Site icon Vistara News

ದಂಡ ವಿಧಿಸಿದ ಪೊಲೀಸರ ಬಳಿ ಸಾಕ್ಷಿ ಕೇಳಿದ ಬೆಂಗಳೂರು ಯುವಕ; ಕ್ಷಣದಲ್ಲೇ ಕೊಟ್ಟ ಪುರಾವೆ ನೋಡಿ ಟ್ವೀಟ್ ಡಿಲೀಟ್​ !

Traffic Police Bengalore

ಬೆಂಗಳೂರು: ತಾನು ಸಂಚಾರ ನಿಯಮ ಉಲ್ಲಂಘಿಸಿ, ದಂಡ ವಿಧಿಸಿದ ಪೊಲೀಸರ ಬಳಿ ‘ಸಾಕ್ಷಿ’ ಕೇಳಿದ ಯುವಕನಿಗೆ ಬೆಂಗಳೂರು ಸಂಚಾರ ಪೊಲೀಸರು ಸರಿಯಾಗಿ ಬಿಸಿಮುಟ್ಟಿಸಿದ್ದಾರೆ. ಆತ ಸಾಕ್ಷಿ ಕೇಳಿದ ಕೆಲ ನಿಮಿಷಗಳ ಒಳಗೆ ಬೆಂಗಳೂರು ಟ್ರಾಫಿಕ್​ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ, ಸಾಕ್ಷಿಯನ್ನೂ ಕೊಟ್ಟಿದ್ದಾರೆ. ಯುವಕನ ಪಾಡು ನೋಡಿ ನೆಟ್ಟಿಗರು ನಗುತ್ತಿದ್ದಾರೆ..!

ಹೆಲ್ಮೆಟ್​ ಇಲ್ಲದೆ ಗಾಡಿ ಓಡಿಸಿದ್ದ ಎಂಬ ಕಾರಣಕ್ಕೆ ಫೆಲಿಕ್ಸ್​ ರಾಜ್​ ಎಂಬುವರಿಗೆ ಪೊಲೀಸರು ಚಲನ್​ ಕಳಿಸಿದ್ದರು. ಆ ದಂಡ ನೋಡಿ ಬೇಸರಗೊಂಡ ರಾಜ್​ ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ತನಗೆ ಕಳಿಸಲಾದ ಚಲನ್​ ಫೋಟೋ ಹಾಕಿದ್ದರು. ಆ ಚಲನ್​ನಲ್ಲಿ ರಾಜ್​ ಸ್ಕೂಟರ್​​ನ ನಂಬರ್​ ಪ್ಲೇಟ್​ ಕಾಣುವಂಥ ಫೋಟೋ ಮಾತ್ರ ಇತ್ತು. ಅದನ್ನೇ ರಾಜ್​ ಪ್ರಶ್ನಿಸಿದ್ದರು. ‘ಹೀಗೆ ಚಲನ್​​ನಲ್ಲಿ ನನ್ನ ಸ್ಕೂಟರ್​ನ ಫೋಟೋ ಹಾಕಿದ್ದಿರಿ. ಇಲ್ಲಿ ನಾನು ಕಾಣಿಸುತ್ತಿಲ್ಲ. ಹೀಗಿರುವಾಗ ನಾನು ಹೆಲ್ಮೆಟ್​ ಇಲ್ಲದೆ ಗಾಡಿ ಓಡಿಸಿದ್ದೇನೆ ಎಂಬುದಕ್ಕೆ ನಿಮ್ಮ ಬಳಿ ಏನು ಸಾಕ್ಷಿಯಿದೆ?’ ಎಂದು ಪ್ರಶ್ನಿಸಿದ್ದರು. ಹಾಗೇ, ಈ ಮೊದಲೂ ನನಗೆ ಇದೇ ಅನುಭವ ಆಗಿದೆ. ತಪ್ಪು ಮಾಡದೆ ಇದ್ದರೂ ದಂಡ ತುಂಬಿದ್ದೇನೆ. ಈಗ ಮತ್ತೊಮ್ಮೆ ಸುಮ್ಮನೆ ದಂಡ ಕೊಡಲಾರೆ ಎಂದಿದ್ದರು. ಬೆಂಗಳೂರು ಟ್ರಾಫಿಕ್​ ಪೊಲೀಸ್​ ಮತ್ತು ಬೆಂಗಳೂರು ಸಿಟಿ ಪೊಲೀಸ್​ ಟ್ವಿಟರ್ ಖಾತೆಗಳನ್ನು ಟ್ಯಾಗ್​ ಕೂಡ ಮಾಡಿದ್ದರು.

ರಾಜ್​ ಟ್ವೀಟ್​ ಮಾಡಿ ಕೆಲವು ನಿಮಿಷಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್​ ಇನ್ನೊಂದು ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ ಮತ್ತು ಸಾಕ್ಷಿ ಕೇಳಿದ್ದ ಫೆಲಿಕ್ಸ್​ ರಾಜ್​ನನ್ನು ಟ್ಯಾಗ್​ ಮಾಡಿದ್ದಾರೆ. ಅದರಲ್ಲಿ ‘ಫೆಲಿಕ್ಸ್ ರಾಜ್​ ಹೆಲ್ಮೆಟ್​ ಇಲ್ಲದೆ ಟ್ರಾಫಿಕ್​​ನಲ್ಲಿ ಸ್ಕೂಟರ್​​ ಓಡಿಸುತ್ತಿದ್ದುದು ಕಂಡುಬಂದಿದೆ. ಅಂದರೆ ಫೆಲಿಕ್ಸ್ ರಾಜ್​ ಯಾವುದೋ ಸಿಗ್ನಲ್​​ನಲ್ಲಿ ನಿಂತಿದ್ದಾಗ ಪೊಲೀಸ್​ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ’. ಟ್ರಾಫಿಕ್​ ಪೊಲೀಸರು ಈ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಫೆಲಿಕ್ಸ್ ರಾಜ್​ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಎಂಥಾ ಎಪಿಕ್​ ರಿಪ್ಲೈ ಕೊಟ್ಟರು ಪೊಲೀಸರು ಎಂದು ಸೋಷಿಯಲ್​ ಮೀಡಿಯಾ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ.

ಫೆಲಿಕ್ಸ್​ ರಾಜ್​ ಮಾಡಿದ್ದ ಟ್ವೀಟ್. ಪೊಲೀಸರಿಂದ ರಿಪ್ಲೈ ಬರುತ್ತಿದ್ದಂತೆ ಡಿಲೀಟ್ ಮಾಡಲಾಗಿದೆ.

ಇದನ್ನೂ ಓದಿ: Viral Video | ಜಕಾರ್ತದಲ್ಲಿ ಬೆಂಕಿಯಿಂದ ಹೊತ್ತಿ ಉರಿದ ಮಸೀದಿ; ಕುಸಿದು ಬಿದ್ದ ಬೃಹತ್​ ಗುಮ್ಮಟ

Exit mobile version