Site icon Vistara News

Murder Case : ತಾಯಿಯನ್ನು ಚುಡಾಯಿಸಿದವನ ಮನೆಗೆ ನುಗ್ಗಿ ಹೊಡೆದು ಕೊಂದ ಮಗ

Son kills youth for teasing mother

ಬೆಳಗಾವಿ: ತಾಯಿಯನ್ನು ಚುಡಾಯಿಸಿದ್ದಕ್ಕೆ (teasing) ಸಿಟ್ಟಾದ ಮಗನೊಬ್ಬ, ಯುವಕನ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿ (Murder Case) ಆಗಿದ್ದಾನೆ. ಬೆಳಗಾವಿ ನಗರದ ತೆಲಗು ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗಣೇಶ ಕಾಂಬಳೆ (25) ಕೊಲೆಯಾದವನು. ತರುಣ್ ನಾಯ್ಕ ಆರೋಪಿಯಾಗಿದ್ದಾನೆ.

ತರುಣ್‌ ನಾಯ್ಕ ತಾಯಿಯನ್ನು ಗಣೇಶ ಕಾಂಬಳೆ ಚುಡಾಯಿಸಿದ್ದ. ಈ ವಿಷಯ ತಿಳಿದು ಸಿಟ್ಟಾದ ತರುಣ್‌ ಕೈಯಲ್ಲಿ ದೊಣ್ಣೆ ಹಿಡಿದು ಗಣೇಶನ ಮನೆಗೆ ನುಗ್ಗಿದ್ದ. ದೊಣ್ಣೆಯಿಂದ ಗಣೇಶನ ತಲೆಗೆ ಬಡಿದು ತೀವ್ರವಾಗಿ ಹಲ್ಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಗಣೀಶ ಸ್ಥಳದಲ್ಲೇ ಮೃತಪಟ್ಟಿದ್ದ.

ಇದನ್ನೂ ಓದಿ: Bengaluru News : ಮುಟ್ಟಾಗಿದೆ, ಹೊಟ್ಟೆನೋವು ಅಂದ್ರೂ ಡಿಪೋ ಮ್ಯಾನೇಜರ್‌ ಬಿಡ್ತಿಲ್ಲ ಎಂದು ಅತ್ತ ಕೆಎಸ್‌ಆರ್‌ಟಿಸಿ ಕಂಡಕ್ಟರ್‌

ಗಣೇಶ ಮೃತಪಟ್ಟ ನಂತರ ತರುಣ್ ನಾಯ್ಕ ಘಟನಾ ಸ್ಥಳದಿಂದ ಪರಾರಿ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಣೇಶ ಕಾಂಬಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಕೊಲೆ ನಡೆದು 12 ಗಂಟೆಯಲ್ಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ತರುಣ್‌ಗೆ ಸಹಾಯ ಮಾಡಿದ ಓರ್ವ ಬಾಲಾಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತುರಣ್ ನಾಯ್ಕನ ತಾಯಿಯನ್ನು ಗಣೇಶ ಕಾಡಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಮನಗೆ‌ ನುಗ್ಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ತಲೆ ಮರೆಸಿಕೊಂಡಿದ್ದ ತರುಣ್ ನಾಯ್ಕ ಬಂಧಿಸಿರುವ ಬೆಳಗಾವಿಯ ಪ್ಯಾಂಪ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version