮುತಗೇಕರ (21) ಲಖನ್ ನೀಲಜಕರ (25), ಲಕ್ಷ್ಮಿ ಕುಟ್ರೆ (45) ಸಂಗೀತಾ ಕುಟ್ರೆ (45) ಶಶಿಕಲಾ ಕುಟ್ರೆ (50) ಬಂಧಿತ ಆರೋಪಿಗಳು. ಇವರೆಲ್ಲರೂ ಗೌಂಡವಾಡ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಗುಂಪು ಘರ್ಷಣೆ, ಒಬ್ಬರ ಹತ್ಯೆ, ವಾಹನಗಳಿಗೆ ಬೆಂಕಿ