ಬಳ್ಳಾರಿ: ಇಂದ್ರಮ್ಮಾ ಅಂತ ಭಾವುಕರಾಗಿ ಕಾಂಗ್ರೆಸಿಗೆ ಓಟ್ ಮಾಡಬೇಡಿ, ಇಂದ್ರಮ್ಮನ ಕಾಲ ಮುಗಿದು ಹೋಗಿದೆ ಎಂದು ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ. ಸಂಡೂರಿನಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಆನಂದ ಸಿಂಗ್ ಭಾಷಣ ಮಾಡಿದರು.
ಇಂದ್ರಮ್ಮ ಎನ್ನುವ ಕಾಲ ಮುಗಿದು ಹೋಗಿದೆ. ಅಮಿತ್ ಶಾ ಆಗಮನದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಚಳಿಜ್ವರ ಆರಂಭವಾಗಿದೆ. ಕಾಂಗ್ರೆಸ್ ಭದ್ರಕೋಟೆ ಹೊಡೆಯಲು ಅಮಿತ್ ಶಾ ಭೇಟಿಯಿಂದ ಸಾಧ್ಯ. ಅಖಂಡ ಜಿಲ್ಲೆಯಲ್ಲಿ 10 ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಸಮಾವೇಶದ ಮೂಲಕ ಅಮಿತ್ ಶಾ ಸಂದೇಶ ಕೊಡ್ತಾರೆ.
ಕಾಂಗ್ರೆಸ್ ಆಡಳಿತವನ್ನು ನಮ್ಮ ತಾತ, ತಂದೆ ನಾವು ನೋಡಿದ್ದೇವೆ. ದೇಶಕ್ಕೆ ಮುತ್ತಿನಂತಹ ವ್ಯಕ್ತಿ 2014ರಲ್ಲಿ ದೇಶಕ್ಕೆ ಸಿಕ್ಕಿದ್ದಾರೆ. 2014ರ ಪೂರ್ವದಲ್ಲಿ ಕಾಂಗ್ರೆಸ್ ನವರು ತಮಗಿಷ್ಟ ಬಂದಂತೆ ಆಡಳಿತ ಮಾಡಿ, ಯೋಜನೆಗಳಿಗೆ ಅವರ ಮನೆತನದ ಹೆಸರು ಇಟ್ಟಿದ್ದಾರೆ. ಪ್ರಜಾಧ್ವನಿಯನ್ನು ಹೂತಿಟ್ಟು ದಬ್ಬಾಳಿಕೆಯಿಂಸ ಸರ್ಕಾರ ನಡೆಸಿದ್ದಾರೆ. ಈಗ ಪ್ರಜಾಧ್ವನಿ ಎಂದು ಹೆಸರು ಇಟ್ಟುಕೊಂಡು ಯಾತ್ರೆ ಆರಂಭಿಸಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: Amit Shah: ಸಿಎಂ ಗಾದಿಗಾಗಿ ಪವಾರ್ ಕಾಲಿಗೆ ಬಿದ್ದ ಉದ್ಧವ್ ಠಾಕ್ರೆ, ಅಮಿತ್ ಶಾ ವಾಗ್ದಾಳಿ
ದೇಶದ ಆರ್ಥಿಕ, ಶಿಕ್ಷಣದಲ್ಲಿ ಸುಧಾರಣೆ ಪಿಎಂ ಮಾಡುತ್ತಿದ್ದಾರೆ. ನಮ್ಮ ಧ್ವನಿಯನ್ನು ನಿಲ್ಲಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಪಾರ್ಲಿಮೆಂಟ್ ನಲ್ಲಿ ಪಿಎಂ ಹೇಳಿದ್ದಾರೆ. ಸಂಡೂರಿನಲ್ಲಿ ವಿರೋಧ ಪಕ್ಷದವರಿಗೆ ಚಳಿಜ್ವರ ಬರಬೇಕು. 2023ರಲ್ಲಿ ರಾಜ್ಯದಲ್ಲಿ ಕಮಲದ ಹೂ ಅರಳಿಸಲು ಪ್ರತಿಯೊಬ್ಬರು ಪಣ ತೊಡಬೇಕು. ಗಣಿನಾಡಿನ ರಾಜಧಾನಿ ಸಂಡೂರು, ಹಣದ ಹೊಳೆ ಇರುವ ಕ್ಷೇತ್ರ ಅದು ಸಂಡೂರು ಕ್ಷೇತ್ರ. ಹಣವು ಎಲ್ಲಿ ಹೋಗುತ್ತೆ ಅದೊಂದು ರಸ್ತೆ, ಬೀದಿ ದೀಪ, ಚರಂಢಿಗೆ ಅಭಿವೃದ್ಧಿ ಸೀಮಿತ ಇದೆ. ಪ್ರಜಾಧ್ವನಿ ಮೂಲಕ ಕಾಂಗ್ರೆಸ್ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕೇಂದ್ರ ಸರಕಾರದ ಯೋಜನೆಗಳನ್ನು ತಮ್ಮದು ಎಂದು ಹೇಳುತ್ತಿದ್ದಾರೆ ಎಂದರು.