ಬೆಳಗಾವಿ: ರಾಜ್ಯ ರಾಜಕಾರಣವನ್ನು ಒಬ್ಬರ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಹಾಳು ಮಾಡುತ್ತಿದ್ದಾರೆ ಎಂದು ಆರೋಫಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ(Ramesh Jarkiholi), ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗಿನ ಸಂದರ್ಭವನ್ನು ಸುದ್ದಿಗೋಷ್ಠಿಯಲ್ಲಿ ನೆನೆದ ರಮೇಶ್ ಜಾರಕಿಹೊಳಿ, ಇಬ್ಬರೂ ಕಾಂಗ್ರೆಸ್‌ನಲ್ಲಿ ಇದ್ದಾಗ ಬಹಳ ಒಳ್ಳೆಯ ಸ್ನೇಹಿತರಾಗಿದ್ದೆವು. ಡಿ.ಕೆ. ಶಿವಕುಮಾರ್‌ಗೆ ಅನಾರೋಗ್ಯವಾಗಿದ್ದಾಗ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದೆ. ಆಗ ಡಿ.ಕೆ. ಶಿವಕುಮಾರ್ ಧರ್ಮ ಪತ್ನಿ ಉಷಾ ಡಿ.ಕೆ. ಶಿವಕುಮಾರ್ ಅವರು ಬಂದು ಮಾತನಾಡಿಸಿದರು. ಅಣ್ಣಾ ನೀವಿಬ್ಬರೂ ಒಳ್ಳೆಯ ಸ್ನೇಹಿತರು, ಮೂರನೆಯವರ ಕಾರಣಕ್ಕೆ ದಯವಿಟ್ಟು ಪಕ್ಷವನ್ನು ಬಿಡಬೇಡಿ ಎಂದು ಮನವಿ ಮಾಡಿದರು. ಆದರೆ, ನಿನ್ನ ಗಂಡ ಬಹಳ ಕೆಟ್ಟವನಿದ್ದಾನೆ. ನಾನು ಪಕ್ಷ ಬಿಡುತ್ತೇನೆ ಎಂದು ಹೇಳಿದೆ. ಗ್ರಾಮೀಣ ಶಾಸಕಿ ಸಂಬಂಧ ಇಡೀ ರಾಜ್ಯ ಹಾಳಾಗಿದೆ. ವಿಷಕನ್ಯೆಗಾಗಿ ಡಿ.ಕೆ. ಶಿವಕುಮಾರ್ ಇಡೀ ರಾಜ್ಯಕ್ಕೆ ಮೋಸ ಮಾಡಿದ್ದಾರೆ ಎಂದರು.
ಇದನ್ನೂ ಓದಿ : Karnataka Election | ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಬಳಿಕ ಈಗ ಆಣೆ ಪ್ರಮಾಣ ರಾಜಕೀಯ!
ಹೆಬ್ಬಾಳ್ಕರ್‌ಗೆ ಟಿಕೆಟ್ ಕೊಡಲ್ಲ ಎಂದು ಡಿಕೆಶಿ ಹೇಳಿದ್ರು. ನಾನೇ ಒತ್ತಾಯ ಮಾಡಿ ಟಿಕೆಟ್ ಕೊಡಿಸಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಿಂದ ರಾಜ್ಯ ಹಾಳಾಗಿದೆ. ಮುಂದೆಯೂ ಹಾಳು ಆಗುತ್ತದೆ. ಜಾತಿ ಸಂಘರ್ಷ ಆದ್ರೆ ಡಿಕೆಶಿ- ಲಕ್ಷ್ಮಿ ಹೆಬ್ಬಾಳ್ಕರ್ ಕಾರಣ ಎಂದರು.