Site icon Vistara News

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Bellary news

ಬಳ್ಳಾರಿ: ಖದೀಮರ ಗ್ಯಾಂಗ್‌ವೊಂದು ಸಿನಿಮೀಯ ರೀತಿಯಲ್ಲಿ ಐತಿಹಾಸಿಕ ಅರಣ್ಯ ಪ್ರದೇಶದಲ್ಲಿ ನಿಧಿಗಾಗಿ ಶೋಧ (Bellary News) ನಡೆಸಿದ್ದಾರೆ. ಆಂಧ್ರದ ನಿಧಿಗಳ್ಳರು ಬಳ್ಳಾರಿಯ ಸಂಡೂರು ಅರಣ್ಯ ಪ್ರದೇಶದಲ್ಲಿ ಆತ್ಯಾಧುನಿಕ ಟೆಕ್ನಾಲಜಿ ಬಳಸಿ ನಿಧಿ ಶೋಧನೆಗೆ ಮುಂದಾಗಿದ್ದರು.

ದಟ್ಟ ಕಾಡಿನ ಮಧ್ಯದಲ್ಲಿರುವ ಗುಹೆಗಳಲ್ಲಿ ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿ ಮಲೈ ಅರಣ್ಯ ವ್ಯಾಪ್ತಿಯಲ್ಲಿ ಚಿನ್ನ, ವಜ್ರಕ್ಕಾಗಿ ಹುಡುಕಾಡಿದ್ದಾರೆ. ಇದಕ್ಕಾಗಿ ಗುಹೆಯಲ್ಲಿ ಆಕ್ಸಿಜನ್, ಜನರೇಟರ್, ಡಿಗ್ಗಿಗ್ ಮಷೀನ್ ಸೇರಿದಂತೆ ಅತ್ಯಾಧುನಿಕ ಸಾಧನಗಳನ್ನು ಬಳಸಿದ್ದಾರೆ.

ಅರಣ್ಯಾಧಿಕಾರಿಗಳು ಆಂಧ್ರದ ಐವರು ನಿಧಿಗಳ್ಳರ ಹೆಡೆಮುರಿ ಕಟ್ಟಿದ್ದಾರೆ. ಆಂಧ್ರ ಮೂಲದ ಶ್ರೀನಿವಾಸ್(45), ಆಕಾಶ್( 20) , ಶ್ರೀನಿವಾಸ್, ವೆಂಕಟ್ ರಾವ್ ಹಾಗೂ ಗದಗ ಮೂಲದ ಭಗತ್ ಸಿಂಗ್ ದೊಡ್ಡಮನಿ(50) ಬಂಧಿತ ಆರೋಪಿಗಳು.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಎಂಟ್ರಿ ಆಗುತ್ತಿದ್ದಂತೆ ಇನ್ನುಳಿದ 06 ಮಂದಿ ಖದೀಮರು ಕಾಲ್ಕಿತ್ತಿದ್ದಾರೆ. ಒಟ್ಟು 11 ಜನರ ತಂಡವು ತಾರಾನಗರದ ನಾರಿಹಳ್ಳದ ಹಿಂಭಾದ ಅರಣ್ಯ ಗುಡ್ಡದಲ್ಲಿ ನಿಧಿಗಾಗಿ ಶೋಧ ನಡೆಸಿದ್ದಾರೆ. ಗುಹೆಗೊಳಗೆ ಸುರಂಗ ಕೊರೆಯಲು ಮುಂದಾಗಿತ್ತು, ಇದಕ್ಕಾಗಿ ತಾತ್ಕಾಲಿಕ ಆಕ್ಸಿಜನ್ ವ್ಯವಸ್ಥೆಯನ್ನೂ ಮಾಡಿತ್ತು.

ಇದನ್ನೂ ಓದಿ: Dog Bite : ಬೀದಿ ನಾಯಿಗಳ ಕಾಟಕ್ಕೆ ಮನೆ ಮಾರಾಟಕ್ಕೆ ಮುಂದಾದ ಜನ್ರು!

ಖದೀಮರು ಲಾಕ್‌ ಆಗಿದ್ದು ಹೇಗೆ?

ಖದೀಮರು ದೋಣಿಮಲೈ ಬ್ಲಾಕ್ ಅರಣ್ಯದ ಪ್ರದೇಶದ ಗುಹೆಯ 40 ಅಡಿ ಆಳ ಇಳಿದಿದ್ದರು. ಇವರಲ್ಲಿ ನಾಲ್ವರು ನೀರು ತರಲು ನಾರಿಹಳ್ಳಕ್ಕೆ ಹೋಗಿದ್ದರು. ನೀರು‌ ತರುವಾಗ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳ ಕೈಗೆ ಲಾಕ್ ಆಗಿದ್ದರು. ಈ ವೇಳೆ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ. ಗುಹೆ ಹತ್ತಿರ ಹೋದ ಅರಣ್ಯಾಧಿಕಾರಿಗಳು ಖದೀಮರ ಸುರಂಗ ಕೊರೆಯುವ ವ್ಯವಸ್ಥೆ ನೋಡಿ ಶಾಕ್ ಆಗಿದ್ದರು. ಸದ್ಯ ಕಾಡು ಪ್ರಾಣಿಗಳ ಹತ್ಯೆ ಆಕ್ಟ್ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಕಾಡಿಗೆ ಖದೀಮರು ಎಂಟ್ರಿಗೂ ಮುನ್ನವೇ ನಿಧಿ ಶೋಧನೆ ಬಗ್ಗೆ ಬ್ಲೂ ಪ್ರಿಂಟ್ ಹೊಂದಿದ್ದರು. ತಾರಾನಗರ ಗ್ರಾಮದ ವ್ಯಕ್ತಿ ಮೂಲಕ ನಿಧಿ ಮಾಹಿತಿ ಸಂಗ್ರಹಿಸಿದ್ದರು. ಆದರೆ ನಿಧಿ ಸಿಗುವ ಮುನ್ನವೇ ಅರಣ್ಯಾಧಿಕಾರಿಗಳಿಗೆ ಲಾಕ್‌ ಆಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version