ಬಳ್ಳಾರಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರೀತಿಯಲ್ಲೆ ಈ ಬಾರಿಯೂ ಸ್ಪರ್ಧಿಸುವ ಕುರಿತು ಸಚಿವ ಬಿ. ಶ್ರೀರಾಮುಲು ಗೊಂದಲಕಾರಿ ಹೇಳಿಕೆ ನೀಡಿದ್ದಾರೆ.
ಸಂಡೂರಿನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ನಾನು ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧೆ ಮಾಡುವೆ. ಸಂಡೂರು ಕ್ಷೇತ್ರದಲ್ಲಿ ಸ್ಪರ್ಧೆಗೆ ಪಕ್ಷ ತಿರ್ಮಾನ ಮಾಡಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು. ಹೀಗಾಗಿ ನಾನು ಓಡಾಟ ಮಾಡ್ತಿರುವೆ. ಕರ್ನಾಟಕ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಬೇಡಿಕೆ ಇದೆ. ಬಳ್ಳಾರಿಯಿಂದ ಸ್ಪರ್ಧೆ ಮಾಡುವುದು ಖಚಿತ ಎಂದರು.
ನಂತರ ಮರುಕ್ಷಣದಲ್ಲೆ, ಯಾವ ಕ್ಷೇತ್ರ ಎಂಬುದು ಪಕ್ಷ ನಿರ್ಮಾನ ಮಾಡುತ್ತದೆ. ಕಲ್ಯಾಣ ಕರ್ನಾಟಕ 41 ಕ್ಷೇತ್ರದಲ್ಲೂ ಬಿಜೆಪಿ ಗೆಲವಿಗಾಗಿ ಕೇಂದ್ರ ನಾಯಕರು ಬರ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ವಿಜಯ ಸಾಧಿಸಲು ವಿಜಯ ಸಂಕಲ್ಪ ಯಾತ್ರೆ ಮಾಡಲಾಗುತ್ತದೆ. ಸಮಾವೇಶ ಅಮಿತ್ ಶಾ ಉದ್ಘಾಟನೆ ಮಾಡುತ್ತಾರೆ. ಕಲ್ಯಾಣ ಕರ್ನಾಟಕದಿಂದ ಬಿಜೆಪಿ ಗೆಲುವಿಗೆ ಸಿಂಹಪಾಲು ಕೊಡಬೇಕು.
ಇದನ್ನೂ ಓದಿ: Karnataka Election 2023: ಫೆ.23ಕ್ಕೆ ಸಂಡೂರಿನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಬೃಹತ್ ಸಮಾವೇಶ: ಶ್ರೀರಾಮುಲು
10 ಬಾರಿ ಕಾಂಗ್ರೆಸ್ ಗೆಲವು ಸಾಧಿಸಿದೆ. 2 ಬಾರಿ ಮಾತ್ರ ಬೇರೆ ಪಾರ್ಟಿ ಗೆಲುವಾಗಿದೆ. ಈ ಬಾರಿ ಸಂಡೂರಿನಲ್ಲಿ ಬಿಜೆಪಿ ಗೆಲವು ಆಗ್ಬೇಕು ಅದಕ್ಕೆ ನಾನು ಓಡಾಟ ಮಾಡ್ತಿರುವೆ. ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುವುದು ನನ್ನ ಉದ್ದೇಶ. ನಾನು ಪಾರ್ಟಿ ಹೇಳಿದ ಹಾಗೇ ತಿರ್ಮಾನ ಮಾಡುವೆ ಎಂದರು. ಕಳೆದ ಬಾರಿಯಂತೆಯೇ ಎರಡೂ ಕಡೆ ಸ್ಪರ್ಧೆ ಮಾಡುತ್ತೀರ ಎಂಬ ಕುರಿತು ಪ್ರತಿಕ್ರಿಯಿಸಿ, ಕಳೆದ ಬಾರಿ ಪಕ್ಷ ತೀರ್ಮಾನವಿತ್ತು. ಹಾಗಾಗಿ ಎರಡು ಕಡೆ ಸ್ಪರ್ಧೆ ಮಾಡಿದ್ದೆ. ಈ ಬಾರಿಯೂ ಪಕ್ಷ ತೀರ್ಮಾನ ಮಾಡುತ್ತೆ ಎಂದರು. ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ಶ್ರೀರಾಮುಲು ನಿರಾಕರಿಸಿದರು.