ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ (Shivaji Statue) ಆನಾವರಣ ಕಾರ್ಯಕ್ರಮ ನಡೆದಿದ್ದರೂ ಮತ್ತೊಮ್ಮೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಲೋಕಾರ್ಪಣೆ ಮಾಡುತ್ತಿರುವುದರ ಕುರಿತು ಸಚಿವ ಗೋವಿಂದ ಕಾರಜೋಳ ಆಕ್ರೋಶ ಹೊರಹಾಕಿದ್ದಾರೆ.
ರಾಜಹಂಸಘಡದಲ್ಲಿ ಇತ್ತೀಚೆಗೆ ಶಿವಾಜಿ ಪ್ರತಿಮೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು. ಈ ಸಮಾರಂಭಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅನುಪಸ್ಥಿತರಾಗಿದ್ದರು. ಇದೀಗ ಮತ್ತೊಮ್ಮೆ ಭರ್ಜರಿ ಕಾರ್ಯಕ್ರಮದಲ್ಲಿ ಉದ್ಘಾಟನೆ ನಡೆಸುತ್ತಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕಾರಜೋಳ ಮಾತನಾಡಿದ್ದಾರೆ.
ಸರ್ಕಾರದಿಂದ ಒಂದು ಸಲ ಉದ್ಘಾಟನೆ ಆದ ನಂತರ ಅದಕ್ಕೇನು ಮಹತ್ವ ಇರುತ್ತೆ? ನಾವು ರಾಜಹಂಸಘಡದ ಕೋಟೆಯನ್ನೂ ಸಹ ಸಂಪೂರ್ಣ ಅಭಿವೃದ್ದಿ ಕೆಲಸ ಮಾಡಿದ್ದೆವೆ. ಕಾಂಗ್ರೆಸ್‌ನವರಿಗೆ ಇಲ್ಲೊಂದು ರಾಜಹಂಸಘಡ ಇದೆ ಎನ್ನುವುದಾದರೂ ನೆನಪಿತ್ತಾ,? 2010ರಲ್ಲಿ ನಾನು ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿ ಇದ್ದೆ, ನಾನೇ ಆಗ 50 ಲಕ್ಷ ರೂ. ಮಂಜೂರು ಮಾಡಿದ್ದೆ.
ಶಿವಾಜಿ ಮಹಾರಾಜರ ಜಯಂತಿಯನ್ನು 2012ರಲ್ಲಿ ನಾನೇ ಆದೇಶ ಮಾಡಿದ್ದೆ. ಶಿವಾಜಿ ಮಹಾರಾಜರ ಜಯಂತಿ ಆದೇಶ ಮಾಡಬೇಕು ಎಂದು 60ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್‌ಗೆ ಗೊತ್ತಿರಲಿಲ್ಲ. ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ ಬಂದು ಉದ್ಘಾಟನೆ ಮಾಡಿದ್ರು, ಅಂದು ಲಕ್ಷ್ಮೀ ಹೆಬ್ಬಾಳಕರ್ ಬಂದು ಭಾಗವಹಿಸಬೇಕಿತ್ತು.
ಇದನ್ನೂ ಓದಿ: Shivaji statue : ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಹೆಚ್ಚುವರಿ 5 ಕೋಟಿ ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪ್ರತ್ಯೇಕವಾಗಿ ಲೋಕಾರ್ಪಣೆ ಮಾಡುವುದು ಸಮಂಜಸ ಅಲ್ಲ ಮತ್ತು ಇದೊಂದು ನೀತಿಗೆಟ್ಟ ಕೆಲಸ. ಸರ್ಕಾದದ ಕಾರ್ಯಕ್ರಮ ಉದ್ಘಾಟನೆ ಆದ ಬಳಿಕ ಮುಂದೆ ಉದ್ಘಾಟನೆ ಮಾಡಿದ್ರೂ ಸಹ ಅದಕ್ಕೆ ಕವಡೆ ಕಿಮ್ಮತ್ತು ಇರೊಲ್ಲ ಎಂದಿದ್ದಾರೆ.