ಬೆಂಗಳೂರು, ಕರ್ನಾಟಕ: ಬೆಳಗಾವಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಳಗಾವಿ ಉತ್ತರದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್‌ನ ಅಭ್ಯರ್ಥಿ ಆಸಿಫ್ ಸೇಟ್ ಅವರು 62911 ಮತಗಳನ್ನು ಪಡೆದುಕೊಂಡು ಗೆಲುವು ಧರಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಡಾ. ರವಿ ಪಾಟೀಲ್ ಅವರು 55162 ಮತಗಳಿಗೆ ತೃಪ್ತಿಯಾಗಿದ್ದಾರೆ. ಬಿಜೆಪಿಯ ಹಾಲಿ ಶಾಸಕ ಅನಿಲ್ ಬೆನಕೆ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು ಮತ್ತು ಹೊಸ ಮುಖ ರವಿ ಪಾಟೀಲ್ ಅವರಿಗೆ ಮಣೆ ಹಾಕಿತ್ತು(Belgaum Uttar Election Results).
2023ರ ಚುನಾವಣಾ ಅಭ್ಯರ್ಥಿಗಳು
ಈ ಬಾರಿ ಹಾಲಿ ಶಾಸಕ ಅನಿಲ್ ಎಸ್ ಬೆನಕೆ ಅವರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿಯು ಹೊಸ ಮುಖ ಡಾ. ರವಿ ಪಾಟೀಲ್ ಅವರಿಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ ಕೂಡ ಹೊಸ ಮುಖ ಆಸೀಫ್ ಸೇಟ್ ಅವರಿಗೆ ಮಣೆ ಹಾಕಿತ್ತು.
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
2008ರಲ್ಲಿ ರಚನೆಯಾದ ಈ ಕ್ಷೇತ್ರವನ್ನು ಕಾಂಗ್ರೆಸ್‌ನ ಫಿರೋಜ್ ಸೇಟ್ ಅವರು ಗೆದ್ದಿದ್ದಾರೆ. 208 ಮತ್ತು 2013ರಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಹೊಂದಿತ್ತು. ಆದರೆ, 2018ರಲ್ಲಿ ಬಿಜೆಪಿಯ ಅನಿಲ್ ಎಸ್ ಬೆನಕೆ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದರು. ಈ ಚುನಾವಣೆಯಲ್ಲಿ ಬಿಜೆಪಿಯ ಅನಿಲ್ ಬೆನಕೆ ಅವರು 79060 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್‌ನ ಫಿರೋಜ್ ಸೇಟ್ ಅವರು 61793 ಮತಗಳನ್ನು ಪಡೆದುಕೊಂಡು ಪರಾಭವವಾದರು.