ಬಳ್ಳಾರಿ: ಬಳ್ಳಾರಿಯ ಕಂಪ್ಲಿಯಲ್ಲಿ ಮೀನು ಹಿಡಿಯುವಾಗ ಫಿಟ್ಸ್ ಬಂದು ಮೀನುಗಾರ ನದಿಗೆ ಬಿದ್ದ (Drowned In water) ಘಟನೆ ನಡೆದಿದೆ. ಕಂಪ್ಲಿ ಕೋಟೆಯ ಬಳಿ ತುಂಗಭದ್ರಾ ನದಿ ತಟದಲ್ಲಿ ಮೀನುಗಾರ ಕರ್ಪಣ್ಣ ಮೀನು ಹಿಡಿಯುವಾಗ ಫಿಟ್ಸ್ ಬಂದಿದೆ. ಈ ವೇಳೆ ಏಕಾಏಕಿ ನದಿಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ನದಿಯಲ್ಲಿ ಮುಳುಗಿದ್ದ ಕರ್ಪಣರನ್ನು ಕಂಡು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಂಪ್ಲಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಕರೆದುಕೊಂಡು ಹೋಗಿದ್ದಾರೆ.
ಮೇವು ತರಲು ಹೊಲಕ್ಕೆ ಹೋದ ರೈತ ನೀರುಪಾಲು
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಗೂರು ಗ್ರಾಮದಲ್ಲಿ ಮೇವು ತರಲು ಹೊದ ರೈತ ಹೊಲದಲ್ಲಿ ನೀರುಪಾಲಾಗಿದ್ದಾರೆ. ಕೃಷ್ಣಾ ನದಿ ಪ್ರವಾಹಕ್ಕೆ ರೈತ ಸಿದ್ದಪ್ಪ ಅಡಹಳ್ಳಿ(60) ಕೊಚ್ಚಿ ಹೋಗಿದ್ದಾರೆ. ಸದ್ಯ ಕೊಚ್ಚಿಹೋದ ಸಿದ್ದಪ್ಪನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸೈಕಲ್ ನಿಲ್ಲಿಸಿ ಮೇವು ತರಲು ಹೊಲಕ್ಕೆ ಹೋಗಿದ್ದಾಗ ನದಿ ನೀರು ಹೆಚ್ಚಾಗಿದೆ. ಹರಿಯುವ ನೀರಿನಲ್ಲಿ ನಡೆದುಕೊಂಡು ಬರುವಾಗ ಕೊಚ್ಚಿ ಹೋಗಿದ್ದಾರೆ.
ಇದನ್ನೂ ಓದಿ: Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು
ಓರಿಯಂಟಲ್ ಕಾರ್ಖಾನೆ ಕಾರ್ಮಿಕನ ಶವ ಪತ್ತೆ
ಓರಿಯಂಟಲ್ ಕಾರ್ಖಾನೆ ಕಾರ್ಮಿಕನ ಅನುಮಾನಾಸ್ಪದಾಗಿ ಶವ ಪತ್ತೆಯಾಗಿದೆ. ಕಲಬುರಗಿಯ ಚಿತ್ತಾಪೂರ ಪಟ್ಟಣದ ಪ್ರಗತಿ ಕಾಲೋನಿ ಬಳಿ ಶವ ಪತ್ತೆಯಾಗಿದೆ. ಶರೀಫ್ ನಿಜಾಮುದ್ದಿನ್ (22) ಎಂಬಾತನ ಮೃತದೇಹ ಸಿಕ್ಕಿದೆ. ಚಿತ್ತಾಪೂರ ಪಟ್ಟಣದ ನಾಸರಗಂಜ್ ಕಾಲೋನಿಯ ನಿವಾಸಿಯಾದ ಶರೀಫ್, ಚಿತ್ತಾಪೂರನ ಓರಿಯಂಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಶುಕ್ರವಾರ ಮಧ್ಯಾಹ್ನ ಹೋದ ಶರೀಫ್ ಶನಿವಾರ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈಲ್ವೆ ಟ್ರ್ಯಾಕ್ ಪಕ್ಕ ಮಹಿಳೆ ಮೃತದೇಹ ಪತ್ತೆ
ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ನಗರದ ಸವಳಂಗ ರಸ್ತೆ ರೈಲ್ವೆ ಗೇಟ್ ಬಳಿ ಮೃತದೇಹ ಪತ್ತೆಯಾಗಿದೆ. ತಾಳಗುಪ್ಪ ಬೆಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತಳ ಗುರುತು ಪತ್ತೆಯಾಗಿಲ್ಲ. ಸುಮಾರು 50 ವರ್ಷದ ಆಸುಪಾಸಿನ ಮಹಿಳೆಯ ಶವ ಪತ್ತೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ