ಬೆಳ್ತಂಗಡಿ: ಕಳೆದ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಗೆ ಎಂಟ್ರಿಕೊಟ್ಟ ಯುವ ನಾಯಕ ಹರೀಶ್ ಪೂಂಜಾ (Harish poonja) ಕಾಂಗ್ರೆಸ್‌ನ ವಸಂತ ಬಂಗೇರ ಅವರನ್ನು ಭಾರೀ ಅಂತರದಿಂದ ಸೋಲಿಸುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದ್ದರು. ಈ ಬಾರಿ ವಸಂತ ಬಂಗೇರ ಕಣದಿಂದ ಹಿಂದೆ ಸರಿದಿದ್ದು, ಅವರ ಜಾಗವನ್ನು ಯುವ ನಾಯಕ ರಕ್ಷಿತ್ ಶಿವರಾಂ ತುಂಬಿದ್ದರು. ಈಗ ಫಲಿತಾಂಶ (Belthangady Election Results) ಹೊರಬಿದ್ದಿದ್ದು, ಪುನಃ ಹರೀಶ್ ಪೂಂಜಾ ಅವರೇ ಜಯಗಳಿಸಿದ್ದಾರೆ.
ಹರೀಶ್ ಪೂಂಜಾಗೆ ಗೆಲುವು
ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಯನ್ನು ಮಾಡಿದ್ದಾರೆ. ಅಲ್ಲದೆ, ಡಬಲ್ ಎಂಜಿನ್ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಮತ ಕೇಳಿದ್ದಾರೆ. ಈ ವೇಳೆ ಹಿಂದುತ್ವವನ್ನೇ ಅಸ್ತ್ರಮಾಡಿಕೊಂಡು ಮತ ಕೇಳಿದ್ದ ಹರೀಶ್ ಪೂಂಜಾ ಅವರಿಗೆ ಹಿಂದು ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಎದುರು ಹಾಕಿಕೊಂಡಿದ್ದರು. ಈ ನಡುವೆಯೂ ಅವರು ಜಯಭೇರಿ ಬಾರಿಸಿದ್ದಾರೆ.
ರಕ್ಷಿತ್ ಶಿವರಾಂಗೆ ಸೋಲು
ಕಳೆದ ಮೂರೂವರೆ ವರ್ಷದಿಂದ ಕ್ಷೇತ್ರದಲ್ಲಿ ಓಡಾಡಿ ಇಮೇಜ್ ಹೆಚ್ಚಿಸಿಕೊಂಡಿರೋ ರಕ್ಷಿತ್ ಶಿವರಾಂ ಸದ್ಯ ಹರೀಶ್ ಪೂಂಜಾ ಅವರಿಗೆ ಸವಾಲೊಡ್ಡಿದ್ದರು. ಅಲ್ಲದೆ, ಕ್ಷೇತ್ರದ ಜನರು ಹಾಗೂ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದುಕೊಂಡಿದ್ದರು. ಇಷ್ಟಾದರೂ ಜನ ಇವರನ್ನು ಬೆಂಬಲಿಸಿಲ್ಲ.
ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ
ಕಳೆದ ಬಾರಿಯ ಫಲಿತಾಂಶ
ವಸಂತ ಬಂಗೇರ (ಕಾಂಗ್ರೆಸ್): 74530 ಮತ್ತು ಹರೀಶ್ ಪೂಂಜಾ(ಬಿಜೆಪಿ): 98417, ಗೆಲುವಿನ ಅಂತರ: 23880
ಈ ಬಾರಿಯ ಫಲಿತಾಂಶ ಇಂತಿದೆ
ಹರೀಶ್ ಪೂಂಜಾ (ಬಿಜೆಪಿ): 101004 | ರಕ್ಷಿತ್ ಶಿವರಾಂ (ಕಾಂಗ್ರೆಸ್): 82788| ನೋಟಾ: 892