Site icon Vistara News

Basanagowda pateel yatnal : ಕಾಂಗ್ರೆಸ್‌ನಲ್ಲಿ 135 ಶಾಸಕರಿದ್ರೂ ದಮ್‌ ಇಲ್ಲ, ಬಿಜೆಪಿಯವರ ವೀರ್ಯಾಣು ಬೇಕಂತೆ; ಯತ್ನಾಳ್‌ ಹೇಳಿಕೆ

Basanagowda pateel Yatnal

ಬಳ್ಳಾರಿ: ಕಾಂಗ್ರೆಸ್‌ನಲ್ಲಿ 135 ಶಾಸಕರಿದ್ದರೂ ಅವರಿಗೆ ಲೋಕಸಭಾ ಚುನಾವಣೆ (Parliament Election 2024) ಎದುರಿಸಲು ದಮ್‌ ಇಲ್ಲ. ಅದಕ್ಕೆ ನಮ್ಮ ವೀರ್ಯಾಣು (Congress wants BJP leaders semen) ಬೇಕಂತೆ; ಹೀಗೊಂದು ವಿವಾದಾತ್ಮಕ ಹೇಳಿಕೆ (Controversial statemen) ನೀಡಿದ್ದಾರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda pateel Yatnal).

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಅದರಲ್ಲೂ ಮುಖ್ಯವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದಿನಕ್ಕೊಬ್ಬ ಬಿಜೆಪಿ ನಾಯಕನನ್ನು ಕರೆದು ಮಾತುಕತೆ ನಡೆಸುವುದರ ವಿರುದ್ಧ ಆಕ್ರೋಶ ಹೊರಹಾಕಿದರು.

ʻʻಲೋಕಸಭೆ ಎದುರಿಸಲು ಕಾಂಗ್ರೆಸ್ ನವರಿಗೆ ಧಮ್ ಇಲ್ಲ. 135 ಶಾಸಕರಿದ್ರೂ ನಿಮಗೆ ನಮ್ಮ ವಿರ್ಯಾಣು ಬೇಕಾ? ದಿನಕ್ಕೊಬ್ಬ ಬಿಜೆಪಿಯ ಮಾಜಿ, ಹಾಲಿ ಶಾಸಕರನ್ನು ಕರೆದು ಡಿಕೆಶಿ ಮಾತನಾಡುತ್ತಾರೆ. 135 ಜನ ಶಾಸಕರಿದ್ರೂ ಆಡಳಿತ ನಡೆಸೋದಕ್ಕೆ ನಿಮಗೆ ನಮ್ಮದೇ ವಿರ್ಯಾಣು ಬೇಕು ಅಂದ್ರೆ ಏನು ಮಾಡೋಣʼʼ ಎಂದು ಪ್ರಶ್ನೆ ಮಾಡಿದ್ದಾರೆ ಬಸನಗೌಡ ಪಾಟೀಲ್‌ ಯತ್ನಾಳ್‌.

ʻʻ135 ಸೀಟು ಗೆದ್ದ ಮೇಲೆ ಎಷ್ಟು ದುರಂಹಕಾರ ಬಂದೆ ಎಂದರೆ ಸೂರ್ಯ ಚಂದ್ರರು ಇರುವವರೆಗೂ ಆಳುವ ಲೆಕ್ಕಕ್ಕೇ ಹೋಗಿದ್ದಾರೆ. ಅವರ ಸಚಿವರು ಯಾರಿಗೂ ಧಮ್‌ ಇಲ್ಲ. ಇಂಥ ಸಚಿವರನ್ನು ಇಟ್ಟುಕೊಂಡು ಅಧಿಕಾರ ನಡೆಸೋದಕ್ಕೆ ಆಗಲ್ಲವೆಂದು ಬಿಜೆಪಿಯವರ ಕರೆಯುತ್ತಿದ್ದಾರೆʼʼ ಎಂದು ಯತ್ನಾಳ್‌ ಗೇಲಿ ಮಾಡಿದರು.

ಇದನ್ನೂ ಓದಿ: BJP-JDS Coalition : ಹೊಂದಾಣಿಕೆ ರಾಜಕೀಯದ ಬಗ್ಗೆ ಈಗ ಯತ್ನಾಳ್‌, ಪ್ರತಾಪ್‌ ಸಿಂಹ ಏನಂತಾರೆ? ನೀವೇ ನೋಡಿ!

ಡಿಸೆಂಬರ್‌ ವರೆಗೂ ಈ ಸರ್ಕಾರ ಉಳಿಯಲ್ಲ

ʻಈ ಕಾಂಗ್ರೆಸ್‌ ಸರ್ಕಾರ ಇನ್ನು ಐದು ವರ್ಷ ಆಳೋದು ದೂರ ಉಳಿಯಿತು. ಡಿಸೆಂಬರ್ ವರೆಗೂ ಸರ್ಕಾರ ಉಳಿಯೋದಿಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಸರ್ಕಾರ ಉಳಿಯೋದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಬೇಸಿಕ್ ಇಲ್ಲ ಅಸ್ತಿತ್ವನೇ ಇಲ್ಲ. ಇನ್ನು ಸರ್ಕಾರ ಉಳಿಯುತ್ತದಾ?ʼʼ ಎಂದು ಕೇಳಿದರು.

ಲೋಕಸಭೆ ಎದುರಿಸಲಿಕ್ಕೇ ಇವರಿಗೆ ತಾಕತ್ತಿಲ್ಲ. ಕಾರ್ಯಕರ್ತರ ಮತ್ತು 135 ಶಾಸಕರ ಬಳಿ ಧಮ್ ಇಲ್ಲ. ಹೀಗಾಗಿ ಹೊಸ ವಿರ್ಯಾಣು ಬೇಕಿದೆ. ಅದಕ್ಕಾಗಿ ಬಿಜೆಪಿ ನಾಯಕರನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ ಎಂದರು ಬಸನಗೌಡ ಪಾಟೀಲ್‌ ಯತ್ನಾಳ್‌.

Exit mobile version