Site icon Vistara News

Bellary News: ಬಳ್ಳಾರಿಯ ಚರಂಡಿಯಲ್ಲಿ 2 ದಿನದ ನವಜಾತ ಶಿಶು ಮೃತ ದೇಹ ಪತ್ತೆ

Newborn

ಬಳ್ಳಾರಿ: ಬಳ್ಳಾರಿಯಲ್ಲಿ ಎರಡು ದಿನದ ನವಜಾತ ಶಿಶು ಮೃತ ದೇಹ ಪತ್ತೆಯಾಗಿದೆ. ನಗರದ (Bellary News) ರಾಜ್ಯೋತ್ಸವ ನಗರದ ರಸ್ತೆ ಬದಿ ಚರಂಡಿಯಲ್ಲಿ ನವಜಾತ ಶಿಶುವಿನ ಮೃತ ದೇಹ ಸಿಕ್ಕಿದೆ. 2 ದಿನದ ಹಿಂದೆ ಜನಿಸಿದ ಗಂಡು ಶಿಶುವನ್ನು ಚರಂಡಿಗೆ ಎಸೆಯಲಾಗಿದ್ದು, ಮಗುವಿನ ಪೋಷಕರು ಪತ್ತೆಯಾಗಿಲ್ಲ. ಸ್ಥಳೀಯರು ಶಿಶುವಿನ ಮೃತದೇಹ ಹೊರತೆಗೆದಿದ್ದು, ಸ್ಥಳಕ್ಕೆ ಬ್ರೂಸ್ ಪೇಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Self Harming mother and daughter Death Kalaburagi.webp

ಇದನ್ನು ಓದಿ | MLA Gopalaiah : ಹಣ ಕೊಡದಿದ್ರೆ ಕೊಲ್ತೀನಿ; ಬಿಜೆಪಿ ಶಾಸಕ ಗೋಪಾಲಯ್ಯಗೆ ಮಧ್ಯರಾತ್ರಿ ಬೆದರಿಕೆ

ಛೇ.. 2 ವರ್ಷದ ಮಗಳನ್ನು ನೇಣಿಗೆ ಹಾಕಿ ತಾನೂ ಕೊರಳೊಡ್ಡಿದ ತಾಯಿ!

Self Harming mother and daughter Death Kalaburagi.webp

ಕಲಬುರಗಿ: ಬದುಕಿನ ಬವಣೆಗಳು ಏನಿರುತ್ತವೋ? ಸಹಿಸಲಾಗದ ಸಂಕಷ್ಟಗಳು ಹೇಗಿರುತ್ತವೋ? ಜೀವನವೇ ಬೇಡ ಎನ್ನುವಷ್ಟು ಜಿಗುಪ್ಸೆ ಮೂಡಿಸುವ ಭಯಾನಕ ಘಟನೆಗಳು ಹಲವರ ಬಾಳಿನಲ್ಲಿ ನಡೆಯುತ್ತಲೇ ಇರುತ್ತದೆ. ಅಂಥ ಹೊತ್ತಿನಲ್ಲೇ ಇಂಥ ಘಟನೆಗಳು (Self Harming) ನಡೆಯುವುದು. ಹೌದು, ತಾಯಿಯೊಬ್ಬಳು ತನ್ನ ಎರಡು ವರ್ಷದ ಮಗಳನ್ನು ಕೊಂದು ತಾನೂ ಸಾವಿಗೆ ಶರಣಾಗಿದ್ದಾಳೆ (Woman ends life with Child). ಕಲಬುರಗಿ ಜಿಲ್ಲೆಯ (Kalaburagi news) ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ಈ ಕರುಳು ಹಿಂಡುವ ಘಟನೆ ನಡೆದಿದೆ.

ತಾಯಿಯೊಬ್ಬಳು ತನ್ನ ಎರಡು ವರ್ಚದ ಪುಟ್ಟ ಮಗಳನ್ನು ನೇಣಿಗೆ ಹಾಕಿ ಬಳಿಕ ತಾನೂ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಶಿವಲೀಲಾ ಆನಂದ(24) ಎಂಬಾಕೆಯೇ ತನ್ನ ಪುಟ್ಟ ಮಗಳು, ಎರಡು ವರ್ಷದ ವರ್ಷಿತಾಳನ್ನು ಕೊಂದು ತಾನೂ ಜೀವನ ಮುಗಿಸಿಕೊಂಡವಳು.

ಮೊದಲು ಎರಡು ವರ್ಷದ ಮಗಳನ್ನು ನೇಣಿಗೆ ಹಾಕಿ ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ ತಾಯಿ ಶಿವಲೀಲಾ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಕೆ ಸಾವಿಗೆ ಶರಣಾಗಿದ್ದಾಳೆ.

ಇದನ್ನೂ ಓದಿ : Self Harming : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು 1 ವರ್ಷದ ಪುಟ್ಟ ಮಗುವಿನ ತಾಯಿ ಆತ್ಮಹತ್ಯೆ

ಗಂಡ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತು ಶಿವಲೀಲಾ ಮಗುವನ್ನು ಕೊಂದು ತಾನೂ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಚಿಂಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಡ ಆನಂದ ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version