Site icon Vistara News

New year Celebration : ಹೊಸ ವರ್ಷದ ಪಾರ್ಟಿಗೆ ಹೋಗಲು ಬಿಡದ್ದಕ್ಕೆ ಬೇಸರ; ಯುವಕ ಆತ್ಮಹತ್ಯೆ!

New year celebration suicide

ಬೆಳಗಾವಿ: ಬೆಂಗಳೂರಿನಲ್ಲಿ ಯುವತಿಯೊಬ್ಬಳು ಹೊಸ ವರ್ಷದ ಪಾರ್ಟಿಗೆ (New year Celebration) ಹೋಗಲು ಅವಕಾಶ ನೀಡದ್ದಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ (Suicide Case) ಅತ್ತ ಬೆಳಗಾವಿಯಲ್ಲಿ ಯುವಕನೊಬ್ಬ ಕೂಡಾ ಇದೇ ಕಾರಣಕ್ಕೆ ಮನ ನೊಂದು ಪ್ರಾಣ ಕಳೆದುಕೊಂಡಿದ್ದಾನೆ (Self Harming).

ಬೆಳಗಾವಿ ಹೊರವಲಯದ ‌ಕಣಬರ್ಗಿ ಗ್ರಾಮದಲ್ಲಿ ‌ವಿಚಿತ್ರ ಘಟನೆ ನಡೆದಿದ್ದು, ಸಿದ್ದರಾಯ ಶಿಗಿಹಳ್ಳಿ (24) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ.

ಸಿದ್ದರಾಯ ಸ್ನೇಹಿತರ ಜೊತೆಗೆ ಹೊಸ ವರ್ಷದ ಪಾರ್ಟಿ ಮಾಡಲು ಯೋಜನೆ ರೂಪಿಸಿದ್ದ. ಆದರೆ, ಪಾರ್ಟಿ ಬೇಡ, ಮನೆಯಲ್ಲಿರು ಎಂದು ಕುಟುಂಬಸ್ಥರು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: New year Celebration : ಚಂದದ ಹುಡುಗಿ ಫುಲ್‌ ಟೈಟ್; ರಸ್ತೆಯಲ್ಲೇ ಬಿದ್ದು ಹೊರಳಾಡಿದ ಸುಂದರಿ‌

ವರ್ಷದ ಮೊದಲ ದಿನವೇ ಬಿಬಿಎ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಬೆಂಗಳೂರು: ಹೊಸ ವರ್ಷ (New Year Celebration) ಎಂದರೆ ಎಲ್ಲರೂ ಹೊಸ ಹೊಸ ಕನಸುಗಳನ್ನು ಹೊತ್ತು ಹೊಸ ಬದುಕಿಗೆ ಅಡಿ ಇಡುವ ದಿನ. ಆದರೆ‌ ಇಲ್ಲೊಬ್ಬಳು ಹುಡುಗಿ ತನ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಳ್ಳುವ ಮೂಲಕ ತನ್ನ ಎಲ್ಲ ಕನಸುಗಳನ್ನು ಕೊಂದು ಹಾಕಿದ್ದಾಳೆ.

ಬೆಂಗಳೂರಿನ ಸುಧಾಮ ನಗರದಲ್ಲಿ (Bangalore News) ಈ ಘಟನೆ ನಡೆದಿದ್ದು, ವರ್ಷಿಣಿ (21) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಈಕೆ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ ಯುವತಿ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಭಾನುವಾರ ರಾತ್ರಿ ಗೆಳತಿಯರ ಜತೆ ಹೊಸ ವರ್ಷದ ಪಾರ್ಟಿಗೆ ಹೋಗುತ್ತೇನೆ ಎಂದು ಹೇಳಿದ್ದಳು. ಆದರೆ, ಮನೆಯವರು ಬೇಡ ಎಂದಿದ್ದರು. ಇದರಿಂದ ನೊಂದ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version