ಬೆಳಗಾವಿ: ಪರಸ್ತ್ರೀಯನ್ನು ಒಲಿಸಿಕೊಳ್ಳಲು ಕಿರಾತಕನೊಬ್ಬ ಆಕೆಯ ಗಂಡನಿಗೆ ಚಟ್ಟ ಕಟ್ಟಿದ್ದಾನೆ. ಪಾರ್ಟಿ ಮಾಡೋಣ ಬಾ ಎಂದು ಕರೆದಿದ್ದಾನೆ. ಬಳಿಕ ನಶೆಯಲ್ಲಿದ್ದಾಗಲೇ ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರುಗಟ್ಟಿಸಿ ಕೊಲೆ (Murder Case) ಮಾಡಿ ಪರಾರಿ ಆಗಿದ್ದಾನೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ಕಾಡಪ್ಪ ಶಿಗರಸಂಗಿ (42) ಕೊಲೆಯಾದ ದುರ್ದೈವಿ. ನಾಗಪ್ಪ ರೈನಾಪುರ ಎಂಬಾತ ಕೊಲ್ಲಲ್ಲು ಸುಪಾರಿ ಕೊಟ್ಟವನು. ಕೊಲೆಯಾದ ಕಾಡಪ್ಪನ ಪತ್ನಿಯ ಮೇಲೆ ಕಣ್ಣು ಹಾಕಿದ ನಾಗಪ್ಪ ಆಕೆಯನ್ನು ವ್ಯಾಮೋಹಿಸಿದ್ದ. ಹೀಗಾಗಿ ಕಾಡಪ್ಪನನ್ನು ಕೊಲ್ಲಲು 2.5 ಲಕ್ಷ ರೂ. ಸುಪಾರಿ ಕೊಟ್ಟಿದ್ದ.
ಕೊಲೆ ಮಾಡಲು ವ್ಯವಸ್ಥಿತ ಪ್ರೀ ಪ್ಲಾನ್ ಮಾಡಿದ್ದ ನಾಗಪ್ಪ, ಸುಪಾರಿ ಕೊಟ್ಟ ಆರೋಪಿ ಲಕ್ಷ್ಮಣ ಜತೆ ಕಡೆಯದಾಗಿ ಬೆನಕಟ್ಟಿಯ ಪೆಟ್ರೋಲ್ ಪಂಪ್ ಒಂದರಲ್ಲಿ ಕಾಣಿಸಿಕೊಂಡಿದ್ದ. ಇವರಿಬ್ಬರ ಚಲನವಲನ ಅಲ್ಲಿನ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮೊದಲು ಲಕ್ಷ್ಮಣನನ್ನು ಸೆರೆಹಿಡಿದ ಪೊಲೀಸರು ವಿಚಾರಣೆ ನಡೆಸಿದಾಗ, ಕೊಲೆಯ ಸಂಪೂರ್ಣ ಸಂಚು ಬಯಲಾಗಿದೆ. ಸದ್ಯ ಐವರು ಆರೋಪಿಗಳ ಪೈಕಿ ಲಕ್ಷ್ಮಣ ವಿಠ್ಠಲ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ನಾಗಪ್ಪ, ಶಿವಾನಂದ ಬಸವರಾಜ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Bengaluru Police: ಸಿಟಿ ಸಿವಿಲ್ ಕೋರ್ಟ್‌ನಿಂದ ಕೊಲೆ ಆರೋಪಿ ಎಸ್ಕೇಪ್! ಸಿನಿಮಾ ಸ್ಟೈಲ್‌ನಲ್ಲಿ ಚೇಸ್ ಮಾಡಿದ ಖಾಕಿ
ಚೂರಿ ಹಿಡಿದು ಮ್ಯಾನೇಜರ್‌ನನ್ನು ಅಟ್ಟಾಡಿಸಿದ ಸೆಕ್ಯೂರಿಟಿ ಗಾರ್ಡ್!
ಸೆಕ್ಯೂರಿಟಿ ಗಾರ್ಡ್‌ನಿಂದ ಶೋರೂಂ ಕ್ಲಸ್ಟರ್ ಮ್ಯಾನೇಜರ್ ಚೂರಿಯಿಂದ ಇರಿದು ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಚೂರಿಯಿಂದ ಇರಿದ ದೃಶ್ಯ ವಿಸ್ತಾರ ನ್ಯೂಶ್‌ಗೆ ಲಭ್ಯವಾಗಿದೆ. ಉಡುಪಿಯ ಹರ್ಷ ಶೋರೂಂನಲ್ಲಿ ಘಟನೆ ನಡೆದಿದೆ.
ಹರ್ಷ ಶೋರೂಂನಲ್ಲಿ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಎವರೆಸ್ಟ್ (36) ಇರಿತಕ್ಕೊಳಗಾದವರು. ಅಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸಾದ್ ಹಲ್ಲೆ ನಡೆಸಿದವನು. ಪ್ರಸಾದ್ ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ರೋನ್ಸನ್ ವಾರ್ನಿಂಗ್ ನೀಡಿದ್ದರು. ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಪ್ರಸಾದ್ ಕೇಳಿಕೊಂಡಿದ್ದ. ಮರುದಿನ ಮೀಟಿಂಗ್‌ನಲ್ಲಿ ಚರ್ಚಿಸುವುದಾಗಿ ರೋನ್ಸನ್ ಹೇಳಿದ್ದರು.
ಆಗಸ್ಟ್ 10 ರ ಸಂಜೆ 7.30ರಂದು ಮಾತುಕತೆ ಬಳಿಕ ಗ್ರೌಂಡ್ ಫ್ಲೋರ್‌ನಲ್ಲಿ ಕಾದು ಕುಳಿತಿದ್ದ ಆರೋಪಿ ಪ್ರಸಾದ್ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಬರುತ್ತಿದ್ದಂತೆ ಚೂರಿಯಲ್ಲಿ ಇರಿದಿದ್ದ. ಕೂಡಲೇ ಈತನಿಂದ ತಪ್ಪಿಸಿಕೊಂಡು ರೋನ್ಸನ್ ಓಡಿದ್ದರು. ಆದರೂ ಬಿಡದೇ ಪ್ರಸಾದ್ ಬೆನ್ನಟ್ಟಿ ಹೋಗಿ ಕೊಲೆಗೆ ಯತ್ನಿಸಿದ್ದಾನೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ