Site icon Vistara News

Actor Darshan : ಬಳ್ಳಾರಿಯಿಂದ ನಟ ದರ್ಶನ್‌ ಮತ್ತೆ ಬೆಂಗಳೂರಿಗೆ ಶಿಫ್ಟ್‌! ಪತ್ನಿ ಬಂದು ಹೋದ್ಮೆಲೆ ಫುಲ್ ಆಕ್ಟೀವ್

Actor Darshan shifted back to Bengaluru from Ballari

ಬಳ್ಳಾರಿ/ಬೆಂಗಳೂರು: ನಟ ದರ್ಶನ್‌ ಬಳ್ಳಾರಿಯಿಂದ ಮತ್ತೆ ಬೆಂಗಳೂರು ಜೈಲಿಗೆ (Actor Darshan) ಶಿಫ್ಟ್ ಆಗ್ತಾರಾ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ದರ್ಶನ್‌ಗೆ ಬಳ್ಳಾರಿಯಲ್ಲಿ ‌ನಿಜ ಜೈಲಿನ ದರ್ಶನವಾಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಆರಾಮಾಗಿದ್ದ ದರ್ಶನ್‌ಗೆ ಬಳ್ಳಾರಿಯಲ್ಲಿ ಇರಲಾಗುತ್ತಿಲ್ವಂತೆ. ನಿನ್ನೆ ಪತ್ನಿ ಭೇಟಿಯ ವೇಳೆ ಬಳ್ಳಾರಿ ಜೈಲಿನ ಸಂಕಷ್ಟ ಹೇಳಿಕೊಂಡರಂತೆ. ಬೆನ್ನು ನೋವು, ಕೈ ನೋವು ಇರುವುದರಿಂದ ಇಂಡಿಯನ್ ಟಾಯ್ಲೆಟ್ ಸಮಸ್ಯೆ ಆಗುತ್ತಿದೆ. ಒಂದು ಕಡೆಗೆ ನೋವು, ಜೈಲ್‌ನ ವ್ಯವಸ್ಥೆ ನನಗೆ ಸರಿ ಹೋಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಗ್ಯ, ತಾಂತ್ರಿಕ ತೊಂದರೆ ನೆಪವೊಡ್ಡಿ ವಕೀಲರ ಮೂಲಕ ಬೆಂಗಳೂರಿಗೆ ಶಿಫ್ಟ್ ಆಗಲು ಪ್ಲ್ಯಾನ್‌ ನಡೆದಿದೆ ಎನ್ನಲಾಗಿದೆ. ವಕೀಲರ ಮೂಲಕ ಕೋರ್ಟ್‌ಗೆ ಮನವಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಹಿಂದೆ ಕೋರ್ಟ್‌ನಲ್ಲಿ ಮನೆಯೂಟ ಕೇಳಿದಾಗ ನಿರಾಕರಣೆ ಮಾಡಿತ್ತು. ಇದೇ ವಾರದಲ್ಲಿ ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗುವ ಸಾಧ್ಯತೆ ಇದೆ. ಇದರ ಮಧ್ಯೆ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲು ಕೋರ್ಟ್‌ ಒಪ್ಪಿಗೆ ನೀಡುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ.

ಬೆಂಗಳೂರಿಗೆ ಶಿಫ್ಟ್ ಆಗಬೇಕು ಅಂದರೆ ದರ್ಶನ್‌ಗೆ ಮೇಜರ್ ಸಮಸ್ಯೆ ಇರಬೇಕು. ಅದರಲ್ಲೂ ಹಾರ್ಟ್ ಸಮಸ್ಯೆ, ಕಿಡ್ನಿ ಸಂಬಂಧಿಸಿದ ಗಂಭೀರ ಸಮಸ್ಯೆ ಇರಬೇಕು. ಆಗ ಮಾತ್ರ ಯಾವುದೇ ಕೈದಿಯನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇರುತ್ತೆ. ಆದರೆ ದರ್ಶನ್ ಅವರಿಗೆ ಸ್ಪೈನಲ್ ಕಾರ್ಡ್, ಎಡಗೈ ಮೂಳೆ ನೋವು ಮಾತ್ರ ಇದೆ. ಇದು ಜೈಲ್ ರೂಲ್ಸ್ ಪ್ರಕಾರ ಮೇಜರ್ ಸಮಸ್ಯೆ ಅಲ್ಲ ಎನ್ನಲಾಗುತ್ತಿದೆ.

ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ಬೇಲ್‌ಗೆ ಅರ್ಜಿ ಹಾಕುವ ಸಾಧ್ಯತೆ ಇದೆ. ಬೇಲ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಜೈಲ್ ಟು ಜೈಲ್ ಶಿಫ್ಟ್ ಮಾಡುವುದು ಅನುಮಾನವಿದೆ. ದರ್ಶನ್‌ಗೆ ಈಗಿರುವ ಸಮಸ್ಯೆಗೆ ಚಿಕಿತ್ಸೆ ನೀಡಲು ಜೈಲಲ್ಲೇ ನುರಿತ ವೈದ್ಯರಿದ್ದಾರೆ. ಕಿಡ್ನಿ ಸಮಸ್ಯೆ, ಹಾರ್ಟ್ ಸಮಸ್ಯೆ ಇದ್ದರೆ ಜೈಲಿನಲ್ಲೇ ಟ್ರೀಟ್ಮೆಂಟ್‌ಗೆ ಬಳ್ಳಾರಿಯಲ್ಲೇ ಖಾಸಗಿ ವೈದ್ಯರಿದ್ದಾರೆ. ಬಳ್ಳಾರಿಯಲ್ಲೂ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಇದ್ದಾವೆ ಅಲ್ಲಿ ಚಿಕಿತ್ಸೆ ನೀಡೋದಕ್ಕೆ ಅವಕಾಶ ಇದೆ. ಗಂಭೀರ ಸಮಸ್ಯೆಗೆ ಬಳ್ಳಾರಿಯಲ್ಲಿನ ಚಿಕಿತ್ಸೆ ಕೊಡಲು ಆಗದೇ ಹೋದರೆ ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

ಪತ್ನಿ ಭೇಟಿ ನಂತರ ಕಣ್ತುಂಬ ನಿದ್ದೆ ಮಾಡಿದ ದಾಸ

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಮೂರನೇ ರಾತ್ರಿ ಕಳೆದಿರುವ ಕೊಲೆ ಆರೋಪಿ ದರ್ಶನ್ ಭಾನುವಾರ ಬೆಳಗ್ಗೆ ಎದ್ದು ವಾಕಿಂಗ್ ಮಾಡಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಾಗಿನಿಂದ ಇದೇ ಮೊದಲ ಬಾರಿಗೆ ಬೆಳಗ್ಗೆ ವಾಕಿಂಗ್ ಮಾಡಿದ್ದು, ಎರಡು ರಾತ್ರಿ ನಿದ್ದೆ ಇಲ್ಲದೇ ಒದ್ದಾಡಿದ್ದರು. ನಿನ್ನೆ ಶನಿವಾರ ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿ ಹೋದ ಬೆನ್ನಲ್ಲೇ ನಿರಾಳರಾಗಿರುವ ದರ್ಶನ್ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದರಂತೆ. ಪತ್ನಿ ವಿಜಯಲಕ್ಷ್ಮಿ ಮೈಸೂರು ಚಾಮುಂಡೇಶ್ವರಿ ದೇವಿಯ ಕುಂಕುಮ, ಅಕ್ಷತೆ, ಪ್ರಸಾದ ತಂದು ಕೊಟ್ಟಿದ್ದರು. ಸುದೀರ್ಘ ಅರ್ಧ ಗಂಟೆ ದರ್ಶನ್ ಜತೆ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದರು. ಪತ್ನಿ ಬಂದು ಹೋದ ಬೆನ್ನಲ್ಲೇ ಇಂದು ಫುಲ್ ಆಕ್ಟೀವ್ ಆಗಿದ್ದಾರೆ.

ಇದನ್ನೂ ಓದಿ: Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌

ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ?

ಸೆಂಟ್ರಲ್‌ ಜೈಲಿನಲ್ಲಿ ನಟ ದರ್ಶನ್‌ ಫೋಟೊ ವೈರಲ್‌ ಆಗಿದ್ದೆ ತಡ ಈಗ ಒಂದೊಂದೆ ವಿಚಾರಗಳು ಹೊರಬರುತ್ತಿವೆ. ಇಷ್ಟಕ್ಕೂ ಜೈಲು ಸೇರಿದ್ದ ನಟ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಜೈಲುಪಾಲಾದ ಮೂರೇ ದಿನ ಸಾಮಾನ್ಯ ಕೈದಿಯಂತಿದ್ದ ದರ್ಶನ್, ಬಳಿಕ ನಾಲ್ಕನೇ ದಿನದಿಂದ ರಾಜಾತಥ್ಯ ಸಿಗುತಿತ್ತಂತೆ. ಇನ್ನು ಜೈಲು ಸಿಬ್ಬಂದಿ ನಿಮ್ಮ ಬ್ಯಾರಕ್‌ಗೆ ತೆರಳಿ ಎಂದು ಸೂಚಿಸುತ್ತಿದ್ದರಂತೆ. ಈ ವೇಳೆ ಫಿಲ್ಮಿ ಸ್ಟೈಲ್‌ನಲ್ಲೇ ದರ್ಶನ್‌ ಆವಾಜ್ ಹಾಕಿ ‘ಬಿಸ್ಕತ್ ಹಾಕಿಲ್ವಾ’ ಸುಮ್ಮನಿರು ಅಂತಿದ್ದರಂತೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೆ ಸತ್ಯ ಹೊರಗೆ ಬರುತ್ತಿದೆ.

ಬದಲಾದ ಬೆಂಗಳೂರು ಸೆಂಟ್ರೆಲ್‌ ಜೈಲ್‌ ಚಿತ್ರಣ

ಬೆಂಗಳೂರು: ದರ್ಶನ್ ಸಿಗರೇಟ್‌ ಸೇದುವ ಫೋಟೊ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರ ಜೈಲಿನ ಚಿತ್ರಣವೇ ಬದಲಾಗಿದೆ. ಒಂದೆಡೆ ಜೈಲು ಸಿಬ್ಬಂದಿ ಪ್ರತಿಭಟಿಸುತ್ತಿದ್ದರೆ, ಮತ್ತೊಂದೆಡೆ ಕೈದಿಗಳಿಂದಲೂ ಧರಣಿ ನಡೆದಿದೆ ಎನ್ನಲಾಗಿದೆ. ನಮಗೆ ಬೀಡಿ, ಸಿಗರೇಟ್ ಸಿಗುತ್ತಿಲ್ಲ. ನಮ್ಗೆ ಇರೋದಕ್ಕೆ ಆಗುತ್ತಿಲ್ಲ ಎಂದು ನಿನ್ನೆ ಶನಿವಾರ ಪ್ರತಿಭಟಿಸಿದ್ದಾರೆ. ಫೋಟೊ ವೈರಲ್ ಬಳಿಕ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಬೀಡಿ, ಸಿಗರೇಟ್ ಸಂಪೂರ್ಣ ಬಂದ್ ಆಗಿದೆ.

ಹಿಂಡಲಗಾ ಜೈಲಿನಲ್ಲಿ ಸಿಗರೇಟ್‌ಗಾಗಿ ಕೈದಿಗಳಿಂದಲ್ಲೂ ಡಿಮ್ಯಾಂಡ್‌

ಬೆಂಗಳೂರು ಜೈಲಲ್ಲಿ ದರ್ಶನ್ ಸಿಗರೇಟ್ ಸೇದಿದ ಎಫೆಕ್ಟ್ ಇತರ ಕೈದಿಗಳಿಂದಲೂ ಡಿಮ್ಯಾಂಡ್ ಬಂದಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳ ವಿಶೇಷ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆದಿದೆ. ಬೀಡಿ, ಸಿಗರೇಟ್, ತಂಬಾಕು ಕೊಡುವವರಗೆ ನಾವು ತಿಂಡಿ ತಿನ್ನಲ್ಲ ಎನ್ನುತ್ತಿದ್ದಂತೆ. ಬೆಳಗಿನ ಉಪಹಾರ ಮಾಡದೆ ಪ್ರೊಟ್ಟೆಸ್ಟ್‌ ಮಾಡುತ್ತಿದ್ದರಂತೆ. ಇದೀಗ ಈ ಬೇಡಿಕೆ ಜೈಲಧಿಕಾರಿಗಳಿಗೆ ತಲೆ ನೋವಾಗಿದೆ. ಸದ್ಯ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಜೈಲಾಧಿಕಾರಿಗಳು ಇದ್ದಾರೆ. ಬೀಡಿ ಸಿಗರೇಟ್ ನೀಡದಿದ್ದರೆ ಮಧ್ಯಾಹ್ನ ಊಟವನ್ನೂ ಮಾಡಲ್ಲ ಎಂದು ಬೆದರಿಕೆ ಹಾಕುತ್ತಿದ್ದರಂತೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version