ಬಳ್ಳಾರಿ: ಎಟಿಎಂ ಯಂತ್ರದ ಮೂಳಕ ಖಾತೆಗೆ ಹಣ ಜಮಾ ಮಾಡು ಎಂದರೆ ಇಲ್ಲೊಬ್ಬ ಆಸಾಮಿ ಆ ಹಣವನ್ನು ತನ್ನ ಜೇಬಿಗೆ ತುಂಬಿಕೊಂಡು ಪರಾರಿಯಾಗಿದ್ದಾನೆ. ಎಟಿಎಂಗಳಿಗೆ ಹಣ ತುಂಬವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ನೀಲಕಂಠ, ಹಣದೊಂದಿಗೆ ಪರಾರಿಯಾಗಿದ್ದವ.
ನೀಲಕಂಢ, ಸಿಎಸ್‌ಎಂ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಬಳ್ಳಾರಿಯ ಮೀನಾಕ್ಷಿ ಸರ್ಕಲ್‌ನಲ್ಲಿರುವ ಕರ್ಣಾಟಕ ಬ್ಯಾಂಕ್‌ನಿಂದ ತೆಗೆದುಕೊಂಡ ₹50 ಲಕ್ಷ ಹಾಗೂ ಎಟಿಎಂನಿಂದ ತೆಗೆದ ₹6.18 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ.
ಕರ್ಣಾಟಕ ಬ್ಯಾಂಕ್ ಎಟಿಎಂ ಸೇರಿದಂತೆ ಇತರೆ ಎಟಿಎಂಗಳಿಗೆ ತುಂಬಬೇಕಿದ್ದ ಹಣದೊಂದಿಗೆ ಪರಾರಿಯಾಗಿದ್ದ. ಬಳ್ಳಾರಿಯ ಬ್ರೂಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆತನ ಹುಡುಕಾಟಕ್ಕೆ ಬಲೆ ಬೀಸಿದ್ದರು. ಇದೀಗ ಆರೋಪಿ ನೀಲಕಂಠನ್ನು ಸೋಮವಾರ ಬಂಧಿಸಲಾಗಿದೆ.
ಹಣದೊಂದಿಗೆ ಕೊಪ್ಪಳಕ್ಕೆ ಪರಾರಿಯಾಗಿದ್ದ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸಲಾಗಿದೆ. ಆರೋಪಿಯಿಂದ ₹56 ಲಕ್ಷ ಹಣ, ಎರಡು ಮೊಬೈಲ್, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ| ದಿನಕ್ಕೆ ಒಂದು ಡಜನ್ ಟಾರ್ಗೆಟ್ ಹೊಂದಿದ್ದ ಮೊಬೈಲ್ ಕಳ್ಳರು !