ಬಳ್ಳಾರಿ: ಜೆಡಿಎಸ್ ಪಕ್ಷಕ್ಕೆ ನೀಡುವ ಪ್ರತಿ ಮತವೂ ಪರೋಕ್ಷವಾಗಿ ಸಿದ್ದರಾಮಯ್ಯಗೆ ಹೋಗುತ್ತದೆ ಎನ್ನುವುದು ನೆನಪಿರಲಿ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರನ್ನು ನೋಡಿಕೊಂಡು ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದ್ದಾರೆ.
ಸಂಡೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿದರು. ಮೋದಿ ಮತ್ತು ಯಡಿಯೂರಪ್ಪ ಅವರ ಮೇಲೆ ಭರವಸೆ ಇಟ್ಟು ಬಿಜೆಪಿಗೆ ಮತ ಹಾಕಿ. ಕರ್ನಾಟಕವನ್ನು ದಕ್ಷಿಣದಲ್ಲಿ ನಂ.1ರಾಜ್ಯವನ್ನಾಗಿ ಮಾಡಲಾಗುತ್ತದೆ. ಬಿಜೆಪಿ ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲಪಡಿಬೇಕು. ರಾಜ್ಯದಲ್ಲಿ ಬಿಜೆಪಿ ಬಹುಮತದಲ್ಲಿ ಅಧಿಕಾರಕ್ಕೆ ಬರಲು ಆಶೀರ್ವಾದಿಸಬೇಕು. ಸಿಎಂ ಖುರ್ಚಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯ ಜಗಳ ನಡೆದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿವೆ. ಅವರಿಂದ ಬಡ ಮತ್ತು ಜನಸಾಮಾನ್ಯರ ಕಲ್ಯಾಣ ಸಾಧ್ಯವಿಲ್ಲ.
ನೀವು ಜೆಡಿಎಸ್ ಗೆ ಹಾಕುವ ಒಂದೊಂದು ಮತ ಕಾಂಗ್ರೆಸ್ ಹೋಗುತ್ತದೆ. ಕಾಂಗ್ರೆಸ್ ಗೆ ಕೊಡುವ ಒಂದೊಂದು ಮತ ಸಿದ್ದರಾಮಯ್ಯಗೆ ಹೋಗುತ್ತೆ. ಸಿದ್ದರಾಮಯ್ಯ ನೀಡುವ ಒಂದೊಂದು ಮತ ಎಟಿಎಂ ಸರ್ಕಾರಕ್ಕೆ ಹೋಗುತ್ತೆ. ಇಷ್ಟು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಅಯೋದ್ಯೆಯಲ್ಲಿ ರಾಮ ಮಂದಿರ ಕಟ್ಟಲಿಲ್ಲ. ಆದರೆ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಾಗ ಮೇಲೆ ರಾಮಮದಿರಕ್ಕೆ ಶೀಲಾನ್ಯಾಸ ನೆರವೇರಿಸಿದರು.
ಮೋದಿಯಿಂದ ಸಂಮೃದ್ಧ, ಸುರಕ್ಷ ದೇಶ ಕಟ್ಟಲು ಸಾಧ್ಯ. ಕೊರೊನಾ ಲಸಿಕೆಯನ್ನು ನಯಾ ಪೈಸೆ ಪಡೆಯದೆ ಮೋದಿ ಹಾಕಿಸಿದ್ದಾರೆ. ಕಾಶ್ಮೀರ ನಮ್ಮದು ಹೌದೋ ಅಥವಾ ಅಲ್ಲವೋ? ಮಮತ, ಸಮತಾ, ಎಸ್ಪಿಯು, ಜೆಡಿಯುನಿಂದ 370ಗೆ ವಿರೋಧ ಇತ್ತು. ನರೇಂದ್ರ ಮೋದಿ ಬಂದ ಮೇಲೆ ಕಾಶ್ನೀರದಿಂದ 370 ತೆರವುಗೊಳಿಸಲು ಸಾಧ್ಯವಾಯಿತು ಎಂದರು.
ಇದನ್ನೂ ಓದಿ: Amit Shah: ಮೋದಿ ವಿರುದ್ಧ ರಾಹುಲ್ ಗಾಂಧಿ ಸಮರ್ಥ ಪ್ರಧಾನಿ ಅಭ್ಯರ್ಥಿಯೇ? ಅಮಿತ್ ಶಾ ಉತ್ತರ ಏನು?
ಕೇವಲ 25 ನಿಮಿಷ ವೇದಿಕೆಯಲ್ಲಿದ್ದ ಅಮಿತ್ ಶಾ, ಯಡಿಯೂರಪ್ಪ ಆಗುತ್ತಿದ್ದಂತೆಯೇ ಭಾಷಣ ಮಾಡಿ ಹೊರಟರು. ಅಮಿತ್ ಷಾ ಅವರಿಗೆ ಬೆಳ್ಳಿ ಗದೆಯನ್ನು ಮತ್ತು ಕುಮಾರಸ್ವಾಮಿ ದೇವಸ್ಥಾನದ ಫೋಟೋ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಸಮಾವೇಶದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು, ಶಶಿಕಲಾ ಜೊಲ್ಲೆ ಸೇರಿದಂತೆ ಇತರರು ಇದ್ದರು.