ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್, ಜೈಲಿನಲ್ಲೇ (Actor Darshan) ರಾಜಾತಿಥ್ಯ ಪಡೆದ ಫೋಟೊ ಹಾಗೂ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಂಕಷ್ಟ ಎದುರಾಗಿದೆ. ಈಗಾಗಲೇ ನಟ ದರ್ಶನ್ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದೆ. ಈ ಮಧ್ಯೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಕ್ಕೆ ಬೆಂಗಳೂರಿನ 27ನೇ ಎಸಿಎಂಎಂ ಕೋರ್ಟ್ ಒಪ್ಪಿಗೆ ನೀಡಿದೆ. ನ್ಯಾಯಾಲಯದಿಂದ ಆದೇಶ ಪಡೆದಿರುವ ಪೊಲೀಸರು ಉಳಿದ ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ ಶಿಫ್ಟ್ ಆಗಲಿದ್ದಾರೆ.
ಯಾರ್ಯಾರ್ ಯಾವ್ಯಾವ ಜೈಲಿಗೆ ಶಿಫ್ಟ್?
ನಟ ದರ್ಶನ್ ಬಳ್ಳಾರಿ ಜೈಲು ಹಾಗೂ ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ ಉಳಿದಂತೆ
ಜಗದೀಶ್ ಶಿವಮೊಗ್ಗ ಮತ್ತು ಧನರಾಜ್ ಧಾರವಾಡ, ವಿನಯ್ ವಿಜಯಪುರ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ. ನಾಗರಾಜ್ ಗುಲ್ಬರ್ಗ , ಲಕ್ಷ್ಮಣ ಶಿವಮೊಗ್ಗ, ಪ್ರದೂಶ್ ಬೆಳಗಾವಿಗೆ ಸ್ಥಳಾಂತರ ಆಗಲಿದ್ದು, ಪವಿತ್ರಗೌಡ, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರದಲ್ಲೇ ಇರಲಿದ್ದಾರೆ. ಈಗಾಗಲೇ ರವಿ , ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲಿ ಇದ್ದಾರೆ. ಕೋರ್ಟ್ ಆದೇಶ ಹಿಂದೆ ಕೈ ಸೇರಿದರೆ ರಾತ್ರಿಯೇ ಸ್ಥಳಾಂತರ ಆಗುವ ಸಾಧ್ಯತೆ ಇದೆ. ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ಆದರೆ ಉತ್ತಮ ಎನ್ನಲಾಗಿದೆ. ಇಂದು ಮಂಗಳವಾರ ಆದೇಶ ಪ್ರತಿ ಕೈ ಸೇರಿದರೆ ರಾತ್ರಿಯೇ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗಲಿದ್ದಾರೆ. ಆದೇಶ ಪ್ರತಿ ನಾಳೆ ಬೆಳಗ್ಗೆ ಕೈ ಸೇರಿದರೆ, 11 ಗಂಟೆಗೆ ಬಳ್ಳಾರಿಗೆ ಕರೆದೊಯ್ಯಲು ಸಿದ್ಧತೆ ನಡೆಸಲಿದ್ದಾರೆ.
ಜೈಲಿನಲ್ಲಿ ನಟ ದರ್ಶನ್ ಆತಿಥ್ಯಕ್ಕೆ 2 ಟೀಂ ಮಧ್ಯೆ ಕೋಲ್ಡ್ ವಾರ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಜೈಲಿನಲ್ಲೇ ದರ್ಬಾರ್ ಮಾಡುತ್ತಿದ್ದಾರೆ. ಆದರೆ ದರ್ಶನ್ ರಾಜಾಥಿತ್ಯದ ಫೋಟೋ ವೈರಲ್ ಆಗಿ ಕಥೆನೇ ಬೇರೆ ಇದೆ. ಜೈಲಿನೊಳಗಡೆ ಇರುವ ಆ ಎರಡು ಗ್ಯಾಂಗ್ ನಡುವಿನ ಕೋಲ್ಡ್ ವಾರ್ ದಾಸನಿಗೆ ಸಂಕಷ್ಟ ತಂದೊಡ್ಡಿದೆ.
ನಾಗನ ಸೇವೆಯಿಂದ ಹೊಟ್ಟೆಉರಿ; ಬೇಕರಿ ರಘು ಮಾಡಿದ್ದೇನು?
ಕೊಲೆ ಕೇಸ್‌ನಲ್ಲಿ ಸಿಲುಕಿರುವ ದರ್ಶನ್ ಅಲಿಯಾಸ್ ಡಿ ಬಾಸ್ ಜೈಲಿನಲ್ಲಿ ರಾಜಾತಿಥ್ಯ ಜೀವನ ನಡೆಸುತ್ತಿದ್ದಾರೆ. ಆದರೆ ಈ ಶೋಕಿ ಜೀವನಕ್ಕೆ ಕಾರಣವಾಗಿದ್ದು ಜೈಲಿನಲ್ಲಿರುವ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ.. ನಾಗನೇ ದರ್ಶನ್‌ಗೆ ಬೇಕು ಬೇಡವನ್ನೆಲ್ಲ ಪೂರೈಸಿದ್ದ. ಆದರೆ ನಾಗನಿಗೂ ಮುಂಚೆ ಜೈಲಿನಲ್ಲಿದ್ದ ಮತ್ತೊಬ್ಬ ರೌಡಿಶೀಟರ್ ಬೇಕರಿ ರಘು ದರ್ಶನ್‌ಗೆ ಎಲ್ಲಾ ರೀತಿ ವ್ಯವಸ್ಥೆ ಮಾಡುತ್ತಿದ್ದನಂತೆ. ಹೀಗಿರುವಾಗ ದರ್ಶನ್ ಜತೆ ವಿಲ್ಸನ್ ಗಾರ್ಡನ್ ನಾಗ ಕ್ಲೋಸ್ ಆಗಿದ್ದನಂತೆ. ದರ್ಶನ್ ಇಂಪ್ರೆಸ್ ಮಾಡಲು ಕೇಳಿದ್ದಕ್ಕಿಂತ ಹೆಚ್ಚೇ ಸಿಗರೇಟ್, ಎಣ್ಣೆ ವ್ಯವಸ್ಥೆ ಮಾಡಿದ್ದನಂತೆ. ಇದರಂದ ಬೇಕರಿ ರಘು ದರ್ಶನ್ ಮತ್ತು ನಾಗನಿಂದ ನಿಧಾನವಾಗಿ ದೂರ ಆಗಿದ್ದ. ಕೊನೆಗೆ ಬೇಕರಿ ರಘುವಿಗೆ ಹೊಟ್ಟೆ ಉರಿ ಶುರುವಾಗಿತ್ತು. ಇದೇ ಹೊಟ್ಟೆ ಉರಿ ಜೈಲಿನ ದರ್ಶನ್ ದರ್ಬಾರ್ ಫೋಟೊಗಳು ಹೊರ ಪ್ರಪಂಚಕ್ಕೆ ವೈರಲ್ ಆಗುವಂತೆ ಆಗಿತ್ತು.
ದರ್ಶನ್ ಮತ್ತು ನಾಗ ಕ್ಲೋಸ್ ಆಗಿದ್ದು ಬೇಕರಿ ರಘುವಿನ ಹೊಟ್ಟೆಕಿಚ್ಚಿಗೆ ಕಾರಣವಾಗಿತ್ತು. ಈ ಹೊಟ್ಟೆ ಕಿಚ್ಚೇ ದರ್ಶನ್ ಆತಿಥ್ಯಕ್ಕೆ ಕಿಚ್ಚು ಹಚ್ಚಿದೆ. ಬೇಕರಿ ರಘು ಸೂಚನೆಯಂತೆ ಆತನ ಹುಡುಗರು ದರ್ಶನ್ ಮತ್ತು ನಾಗ ಇರುವ ಫೋಟೋಗಳನ್ನು ತೆಗೆದು ಹೊರ ಪ್ರಪಂಚಕ್ಕೆ ಕಳಿಸಿದ್ದಾರೆ. ಈ ಮೂಲಕ ಬೇಕರಿ ರಘು ಆತಿಥ್ಯ ವಿಚಾರದಲ್ಲಿ ಆದ ಅಪಮಾನದ ಕೋಪಕ್ಕೆ ಫೋಟೋ ಗೇಮ್ ಆಡಿದ್ದಾನೆ. ಆದರೆ ಇದೆಲ್ಲದಕ್ಕೂ ಸಚಿವರೊಬ್ಬರ ಸೂಚನೆಯೇ ಕಾರಣ ಎನ್ನಲಾಗಿದೆ.
ನಟ ದರ್ಶನ್ ಹೇಳಿಕೇಳಿ ಸೆಲೆಬ್ರೆಟಿ. ರಾಜಕಾರಣಿಗಳ ನಂಟು ಕೂಡ ಆತನಿಗಿದೆ. ಇದೇ ನಂಟು ದರ್ಶನ್‌ಗೆ ಜೈಲಿನಲ್ಲಿ ನಾಗ ಸೇವೆ ಸಿಗುವಂತೆ ಮಾಡಿದೆ. ದರ್ಶನ್ ಜೈಲಿಗೆ ಹೋದ 10 ದಿನಗಳ ಕಾಲ ಮೊದಲೇ ಪರಿಚಯವಿದ್ದ ಬೇಕರಿ ರಘು ಎಲ್ಲಾ ವ್ಯವಸ್ಥೆ ಮಾಡಿದ್ದ. ಆದರೆ ನಂತರದಲ್ಲಿ ಸಚಿವರೊಬ್ಬರು ನಾಗನಿಗೆ ದರ್ಶನ್ ಬೇಕು ಬೇಡಗಳನ್ನು ನೋಡಿಕೊಳ್ಳಲು ಸೂಚನೆ ಕೊಟ್ಟಿದ್ದರಂತೆ. ಇದಕ್ಕಾಗಿ ರೌಡಿಶೀಟರ್ ಶರವಣ ಎಂಬಾತನ ಮೂಲ ಹಣದ ವ್ಯವಸ್ಥೆಯೂ ಆಗಿತ್ತು. ಯಾವಾಗ ಸಚಿವರ ಸೂಚನೆ ಬರುತ್ತೋ ನಾಗ ದಾಸನ ಸೇವೆ ನಿಂತಿದ್ದ. ಬೇಕರಿ ರಘುವಿನಿಂದ ಹೆಚ್ಚು ವ್ಯವಸ್ಥೆ ಮಾಡಿದ್ದ. ಇದು ಕೊನೆಗೆ ಎರಡು ಗ್ಯಾಂಗ್‌ನ ಕೋಲ್ಡ್ ವಾರ್‌ಗೆ ದರ್ಶನ್ ಗೆ ಬೇರೆ ಜೈಲಿನ ದಾರಿ ತೋರಿಸಿದೆ.