Site icon Vistara News

Threatening Letter : ಮಾ. 21ರೊಳಗೆ ರಾಮ ಮಂದಿರ ಸ್ಫೋಟ ; ಅಲ್ಲಾಹೋ ಅಕ್ಬರ್‌ ಹೆಸರಲ್ಲಿ ಬೆದರಿಕೆ ಪತ್ರ

threatening letter

ಬೆಳಗಾವಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್‌ ಇಟ್ಟು ಸ್ಫೋಟ (Blast in Bengaluru) ನಡೆಸಿದ ಘಟನೆಯ ಪ್ರಧಾನ ಆರೋಪಿ ಟೋಪಿವಾಲಾ ಬಾಂಬರ್‌ನನ್ನು ಹಿಡಿಯಲು ಶತ ಪ್ರಯತ್ನ ನಡೆಸಿದರೂ ಇದುವರೆಗೆ ಫಲ ಸಿಕ್ಕಿಲ್ಲ. ಇದರ ನಡುವೆಯೇ ಬೆಳಗಾವಿ ಜಿಲ್ಲೆಯ (Belagavi News) ನಿಪ್ಪಾಣಿಯ ರಾಮ ಮಂದಿರವನ್ನು (Rama Mandir in Nippani) ಸ್ಫೋಟಿಸುವುದಾಗಿ ಬೆದರಿಕೆ ಪತ್ರ (Threatening Letter) ಬಂದಿದೆ.

101 ವರ್ಷ ಹಳೆಯ, ಭಾರಿ ಭಕ್ತ ಸಂದೋಹವನ್ನು ಹೊಂದಿರುವ ಕಾರಣಿಕ ಕ್ಷೇತ್ರ ಇದಾಗಿದ್ದು, ಇದನ್ನು ಸ್ಫೋಟ ನಡೆಸುವುದಾಗಿ ಹಿಂದಿಯಲ್ಲಿ ಬರೆದಿರುವ ಪತ್ರ ಬಂದಿದೆ. ಅಲ್ಲಾಹೋ ಅಕ್ಬರ್‌ ಎಂದೇ ಆರಂಭವಾಗುವ ಈ ಪತ್ರದಲ್ಲಿ ತಾಕತ್ತಿದ್ದರೆ ತಡೆಯಿರಿ ಎಂಬ ಸವಾಲು ಕೂಡಾ ಹಾಕಲಾಗಿದೆ.

ಫೆಬ್ರವರಿ 7 ಮತ್ತು ಫೆಬ್ರವರಿ 28ರಂದು ಎರಡು ಪತ್ರಗಳು ಬಂದಿದ್ದು, ಮುಂದಿನ ಮಾರ್ಚ್‌ 20, 21 ತಾರೀಖಿನ ಒಳಗಡೆ ರಾಮ ಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸುವುದಾಗಿ ಎಂದು ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ.

ಮೊದಲನೆಯ ಪತ್ರ ರಾಮ ಮಂದಿರ ಗರ್ಭ ಗುಡಿಯ ಸಮೀಪ ಪತ್ತೆಯಾಗಿದೆ. ಎರಡನೇ ಪತ್ರ ಮಂದಿರದ ಆವರಣದ ಹನುಮಾನ್ ಮಂದಿರದಲ್ಲಿ ಪತ್ತೆಯಾಗಿವೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಓಲ್ಡ್ ಪಿಬಿ ರಸ್ತೆಯಲ್ಲಿರುವ ಶ್ರೀ ರಾಮಮಂದಿರ ಇದಾಗಿದ್ದು, ಪತ್ರವನ್ನು ಗಮನಿಸಿದ ದೇವಸ್ಥಾನದ ಅರ್ಚಕರ ಮೂಲಕ ನಿಪ್ಪಾಣಿ ನಗರ ಪೊಲೀಸರಿಗೆ ದೂರು ನೀಡಲಾಗಿಎ.

ದೇವಸ್ಥಾದ ಅರ್ಚಕ ಸುರೇಶ ಜೀವಾಜಿ ದೇಶಪಾಂಡೆ ಅವರು ಮೊದಲು ಪತ್ರವನ್ನು ನೋಡಿದವರಾಗಿದ್ದಾರೆ. ಅವರು ದೇವಸ್ಥಾನದ ಆಡಳಿತ ಮಂಡಳಿಗೆ ಮೊದಲು ಮಾಹಿತಿ ನೀಡಿದ್ದರು. ಬಳಿಕ ಅಲ್ಲಿ ಚರ್ಚೆಯಾಗಿ ನಿಪ್ಪಾಣಿ ನಗರ ಠಾಣೆಗೆ ದೂರು ನೀಡಲಾಗಿದೆ.

ಪತ್ರದ ಆರಂಭದಲ್ಲೇ ಅಲ್ಲಾ ಹೋ ಅಕ್ಬರ್ ಎಂದು ಬರೆಯಲಾಗಿದೆ. ಹೀಗಾಗಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ: ʼಬಳ್ಳಾರಿ ಗ್ಯಾಂಗ್‌ʼ ಕುರಿತೇ ಶಂಕೆ, ಅಲ್ಲೇ ಇದ್ದಾನೆ ಬಾಂಬರ್!‌

ಜಿಲ್ಲಾಡಳಿತದಿಂದ ಹೈ ಅಲರ್ಟ್‌, 14 ಸಿಸಿ ಟಿವಿ ಅಳವಡಿಕೆ

ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೋಲಿಸ್ ಹೈ ಅಲರ್ಟ್ ಆಗಿದ್ದು, ಮಂದಿರದ ಆವರಣದಲ್ಲಿ 14 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಒಂದು ಡಿಆರ್ ಪೋಲಿಸ್ ತುಕಡಿಯನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ.

ನಿಪ್ಪಾಣಿಯ ರಾಮ ಮಂದಿರಕ್ಕೆ ಬಂದಿರುವ ಬೆದರಿಕೆ ಪತ್ರ ಇಲ್ಲಿದೆ

Exit mobile version