ಬೆಂಗಳೂರು ಗ್ರಾಮಾಂತರ: ಪೊಲೀಸರ ದಿಕ್ಕು ತಪ್ಪಿಸಲು ಹೋದ ಸಪ್ಲೇಯರ್ (Attempt To Murder) ಜೈಲುಪಾಲಾಗಿದ್ದಾನೆ. ಮಂಜಪ್ಪ ತನಗೆ ಅನ್ನ ಹಾಕಿದ ಮಾಲೀಕನ ಕೊಲೆ ಮಾಡಲು ಯತ್ನಿಸಿ ಪೊಲೀಸರಿಗೆ ಲಾಕ್ ಆದ ಆರೋಪಿಯಾಗಿದ್ದಾನೆ.
ಕಳೆದ ಜೂ.18ರಂದು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸಿಲಿಕಾನ್ ಟೌನ್‌ನಲ್ಲಿ ಕುಂದಾಪುರ ಮೂಲದ ವಿಜಯೇಂದ್ರ ಶೆಟ್ಟಿ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮಂಜುನಾಥ್ ಟಿಪನ್ ಸೆಂಟರ್ ಮಾಲೀಕನಾಗಿರುವ ವಿಜಯೇಂದ್ರ, ಆ ದಿನ ರಾತ್ರಿ ಮಲಗಿದ್ದ ವೇಳೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು.
ವಿಜಯೇಂದ್ರರ ಚಿರಾಟ ಕೇಳಿ ಅಕ್ಕ-ಪಕ್ಕದವರು ಸಹಾಯಕ್ಕೆ ಧಾವಿಸಿದ್ದರು. ಬಳಿಕ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆಗೀಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಯಾಕಂದರೆ ಮಾಲೀಕನ ಹೆಣ ಉರುಳಿಸಲು ಜತೆಗೆ ಇದ್ದ ಹೋಟೆಲ್ ಸಿಬ್ಬಂದಿಯೇ ಮುಂದಾಗಿದ್ದ.
ಮಾಲೀಕ ವಿಜಯೇಂದ್ರ ಹೋಟೆಲ್‌ನಲ್ಲಿ ದಿನನಿತ್ಯ ಬಾಯಿಗೆ ಬಂದಂತೆ ಬಯ್ಯುತ್ತಿದ್ದರು. ಇದರಿಂದ ಕುಪಿತಗೊಂಡಿದ್ದ ಸಪ್ಲೇಯರ್ ಮಂಜಪ್ಪನಿಂದ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ವಿಜಯೇಂದ್ರ ಮಲಗಿದ್ದ ವೇಳೆ ಎಂಟ್ರಿ ಕೊಟ್ಟ ಮಂಜಪ್ಪ ಜಿಮ್ ರಾಡ್‌ನಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿ ಕಾಲ್ಕಿತ್ತಿದ್ದ.
ರಕ್ತದ ಮಡುವಿನಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ ವಿಜಯೇಂದ್ರ ಅವರನ್ನು ಸ್ಥಳೀಯರು, ಹೋಟೆಲ್ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ದರು. ಬೆಳಗ್ಗೆ ವಾಪಸ್ ಕೃತ್ಯ ನಡೆದ ಸ್ಥಳಕ್ಕೆ ಬಂದಿದ್ದ ಮಂಜಪ್ಪ, ಏನು ಗೊತ್ತಿಲ್ಲದಂತೆ ನಾಟಕವಾಡಿದ್ದ. ಮಾತ್ರವಲ್ಲ ಯಾವುದೇ ಅಂಜಿಕೆಯಿಲ್ಲದೇ ಮಾಧ್ಯಮಗಳಿಗೆ ಹೇಳಿಕೆಯನ್ನೂ ಕೊಟ್ಟಿದ್ದ.
ಆದರೆ ಪೊಲೀಸರ ತನಿಖೆ ವೇಳೆ ಸಪ್ಲೇಯರ್ ಮಂಜಪ್ಪನ ಕೃತ್ಯ ಬಯಲಾಗಿತ್ತು. ಸದ್ಯ ಆರೋಪಿ ಮಂಜಪ್ಪನನ್ನು ಬಂಧಿಸಿರುವ ಪೊಲೀರು ಜೈಲಿಗೆ ಅಟ್ಟಿದ್ದಾರೆ. ಇತ್ತ ವಿಜಯೇಂದ್ರ ಮಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ವಿಜಯೇಂದ್ರ ಕೋಮಾ ಸ್ಥಿತಿಯಲ್ಲಿದ್ದಾರೆ.
ಇದನ್ನೂ ಓದಿ: Murder case : ಸ್ನೇಹಿತನಿಂದಲೇ ಕೊಲೆಯಾದಳು ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ
ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ 66 ವಸ್ತುಗಳು ಎಫ್ಎಸ್ಎಲ್‌ಗೆ ರವಾನೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renuka Swamy Murder Case) ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ರೇಣುಕಾಸ್ವಾಮಿ ಬಳಸಿದ ವಸ್ತುಗಳು, ಆತನ ಶವ ಪರೀಕ್ಷೆ ವೇಳೆ ಸಂಗ್ರಹಿಸಿದ ಹಾಗೂ ಆರೋಪಿಗಳಿಂದ ವಶಕ್ಕೆ ಪಡೆದ ವಸ್ತುಗಳನ್ನು ಎಫ್ಎಸ್ಎಲ್‌ಗೆ ರವಾನೆ ಮಾಡಲಾಗಿದೆ.
ರೇಣುಕಾಸ್ವಾಮಿಯ ಬಟ್ಟೆಗಳು ಸೇರಿ ಇನ್ನಿತರ ವಸ್ತುಗಳು, ಸಿಸಿಟಿವಿ ಫುಟೇಜ್, ಮೊಬೈಲ್ ಫೋನ್‌ಗಳು ಸೇರಿ 66 ವಸ್ತುಗಳನ್ನು ಎಫ್ಎಸ್ಎಲ್‌ಗೆ ರವಾನೆ ಮಾಡಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ಪಾತ್ರ ತಿಳಿಯಲು ಅವರಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವನ್ನು ಎಫ್ಎಸ್ಎಲ್‌ಗೆ ಕಳುಹಿಸಿ ತನಿಖಾ ತಂಡ ವರದಿ ಪಡೆಯುತ್ತಿದೆ.
ರೇಣುಕಾಸ್ವಾಮಿ ಸಾವಿನ ಅಸಲಿ ಸಮಯ ಪತ್ತೆಗೆ ಮುಂದಾದ ಪೊಲೀಸರು
ನಟ ದರ್ಶನ್ ಮತ್ತು ಗ್ಯಾಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ಸಾವಿನ ಅಸಲಿ ಸಮಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ವಿಧಿ ವೈದ್ಯಶಾಸ್ತ್ರ ಪ್ರಾಧ್ಯಾಪಕರಿಗೆ ಪೊಲೀಸರಿಂದ ಪತ್ರ ಬರೆಯಲಾಗಿದ್ದು, ರೇಣುಕಾಸ್ವಾಮಿ ಯಾವ ದಿನ, ಯಾವ ಸಮಯಕ್ಕೆ ಸಾವನ್ನಪ್ಪಿದ್ದಾನೆ ಎಂಬುದನ್ನು ಪರಿಶೀಲಿಸಿ ಸ್ಪಷ್ಟವಾದ ವರದಿ ನೀಡುವಂತೆ ಕೋರಲಾಗಿದೆ.
ರೇಣುಕಾಸ್ವಾಮಿ ಸಾಯುವ ಮುನ್ನ ಸಂಜೆ ಸುಮಾರು 4.30 ರಿಂದ 5 ಗಂಟೆಯ ನಡುವೆ ಆಹಾರ ಸೇವನೆ ಮಾಡಿದ್ದ ಬಗ್ಗೆ ತಿಳಿದುಬಂದಿದೆ. ಹೀಗಾಗಿ ರೇಣುಕಾಸ್ವಾಮಿ ಮರಣದ ನಂತರ ಆತನ ದೇಹದಲ್ಲಿ ಉಂಟಾಗುವ ಬದಲಾವಣೆ, ಮೃತದೇಹ ಫ್ರೀಜರ್‌ನಲ್ಲಿ ಇಟ್ಟಿರುವ ಸಮಯವನ್ನು ಪರಿಗಣನೆಗೆ ತೆಗೆದುಕೊಂಡು ಪರಿಶೀಲಿಸಬೇಕು ಎಂದು ಕಾಮಾಕ್ಷಿಪಾಳ್ಯ ಪೊಲೀಸರು, ವಿಕ್ಟೋರಿಯಾ ಆಸ್ಪತ್ರೆ ವಿಧಿ ವೈಧ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ