Site icon Vistara News

ಬೆಳಗಾವಿಯಲ್ಲಿ ಟೆಕ್ನಿಕಾ ಇಂಡಸ್ಟ್ರೀಸ್‌ ಹೊಸ ಪ್ರೊಡಕ್ಷನ್ ಯೂನಿಟ್, ನೂತನ ಲೋಗೊ, ಪ್ರೀಮಿಯಂ ಸೀಲಿಂಗ್ ಫ್ಯಾನ್ ಲೋಕಾರ್ಪಣೆ

ಟೆಕ್ನಿಕಾ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸ್ಥಾಪನೆಗೊಂಡು ಹೋಮ್ ಅಪ್ಲೈಯನ್ಸಸ್ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟೆಕ್ನಿಕಾ ಇಂಡಸ್ಟ್ರೀಸ್ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಬೆಳಗಾವಿಯ ಸಂಭಾಜಿ ನಗರದಲ್ಲಿ ಹೊಸದಾದ ಪ್ರೊಡಕ್ಷನ್ ಯೂನಿಟ್, ಟೆಕ್ನಿಕಾ ಇಂಡಸ್ಟ್ರೀಸ್ ನೂತನ ಲೋಗೊ ಹಾಗೂ ಟೆಕ್ನಿಕಾ ಪ್ರೀಮಿಯಂ ಸೀಲಿಂಗ್ ಫ್ಯಾನ್ ಅನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.

ಟೆಕ್ನಿಕಾ ಇಂಡಸ್ಟ್ರೀಸ್‌ನ ನೂತನ ಪ್ರೊಡಕ್ಷನ್ ಯೂನಿಟ್ ಉದ್ಘಾಟನೆ ಬಳಿಕ ಟೆಕ್ನಿಕಾ ಇಂಡಸ್ಟ್ರೀಸ್ ಹೊಸ ಲೋಗೋವನ್ನು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರ ಸಹೋದರ ಶೀತಲ್ ಪಾಟೀಲ್ ಅನಾವರಣಗೊಳಿಸಿದರು. ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆ ಸಾರಿಕಾ ಪಾಟೀಲ್ ಟೆಕ್ನಿಕಾ ಪ್ರೀಮಿಯಂ ಸೀಲಿಂಗ್ ಫ್ಯಾನ್ ಅನ್ನು ಅನಾವರಣಗೊಳಿಸಿದರು‌.

ಇದನ್ನೂ ಓದಿ | Appu Namana | ರಕ್ತದಾನ, ಅನ್ನದಾನ ಮಾಡಿ ʻಪುನೀತʼರಾದ ಅಭಿಮಾನಿಗಳು

ಟೆಕ್ನಿಕಾ ಇಂಡಸ್ಟ್ರೀಸ್ ಬೆಳಗಾವಿ ಡಿಸ್ಟ್ರಿಬ್ಯೂಟರ್ ಚಂದ್ರಕಾಂತ ರಾಜಮಾನೆ ಮಾತನಾಡಿ, ನಾನು ಕಳೆದ ಐದು ವರ್ಷಗಳಿಂದ ಟೆಕ್ನಿಕಾ ಇಂಡಸ್ಟ್ರೀಸ್ ಡಿಸ್ಟ್ರಿಬ್ಯೂಟರ್‌ ಆಗಿದ್ದು, ಟೆಕ್ನಿಕಾ ದಕ್ಷಿಣ ಭಾರತದಲ್ಲಿ ಒಂದು ಬ್ರ್ಯಾಂಡ್ ಆಗಿ ಬೆಳೆದಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯೆ ಶೀತಲ್ ಪಾಟೀಲ್ ಮಾತನಾಡಿ, ಟೆಕ್ನಿಕಾ ಇಂಡಸ್ಟ್ರೀಸ್ ತಾನು ಬೆಳೆಯುವುದಷ್ಟೇ ಅಲ್ಲದೇ ಜನರಿಗೆ ಉದ್ಯೋಗವಕಾಶ ಕಲ್ಪಿಸುತ್ತಿದ್ದು, ನನ್ನ ವಾರ್ಡ್‌ನ 200 ಜನ ಈ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸಂಸ್ಥೆ ಇನ್ನು ಉತ್ತುಂಗಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಟೆಕ್ನಿಕಾ ಇಂಡಸ್ಟ್ರೀಸ್ ಮಾಲೀಕ ಪ್ರಶಾಂತ ಕುಲಕರ್ಣಿ ಮಾತನಾಡಿ, ಸೀಲಿಂಗ್ ಫ್ಯಾನ್ ಉತ್ಪಾದನೆಗೆ ಹೊಸ ಘಟಕ ಆರಂಭಿಸಿದ್ದೇವೆ. ಗ್ರಾಹಕರೇ ನನ್ನ ದೇವರು. ನನ್ನ ವಿತರಕರು, ಕರ್ನಾಟಕದ ಜನತೆ ಬೆಂಬಲದಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ. ನಾವು ಸ್ಟೆಬ್ಲೈಝರ್, ಸೀಲಿಂಗ್ ಫ್ಯಾನ್, ಮಿಕ್ಸರ್ ಗ್ರೈಂಡರ್, ನಾನ್‌ಸ್ಟಿಕ್ ತವಾ ಸೇರಿ ವಿವಿಧ ಬಗೆಯ ಹೋಮ್ ಅಪ್ಲೈಯನ್ಸಸ್ ಉತ್ಪಾದನೆ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಉತ್ಪನ್ನಗಳ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಟೆಕ್ನಿಕಾ ಇಂಡಸ್ಟ್ರೀಸ್ ಮಾಲೀಕ ಪವನ್ ಕುಲಕರ್ಣಿ ಮಾತನಾಡಿ, ಹಂತ ಹಂತವಾಗಿ ಟೆಕ್ನಿಕಾ ಇಂಡಸ್ಟ್ರೀಸ್ ಬೆಳೆದುಕೊಂಡು ಬಂದಿದೆ. ಉತ್ತಮ ಗುಣಮಟ್ಟ ಹಾಗೂ ಗ್ರಾಹಕರ ಸೇವೆಯೇ ನಮ್ಮ ಧ್ಯೇಯ. 200ಕ್ಕೂ ಹೆಚ್ಚು ಸಿಬ್ಬಂದಿ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಾಟರ್ ಗೀಝರ್, ವಾಟರ್ ಪಂಪ್ಸ್, ಗ್ಯಾಸ್ ಸ್ಟೋವ್ ಉತ್ಪಾದನೆ ಮಾಡುವ ಯೋಚನೆ ಇದೆ ಎಂದು ತಿಳಿಸಿದರು‌. ಟೆಕ್ನಿಕಾ ಇಂಡಸ್ಟ್ರೀಸ್ ಮಾಲೀಕ ಸೋಮೇಶ್ವರ ಕುಲಕರ್ಣಿ ಟೆಕ್ನಿಕಾ ಇಂಡಸ್ಟ್ರೀಸ್ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು‌.

ಇದನ್ನೂ ಓದಿ | ₹15 ಸಾವಿರದಲ್ಲಿ ಕಾಶಿ- ಅಯೋಧ್ಯೆ-ಪ್ರಯಾಗ ಯಾತ್ರೆ: ಸರ್ಕಾರದ ಯೋಜನೆಯ ಬುಕ್ಕಿಂಗ್‌ ಆರಂಭ

Exit mobile version