Site icon Vistara News

Murder Case : ಸ್ನೇಹಿತರೇ ಕೊಲೆಗಾರರು; ಬರ್ತ್‌ ಡೇ ಪಾರ್ಟಿಗೆ ಹೋದ ಯುವಕನ ಬರ್ಬರ ಹತ್ಯೆ

Murder Case

ಬೆಳಗಾವಿ: ಸ್ನೇಹಿತನ ಬರ್ತ್ ಡೇ ಪಾರ್ಟಿಗೆ (Birthday Party) ತೆರಳಿದ್ದ ಯುವಕನ ಬರ್ಬರ (Murder Case) ಹತ್ಯೆಯಾಗಿದೆ. ಬೆಳಗಾವಿ ಜಿಲ್ಲೆಯ (Belgavi News) ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಬಸವರಾಜ ಮುದ್ದಣ್ಣವರ (23) ಎಂಬಾತನ ಹತ್ಯೆಯಾಗಿದೆ.

ಎಂಎಸ್‌ಡಬ್ಲ್ಯೂ ವ್ಯಾಸಂಗ ಮಾಡುತ್ತಿದ್ದ ಬಸವರಾಜ ಮುದ್ದಣ್ಣವರ, ನಿನ್ನೆ ಬುಧವಾರ ರಾತ್ರಿ ಸ್ನೇಹಿತ ಮಲ್ಲಿಕಾರ್ಜುನ ಎಂಬಾತನ ಬರ್ತ್ ಡೇ ಪಾರ್ಟಿಗೆ ತೆರಳಿದ್ದ. ಈ ವೇಳೆ ಬರ್ತ್ ಡೇ ಪಾರ್ಟಿಗೆ ಆಗಮಿಸಿದ್ದ ಸ್ನೇಹಿತರ ಮಧ್ಯೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಸ್ನೇಹಿತರೇ ಬಸವರಾಜ ಮುದ್ದಣ್ಣವರಗೆ ಹೊಟ್ಟೆ, ಬೆನ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

ತೀವ್ರ ಹಲ್ಲೆಗೊಳಾದ ಬಸೌರಾಜನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಕಲಾಗಿದೆ. ಬಸವರಾಜ ಮೃತದೇಹವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇನ್ನು ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಹತ್ಯೆಗೈದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಬಸವರಾಜ ತಾಯಿ ಒತ್ತಾಯಿಸಿದ್ದಾರೆ. ನನ್ನ ಮಗ ಯಾರ ತಂಟೆಗೂ ಹೋಗುತ್ತಿರಲಿಲ್ಲ, ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿದ್ದ. ಬರ್ತ್ ಡೇ ಪಾರ್ಟಿಗೆ ಹೋಗುತ್ತೇನೆ ಎಂದರೆ ಕಳಿಸುತ್ತಿರಲಿಲ್ಲ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಕಣ್ಣೀರಿಟ್ಟರು.

ಇದನ್ನೂ ಓದಿ: Prajwal Revanna Case: ಬೆಡ್‌ಶೀಟ್‌ ಮೇಲಿರುವ `ಕಲೆಗಳ ಮಾಲಿಕ ನಾನಲ್ಲ…’ ಎನ್ನುತ್ತಿರುವ ಪ್ರಜ್ವಲ್!

ಸತ್ತ ವ್ಯಕ್ತಿಯ ದೇಹವನ್ನು ಏಕಾಂಗಿಯಾಗಿ ಬಿಡಬಾರದು ಅನ್ನೋದು ಯಾಕೆ ಗೊತ್ತೇ?

ಭೂಮಿಯಲ್ಲಿ (earth) ಹುಟ್ಟಿದ ಮನುಷ್ಯ, ಪ್ರಾಣಿ, ಸಸ್ಯಗಳು ಸೇರಿ ಪ್ರತಿಯೊಂದು ಜೀವ ಜಂತುಗಳು ಒಂದಲ್ಲ ಒಂದು ದಿನ ಸಾಯಲೇಬೇಕು (death) ಎಂಬುದು ಜೀವನದ ಕಟು ಸತ್ಯ. ಜೀವನ ಮತ್ತು ಸಾವಿನ ಚಕ್ರವು ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಅನಿವಾರ್ಯ ಸತ್ಯವಾಗಿದೆ. ಹಿಂದೂ ಧರ್ಮದ ನಂಬಿಕೆ (Hinduism Beliefs) ಪ್ರಕಾರ ಸತ್ತ ವ್ಯಕ್ತಿಯ ದೇಹವನ್ನು (dead body) ಒಂಟಿಯಾಗಿ ಬಿಡಬಾರದು ಎನ್ನಲಾಗುತ್ತದೆ.

ವ್ಯಕ್ತಿಯ ಕರ್ಮಗಳ ಪ್ರಕಾರ ಒಬ್ಬನು ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಎಂದು ಹೇಳಲಾಗುತ್ತದೆ. ಗರುಡ ಪುರಾಣವು ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ವಿವರಿಸುವ ಒಂದು ಪಠ್ಯವಾಗಿದೆ. ಅದರೊಂದಿಗೆ, ಒಬ್ಬ ವ್ಯಕ್ತಿಯು ತನ್ನ ಮರಣದ ಅನಂತರ ಯಾವ ನೋವುಗಳು ಮತ್ತು ಫಲಿತಾಂಶಗಳನ್ನು ಪಡೆಯಬೇಕು ಎಂಬುದರ ಕುರಿತು ಸಹ ವಿವರಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಒಬ್ಬ ವ್ಯಕ್ತಿ ಸತ್ತಾಗ ಅಂತ್ಯಕ್ರಿಯೆ ನಡೆಯುವವರೆಗೆ ಆತನ ದೇಹವನ್ನು ಒಂಟಿಯಾಗಿ ಇರಲು ಬಿಡುವುದಿಲ್ಲ.

ಸನಾತನ ಧರ್ಮದ ನಿಯಮದ ಪ್ರಕಾರ ವ್ಯಕ್ತಿಯನ್ನು ಸಾಯಂಕಾಲ ಅಥವಾ ರಾತ್ರಿ ಶವಸಂಸ್ಕಾರ ಮಾಡುವಂತಿಲ್ಲ. ಒಬ್ಬ ವ್ಯಕ್ತಿ ರಾತ್ರಿಯಲ್ಲಿ ಸತ್ತಾಗ, ವ್ಯಕ್ತಿಯ ಮೃತ ದೇಹವನ್ನು ರಾತ್ರಿಯಿಡೀ ಮನೆಯಲ್ಲಿ ಇಡಲಾಗುತ್ತದೆ. ಪಂಚಕಾಲದಲ್ಲಿ ಅಂದರೆ ಧನಿಷ್ಠ, ಶತಭಿಷ, ಪೂರ್ವಭಾದ್ರ, ಉತ್ತರಾಭಾದ್ರ ನಕ್ಷತ್ರಗಳಲ್ಲಿ ವ್ಯಕ್ತಿ ಸತ್ತರೆ ಪಂಚಕ ವಿಧಿಯನ್ನು ನಡೆಸಿಯೇ ಮೃತ ವ್ಯಕ್ತಿಯ ದೇಹವನ್ನು ಸುಡಬೇಕಾಗುತ್ತದೆ.

ಒಬ್ಬ ವ್ಯಕ್ತಿ ಸತ್ತಾಗ ಆತನ ಮಕ್ಕಳು ಹತ್ತಿರದಲ್ಲಿಲ್ಲದಿದ್ದರೆ ಅವರು ಬರುವವರೆಗೂ ಶವವನ್ನು ಮನೆಯಲ್ಲಿ ಇಡಲಾಗುತ್ತದೆ. ಆದರೆ ಯಾವುದೇ ಸಂದರ್ಭಗಳಲ್ಲಿ ಮೃತ ದೇಹವನ್ನು ಮಾತ್ರ ಒಂಟಿಯಾಗಿ ಬಿಡುವುದಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಗರುಡ ಪುರಾಣದಲ್ಲಿ ವಿವರವಾಗಿ ವಿವರಿಸುತ್ತದೆ.

ಮೃತ ದೇಹವನ್ನು ಏಕಾಂಗಿಯಾಗಿ ಏಕೆ ಬಿಡುವುದಿಲ್ಲ?

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಸತ್ತ ವ್ಯಕ್ತಿಯ ದೇಹದ ಸುತ್ತಲೂ ದುಷ್ಟಶಕ್ತಿಗಳು ಸುತ್ತಾಡುತ್ತಲೇ ಇರುತ್ತವೆ. ಮೃತ ದೇಹವನ್ನು ಏಕಾಂಗಿಯಾಗಿ ಬಿಟ್ಟರೆ ಸತ್ತ ವ್ಯಕ್ತಿಯ ದೇಹವನ್ನು ದುಷ್ಟಶಕ್ತಿಗಳು ಪ್ರವೇಶಿಸಬಹುದು ಎಂದು ನಂಬಲಾಗಿದೆ.

ಮೃತದೇಹವನ್ನು ಮಾತ್ರ ಬಿಟ್ಟು ಹೋಗುವುದು ಅಪಾಯಕಾರಿ ಎನ್ನಲಾಗುತ್ತದೆ. ಕುಟುಂಬ ಸದಸ್ಯರಿಗೆ ಕೆಟ್ಟದನ್ನು ಉಂಟು ಮಾಡಬಹುದು ಎನ್ನಲಾಗುತ್ತದೆ. ಆದ್ದರಿಂದ, ಸತ್ತ ವ್ಯಕ್ತಿಯ ಮೃತ ದೇಹವನ್ನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ.


ಎರಡನೆಯದಾಗಿ ಸತ್ತ ವ್ಯಕ್ತಿಯ ದೇಹವನ್ನು ಏಕಾಂಗಿಯಾಗಿ ಬಿಟ್ಟರೆ ಕೆಂಪು ಇರುವೆಗಳು ಅಥವಾ ಪ್ರಾಣಿಗಳಂತಹ ಹತ್ತಿರದ ನರಭಕ್ಷಕ ಜೀವಿಗಳು ದೇಹವನ್ನು ಹಾನಿಗೊಳಿಸಬಹುದು ಎಂಬುದೂ ಒಂದು ಕಾರಣವಾಗಿದೆ. ಆದ್ದರಿಂದ ಸತ್ತ ವ್ಯಕ್ತಿಯ ದೇಹವನ್ನು ಸುಡುವವರೆಗೆ ಅದನ್ನು ಸುಮ್ಮನೆ ಬಿಡುವುದಿಲ್ಲ. ಒಂಟಿಯಾಗಿ ಬಿಟ್ಟರೆ ಸತ್ತ ಆತ್ಮವೂ ಯಮಲೋಕಕ್ಕೆ ಹೋಗುವ ದಾರಿಯಲ್ಲಿ ಹಿಂಸೆಗಳನ್ನು ಅನುಭವಿಸಬೇಕಾಗುತ್ತದೆ ಎನ್ನಲಾಗುತ್ತದೆ.

ಇದಲ್ಲದೇ ಮೃತದೇಹವನ್ನು ಸುದೀರ್ಘ ಕಾಲ ಒಂಟಿಯಾಗಿ ಬಿಟ್ಟರೆ ದುರ್ವಾಸನೆ ಬರಲಾರಂಭಿಸುತ್ತದೆ ಎನ್ನುವುದೂ ಒಂದು ಕಾರಣವಾಗಿದೆ. ಹಾಗಾಗಿ ಯಾರಾದರೂ ಅಲ್ಲಿ ಕುಳಿತುಕೊಂಡು ಮೃತದೇಹದ ಸುತ್ತಲೂ ಅಗರಬತ್ತಿಗಳನ್ನು ಉರಿಸಬೇಕು. ಇದರಿಂದ ಮೃತದೇಹದಿಂದ ಬರುವ ದುರ್ವಾಸನೆಯು ಸುತ್ತಲೂ ಹರಡುವುದಿಲ್ಲ.

ಇದನ್ನೂ ಓದಿ: Vastu Tips: ಮನೆಯ ಯಾವ ಕೋಣೆಗೆ ಯಾವ ಬಣ್ಣ ಇದ್ದರೆ ನೆಮ್ಮದಿ ಸಿಗುತ್ತದೆ? ವಾಸ್ತು ಸಲಹೆ ಹೀಗಿದೆ

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಮೃತ ವ್ಯಕ್ತಿಯ ಆತ್ಮವು ಅಂತ್ಯಕ್ರಿಯೆ ನಡೆಯುವವರೆಗೆ ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತದೆ. ಕುಟುಂಬ ಸದಸ್ಯರು ಮೃತದೇಹವನ್ನು ಬಿಟ್ಟು ಹೋದರೆ ಸತ್ತ ವ್ಯಕ್ತಿಯ ಆತ್ಮವು ಪರಿತ್ಯಕ್ತಗೊಂಡಾಗ ದುಃಖಿತ ಆಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಮೃತ ದೇಹವನ್ನು ಎಂದಿಗೂ ಒಂಟಿಯಾಗಿ ಬಿಡಬಾರದು.

ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ ಅನಂತರ ಯಾರಾದರೂ ಸತ್ತರೆ ಅವರ ದೇಹವನ್ನು ರಾತ್ರಿಯಿಡೀ ಮನೆಯಲ್ಲಿ ಇರಿಸಲಾಗುತ್ತದೆ ಮತ್ತು ಮರುದಿನ ಅವರ ಅಂತ್ಯಕ್ರಿಯೆಯನ್ನು ಮಾಡಲಾಗುತ್ತದೆ. ರಾತ್ರಿ ವೇಳೆ ಶವ ಸಂಸ್ಕಾರ ಮಾಡಿದರೆ ಮೋಕ್ಷ ಸಿಗುವುದಿಲ್ಲ ಎಂಬುದು ಇದರ ಹಿಂದಿನ ನಂಬಿಕೆ. ಹೀಗೆ ಮಾಡಿದರೆ ಅಂತಹ ಆತ್ಮವು ರಾಕ್ಷಸ, ದೆವ್ವ ಅಥವಾ ಪಿಶಾಚಿಯ ಗರ್ಭದ ಮೂಲಕ ಜನಿಸುತ್ತದೆ ಎಂಬ ಉಲ್ಲೇಖ ಗರುಡ ಪುರಾಣದಲ್ಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version