Site icon Vistara News

NMDC | ರಾಜ್ಯದಲ್ಲಿ ಕಬ್ಬಿಣದ ಅದಿರು ಉತ್ಪಾದನೆ ಹೆಚ್ಚಿಸಲು ಎನ್‌ಎಂಡಿಸಿಯಿಂದ 900 ಕೋಟಿ ರೂ. ಹೂಡಿಕೆ

NMDC

ಬೆಂಗಳೂರು: ರಾಜ್ಯದಲ್ಲಿ ಕಬ್ಬಿಣದ ಅದಿರು ಉತ್ಪಾದನೆಯನ್ನು ಹೆಚ್ಚಿಸಲು ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ 900 ಕೋಟಿ ರೂ.ಗಳನ್ನು ಸಾರ್ವಜನಿಕ ವಲಯದ ಎನ್‌ಎಂಡಿಸಿ ಲಿಮಿಟೆಡ್‌ ಹೂಡಿಕೆ (NMDC) ಮಾಡಲಿದೆ.

ಎನ್‌ಎಂಡಿಸಿಯು ತನ್ನ ಕುಮಾರಸ್ವಾಮಿ ಮೈನ್ಸ್‌ನಲ್ಲಿ ವಾರ್ಷಿಕ ಉತ್ಪಾದನೆಯನ್ನು 70 ಲಕ್ಷ ಟನ್‌ಗಳಿಂದ 1 ಕೋಟಿ ಟನ್‌ಗಳಿಗೆ ವೃದ್ಧಿಸಲು ಉದ್ದೇಶಿಸಿದೆ. ಈ ಸಂಬಂಧ ಪರಿಸರ ಮತ್ತು ಅರಣ್ಯ ಇಲಾಖೆಯ ತಜ್ಞರ ಸಮಿತಿಯು ಕಳೆದ ನವೆಂಬರ್‌ 9-11ರಂದು ಅನುಮೋದನೆ ನೀಡಿದೆ.

ಸುಪ್ರೀಂಕೋರ್ಟ್‌ ಕಳೆದ ಆಗಸ್ಟ್‌ನಲ್ಲಿ ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಉತ್ಪಾದನೆಯ ಮಿತಿಯನ್ನು ವಾರ್ಷಿಕ 28 ದಶಲಕ್ಷ ಮೆಟ್ರಿಕ್‌ ಟನ್‌ಗಳಿಂದ (2.8 ಕೋಟಿ) 35 ದಶಲಕ್ಷ ಮೆಟ್ರಿಕ್‌ ಟನ್‌ಗಳಿಗೆ (3.5 ಕೋಟಿ) ವೃದ್ಧಿಸಿತ್ತು. ಕುಮಾರಸ್ವಾಮಿ ಮೈನ್ಸ್‌ ಬಳ್ಳಾರಿ ಜಿಲ್ಲೆಯಲ್ಲಿವೆ. ಈ ಗಣಿಗಾರಿಕೆಯ ಲೀಸ್‌ ಅನ್ನು 2022ರ ಜೂನ್‌ನಲ್ಲಿ ಕರ್ನಾಟಕ ಸರ್ಕಾರ ಮತ್ತೆ 20 ವರ್ಷಗಳ ಅವಧಿಗೆ ನವೀಕರಿಸಿದೆ.

Exit mobile version