Site icon Vistara News

Accident in Khanapur | ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ; ಒಂದೇ ಕುಟುಂಬದ 28 ಜನರಿಗೆ ಗಾಯ

Accident in Khanapur

ಬೆಳಗಾವಿ: ಜಿಲ್ಲೆಯ ಖಾನಾಪುರ(Accident in Khanapur) ತಾಲೂಕಿನ ಗರ್ಲಗುಂಜಿ ಗ್ರಾಮದ ಬಳಿ ಟೆಂಪೊ ಪಲ್ಟಿಯಾಗಿ ಮದುವೆ ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ 28 ಜನರಿಗೆ ಗಾಯಗಳಾಗಿವೆ. ಗಾಯಾಳುಗಳು ಬೆಳಗಾವಿ ತಾಲೂಕಿನ ಹುದಲಿ ಗ್ರಾಮಸ್ಥರಾಗಿದ್ದಾರೆ. ಗರ್ಲಗುಂಜಿ ಮತ್ತು ರಾಜಹಂಸಗಡ ಗ್ರಾಮಗಳ ನಡುವಣ ಇಳಿಜಾರಿನಲ್ಲಿ ಶುಕ್ರವಾರ ಸಾಗುತ್ತಿದ್ದಾಗ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಾಳುಗಳಲ್ಲಿ ವೃದ್ಧರು, ಮಕ್ಕಳು ಮತ್ತು ಮಹಿಳೆಯರೇ ಹೆಚ್ಚಾಗಿ ಇದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | Fire incident | ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಹುಲ್ಲಿಗೆ ವಿದ್ಯುತ್‌ ತಗುಲಿ ಬೆಂಕಿ, ಚಾಲಕ ಪಾರು

Exit mobile version