Site icon Vistara News

ವಿದ್ಯುತ್‌ ತಂತಿ ತುಂಡಾಗಿ ಬಿದ್ದು ಸೈಕಲ್‌ ಸವಾರ ಮೃತ್ಯು

electric shock

ಆನೇಕಲ್: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಅಮಾಯಕ ಬಲಿಯಾಗಿದ್ದಾನೆ. ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ತಂತಿ ತುಂಡಾಗಿ ಬಿದ್ದು ವಿದ್ಯುತ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿ ನಡೆದ ದುರ್ಘಟನೆಯಿದು. ದೊಮ್ಮಸಂದ್ರದ ಸಂತೆ ಬೀದಿಯ ಕಾವೇರಮ್ಮ ದೇವಾಲಯದ ಬಳಿ ಅವಘಡ ನಡೆದಿದೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಮಹೇಶ್ (47) ಅವರ ಮೇಲೆ 11 ಕೆವಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ತಂತಿ ಬಿದ್ದ ತಕ್ಷಣ ಬೆಂಕಿ ಹೊತ್ತಿ ಉರಿದಿದೆ. ಕೊಮ್ಮಸಂದ್ರದವರಾದ ಮಹೇಶ್‌ ಕೂಲಿ ಕೆಲಸಕ್ಕೆಂದು ಸೈಕಲ್‌ನಲ್ಲಿ ಹೋಗುತ್ತಿದ್ದರು. ಅವರ ಪ್ರಾಣ ಸ್ಥಳದಲ್ಲೇ ಹೋಗಿದೆ.

ಈ ಹಿಂದೆಯೇ ವಿದ್ಯುತ್‌ ತಂತಿ‌ ಕೆಳಗೆ ಜಗ್ಗಿದೆ ಎಂದು ಬೆಸ್ಕಾಂಗೆ ದೂರು ನೀಡಲಾಗಿತ್ತು. ಎಇ ದಿನೇಶ್‌ ಎಂಬವರಿಗೆ ಮಾಹಿತಿ ನೀಡಿದ್ದರೂ ಬೇಜವಾಬ್ದಾರಿ ಉತ್ತರ ನೀಡಿದ್ದರು. ದುರ್ಘಟನೆ ಸಂಭವಿಸಿದರೂ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಸಂತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನ ಇದ್ದಿದ್ದರೆ ದೊಡ್ಡ ಮಟ್ಟದ ಅವಘಡ ಸಂಭವಿಸುತ್ತಿತ್ತು ಎಂದು ಬೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Leopard attack | ದೇವಸ್ಥಾನಕ್ಕೆ ಹೋಗಿದ್ದ ಪದವಿ ವಿದ್ಯಾರ್ಥಿ ಮೇಲೆ ಚಿರತೆ ದಾಳಿ, ಯುವಕ ಸ್ಥಳದಲ್ಲೇ ಬಲಿ

Exit mobile version