ಹಾವೇರಿ: ಚಾಕುವಿನಿಂದ ಇರಿದು ಪತ್ನಿಯನ್ನು ಪತಿ ಕೊಲೆ (Murder case) ಮಾಡಿದ್ದಾನೆ. ಕೌಟುಂಬಿಕ ಕಲಹದ ಪರಿಣಾಮ ಈ ಹತ್ಯೆ ನಡೆದಿದೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹೂಲಿಹಳ್ಳಿ ಗ್ರಾಮದಲ್ಲಿ ಕೃತ್ಯ ನಡೆದಿದೆ. ಪವಿತ್ರಾ ಹಳ್ಳೇರ (22) ಕೊಲೆಯಾದ ಮಹಿಳೆ. ರೇವಣ್ಣೆಪ್ಪ ಹಳ್ಳೇರ ಕೊಲೆ ಮಾಡಿದ ಪಾಪಿ ಪತಿ. ಹಲವು ಕಾಲದಿಂದ ಇವರ ನಡುವೆ ಕೌಟುಂಬಿಕ ಕಲಹವಿದ್ದು, ಅದು ಉಲ್ಬಣಿಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ರೇವಣ್ಣೆಪ್ಪ ಚಾಕುವಿಂದ ಪತ್ನಿಯನ್ನು ಇರಿದಿದ್ದಾನೆ. ಇರಿತಕ್ಕೆ ಒಳಗಾದ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಮಗನ ಸಾಲಕ್ಕಾಗಿ ತಂದೆಯನ್ನು ಕೊಂದವರಿಗೆ ಶಿಕ್ಷೆ
ಬೆಳಗಾವಿ: ಮಗ ಮಾಡಿದ್ದ 700 ರೂ. ಸಾಲದ ವಿಚಾರವಾಗಿ ತಂದೆಯನ್ನು ಕೊಂದಿದ್ದ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಗೋಕಾಕಿನ 12ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಗೋಕಾಕ ತಾಲೂಕಿನ ಮರಡಿಮಠ ಗ್ರಾಮದಲ್ಲಿ ಘಟನೆ ನಡೆದಿತ್ತು. ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ನಾಲ್ವರಿಗೆ ಶಿಕ್ಷೆ ಪ್ರಕಟವಾಗಿದೆ. 700 ರೂ. ಸಾಲ ಪಡೆದ ವಿಚಾರಕ್ಕೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಮುಕ್ತಯವಾಗಿತ್ತು. ಮಾನಿಂಗ್ ಗಾಯಕವಾಡ (41) ಕೊಲೆಯಾಗಿದ್ದ ವ್ಯಕ್ತಿ. ಮಾನಿಂಗ್ ಮಗ ಹಣಮಂತ ಗಾಯಕವಾಡ 700 ರೂ. ಸಾಲ ಮಾಡಿದ್ದ.
ತನ್ನ ಮನೆಯ ಪಕ್ಕದ ರಾಜು ಶಂಕರ್ ಭಜಂತ್ರಿ ಬಳಿ ಮೃತ ಮಾನಿಂಗ ಮಗ ಹಣಮಂತ 700 ರೂ. ಸಾಲ ಮಾಡಿದ್ದ. ಇದೇ ಸಾಲದ ವಿಚಾರವಾಗಿ ಹತ್ತಿಕೊಂಡಿದ್ದ ಜಗಳ ಮಾನಿಂಗ ಕೊಲೆಯಲ್ಲಿ ಅಂತ್ಯವಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಕೊಲೆ ನಡೆದಿತ್ತು. ಕೊಲೆ ಮಾಡಿದ್ದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ರಾಜು ಶಂಕರ್ ಭಜಂತ್ರಿ, ಗೀತಾ ರಾಜು ಭಜಂತ್ರಿ ಸೇರಿ ನಾಲ್ವರಿಗೆ ಶಿಕ್ಷೆ ಪ್ರಕಟವಾಗಿದೆ. ಐಪಿಸಿ ಸೆಕ್ಷನ್ 304ರ ಪ್ರಕಾರ 9 ವರ್ಷ ಜೈಲು ಹಾಗೂ 50 ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಅಭಿಯೋಜಕ ಸುನೀಲ ಹಂಜಿ ಸರ್ಕಾರದ ಪರ ವಕಾಲತ್ತು ವಹಿಸಿದ್ದರು.
ಇದನ್ನೂ ಓದಿ: Manual Scavenging: ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ; ಕೊಲೆ ಯತ್ನ ಕೇಸ್ ಹಾಕಿ ಎಂದ SC ಆಯೋಗದ ಸದಸ್ಯೆ