ಬೆಳಗಾವಿ: ಬೈಕ್‌ಗೆ ಟಾಟಾ ಏಸ್ ಡಿಕ್ಕಿ ಹೊಡೆದ (Road Accident) ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಿಣಿ ಟೋಲ್ ಬಳಿ ಘಟನೆ ನಡೆದಿದೆ. ನಿಪ್ಪಾಣಿ ಮಾಹಾಲಿಂಗಪುರ ರಾಜ್ಯ ಹೆದ್ದಾರಿಯಲ್ಲಿ ಟಾಟಾ ಏಸ್ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾರೆ.
ಅಪಘಾತವಾಗುತ್ತಿದ್ದಂತೆ ಚಾಲಕ ಟಾಟಾ ಏಸ್ ವಾಹನದೊಂದಿಗೆ ಪರಾರಿ ಆಗಿದ್ದಾನೆ. ಅಪಘಾತದಲ್ಲಿ ಮಹಾದೇವಿ ಶಿರಗುಪ್ಪಿ (೫೪) ಮೃತಪಟ್ಟರೆ, ಮಗ ಮಹಾಂತೇಶ ಶಿರಗುಪ್ಪಿ (೨೯) ಗಂಭೀರ ಗಾಯಗೊಂಡಿದ್ದಾರೆ. ಸಿಸಿಟಿವಿಯಲ್ಲಿ ವಾಹನ ವಿಡಿಯೊ ಆಧರಿಸಿದ ಚಿಕ್ಕೋಡಿ ಪೊಲೀಸರು ವಾಹನಕ್ಕೆ ಹುಡುಕಾಟ ನಡೆಸಿದ್ದಾರೆ. ತಾಯಿ ಮಗ ಬೈಕ್‌ನಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಮತ್ತು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿ ಆಗಿರುವ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Bike Wheeling: ಹೈವೇಯಲ್ಲಿ ಭಯಾನಕ ವ್ಹೀಲಿಂಗ್ ಜತೆಗೆ ಯುವತಿಗೆ ಕೀಟಲೆ ಮಾಡಿದ ಪುಂಡರು
ಮೈಸೂರಿನಲ್ಲಿ ತಿರುವಿನಲ್ಲಿ ಕಂದಕಕ್ಕೆ ಉರುಳಿದ ಬಸ್
ಮೈಸೂರು: ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು ಸಾರಿಗೆ ಬಸ್‌ವೊಂದು ಕಂದಕಕ್ಕೆ (Road Accident ) ಉರುಳಿದೆ. ಚಾಲಕ ಸೇರಿ ಮೂವರು ಗಂಭೀರ ಗಾಯಗೊಂಡಿದ್ದು, ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನ ನಂಜನಗೂಡಿನ ತಾಲೂಕಿನ ಮರಡಿಹುಂಡಿ ಗ್ರಾಮದ ಸಮೀಪ ಅಪಘಾತ ನಡೆದಿದೆ.
ಬಿಳುಗಲಿ ಗ್ರಾಮದಿಂದ ಎಸ್.ಹೊಸಕೋಟೆ ಮಾರ್ಗವಾಗಿ ಬಸ್ ಮೈಸೂರಿಗೆ ತೆರಳುತ್ತಿತ್ತು. ವೇಗವಾಗಿ ಬಂದು ತಿರುವು ಪಡೆದುಕೊಳ್ಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಸ್ ಪಲ್ಟಿ ಹೊಡೆದಿದೆ. ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ವರುಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಕ್ಕೆ ಬಿದ್ದ ಬಸ್ ಅನ್ನು ತೆರವು ಮಾಡಲಾಗಿದೆ.
ಡಿವೈಡರ್‌ಗೆ ಕಾರು ಡಿಕ್ಕಿ ಇಬ್ಬರು ಸಾವು
ವಿಜಯನಗರ: ಕೂಡ್ಲಿಗಿಯ ಎನ್‌ಎಚ್ 50 (NH 50) ರಸ್ತೆ ಮೃತ್ಯಕೂಪವಾಗಿ ಪರಿಣಮಿಸುತ್ತಿದೆ. ಈ ರಸ್ತೆ ಪದೇ ಪದೆ ಅಪಘಾತಗಳಿಂದ ಸದ್ದು ಮಾಡುತ್ತಿದೆ. ಇದೀಗ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ (Road Accident).
ಇತ್ತೀಚೆಗೆ ಕೂಡ್ಲಿಗಿಯ ಎನ್‌ಎಚ್ 50ರಲ್ಲಿ ಟಿಟಿ ಟ್ರಾವೆಲರ್ ಅಪಘಾತವಾಗಿ ಓರ್ವ ಮೃತಪಟ್ಟಿದ್ದರು. ಅದು ಮಾಸುವ ಮುನ್ನ ಈಗ ಮತ್ತೆ ಅದೇ ರೀತಿಯ ಅಪಫಾತ ನಡೆದು ಇಬ್ಬರನ್ನು ಬಲಿ ಪಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ ನಡೆದಿದ್ದು, ಮೃತರನ್ನು ಕಾರು ಚಾಲಕ ವಿನಯ್ (27) ಮತ್ತು ಚನ್ನವಸವ (27) ಎಂದು ಗುರುತಿಸಲಾಗಿದೆ.
ರಾಯಚೂರಿನ ಲಿಂಗಸೂಗೂರಿನಿಂದ ಕೇರಳದ ವಯನಾಡಿಗೆ ಹೊರಟಿದ್ದ ಗೆಳೆಯರ ತಂಡವಿದ್ದ ಕಾರು ಪಲ್ಟಿ ಹೊಡೆದು ಅವಘಡ ನಡೆದಿದೆ. ಅತೀ ವೇಗದಿಂದ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಗಾಯಗೊಂಡ 5 ಮಂದಿಯನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ