Site icon Vistara News

Road Accident : ನಿಂತಿದ್ದ ಎತ್ತಿನ ಗಾಡಿಗೆ ಬೈಕ್‌ ಡಿಕ್ಕಿಯಾಗಿ ಇಬ್ಬರು ಮಕ್ಕಳ ಸಹಿತ ಮೂವರ ದಾರುಣ ಸಾವು

Road accident in kolar

ಬಳ್ಳಾರಿ : ನಿಂತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ (Bike hits Bullock Cart) ಓರ್ವ ವ್ಯಕ್ತಿ, ಇಬ್ಬರು ಮಕ್ಕಳು ಮೃತ ಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ (Ballary News) ಹೊಸ ದರೋಜಿ ಸಮೀಪ (Road Accident) ನಡೆದಿದೆ.

ಮೃತನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬುನಾಥ ಹಳ್ಳಿಯ ವೆಂಕಟೇಶ್(45), ಆಶಾ(8), ಅಖಿಲಾ(6) ಮೃತ ಪಟ್ಟಿದ್ದಾರೆ. ಜಂಬಕ್ಕ ಮತ್ತು ಸರಸ್ವತಿ ಗಾಯಗೊಂಡಿದ್ದಾರೆ.

ಜಂಬಕ್ಕ ಅವರ ತಮ್ಮ ಮಕ್ಕಳಾದ ಸರಸ್ವತಿ, ಆಶಾ ಮತ್ತು ಅಖಿಲಾಳೊಂದಿಗೆ ತಮ್ಮ ತವರೂರು ಆಂಧ್ರದ ಅರಿಕೇರಿಗೆ ಹೋಗಿ ಉಡಿತುಂಬಿಕೊಂಡು ಗಂಡನ‌ಮನೆ ಜಂಬುನಾಥನ ಹಳ್ಳಿಗೆ ಬಳ್ಳಾರಿವರೆಗೆ ಬಸ್ಸಿನಲ್ಲಿ ಬಂದಿದ್ದಾರೆ. ಜಂಬುನಾಥ ಹಳ್ಳಿಯ ಗ್ರಾಮದ ವೆಂಕಟೇಶ್ ಅವರು ಬಳ್ಳಾರಿಯಿಂದ ಬೈಕ್ ನಲ್ಲಿ ಊರಿಗೆ ಹೋಗುತ್ತಿದ್ದಾನೆ. ಇವರಿಗೆ ಊರಿಗೆ ಬಿಡುವುದಾಗಿ ಕರೆದುಕೊಂಡು ಹೋಗಿದ್ದಾ‌ನೆ.

ಬೈಕ್ ನಿಂತ ಎತ್ತಿನ‌ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮೃತ ಪಟ್ಟಿದ್ದಾರೆ. ಜಂಬಕ್ಕ ಮತ್ತು ಸರಸ್ವತಿಗೆ ಗಾಯಗಳಾಗಿದ್ದು ವಿಮ್ಸ್ ನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬೊಲೆರೊ ವಾಹನದ‌ ಟಯರ್‌ ಸ್ಫೋಟಗೊಂಡು ಪಲ್ಟಿ; ಮೂವರು ಸಾವು

ದಾವಣಗೆರೆ: ಬೊಲೆರೋ ಟೆಂಪೋ ವಾಹನದ ಟಯರ್ ಸ್ಫೋಟಗೊಂಡ ಪರಿಣಾಮ ವಾಹನ ಪಲ್ಟಿಯಾಗಿ (Road Accident) ಮೂವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಆರು ಜನರಿಗೆ ಗಾಯಗಳಾಗಿವೆ.

ದಾವಣಗೆರೆ ನಗರದ ಹೊರವಲಯದ ಪಂಜಾಬಿ ಡಾಬಾ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಮೃತರು ಹಾಗೂ ‌ಗಾಯಾಳುಗಳು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯಂ‌ ತಾಲೂಕಿನ ಸಿಂಗರಾಜನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಇವರು ಹಾವೇರಿ ಜಿಲ್ಲೆಯ ಬ್ಯಾಡಗಿಯಿಂದ ಮೆಣಸಿಕಾಯಿ ತೆಗೆದುಕೊಂಡು ತಮ್ಮೂರಿಗೆ ವಾಪಸ್ಸಾಗುವಾಗ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ :Murder Case : ಸಾಲ ತೀರಿಸಲು ವೃದ್ಧೆ ಸುಶೀಲಮ್ಮಳ ಉಸಿರುಗಟ್ಟಿಸಿ ಕೊಂದ

ಬಾಲಕ ಪಣಂಬೂರು ಬೀಚ್‌ನಲ್ಲಿ ನಾಪತ್ತೆ

ಮಂಗಳೂರು: ನಗರದ ಪಣಂಬೂರು ಬೀಚ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. ಬಾಗಲಕೋಟೆ ಮೂಲದ, ಪ್ರಸ್ತುತ ಮೀನಕಳಿಯಲ್ಲಿ (Mangalore News) ವಾಸವಾಗಿರುವ ತುಕರಾಮ (13) ನಾಪತ್ತೆಯಾದ ಬಾಲಕ.

ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತುಕರಾಮ, ಸಂಜೆ ಗೆಳೆಯರೊಡನೆ ಈಜಾಡಲು ತೆರಳಿದ್ದ ಎನ್ನಲಾಗಿದೆ. ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಸಿಲುಕಿ ಬಾಲಕ ನಾಪತ್ತೆಯಾಗಿದ್ದಾನೆ. ಜೀವರಕ್ಷಕ ದಳ, ಸ್ಥಳೀಯರಿಂದ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಪಣಂಬೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಾರಣಕ್ಕೆ ಹೋದ ಇಬ್ಬರು ಯುವಕರು ನಾಪತ್ತೆ

ಮಂಗಳೂರು: ಚಾರಣಕ್ಕೆ ಹೋದ ಇಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಬೆಂಗಳೂರು ಮೂಲದ 10 ಯುವಕರ ಚಾರಣಕ್ಕೆ ತೆರಳಿತ್ತು. ಸಂಜೆ ದುರ್ಗದ ಹಳ್ಳಿಯಿಂದ ಚಾರಣಕ್ಕೆ ತೆರಳಿದ್ದಋು. ಈ ವೇಳೆ ಇಬ್ಬರು ನಾಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.

Exit mobile version