Site icon Vistara News

Brutally Assaulted | ಗಾಂಜಾ ಮತ್ತಿನಲ್ಲಿದ್ದ ಕಿರಾತಕರಿಂದ ಪೊಲೀಸ್ ಸಿಬ್ಬಂದಿ ಮೇಲೆಯೇ ದಾಳಿ

Brutally Assaulted

ಆನೇಕಲ್: ಗಾಂಜಾ ಮತ್ತಿನಲ್ಲಿದ್ದ ಯುವಕರಿಗೆ ಬುದ್ಧಿವಾದ ಹೇಳಿದ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆನೇಕಲ್‌ನ ದಿನ್ನೂರು ಬಳಿಯ ನೀಲಗಿರಿ ತೋಪಿನಲ್ಲಿ ನಡೆದಿದೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ಅಮಾಯಕ ಜನರನ್ನು ಅಡ್ಡಗಟ್ಟಿ ಹಲ್ಲೆ ಹಾಗೂ ದರೋಡೆ ಮಾಡುತ್ತಿದ್ದ ಯುವಕರ ಗುಂಪು ಕೃತ್ಯ (Brutally Assaulted) ಎಸಗಿದೆ.

ರಂಗನಾಥ್ ಹಲ್ಲೆಗೊಳಗಾದ ಪೊಲೀಸ್‌ ಪೇದೆ. ಆನೇಕಲ್‌ನ ದೇವರಕೊಂಡಪ್ಪ ವೃತದಲ್ಲಿ ಗಾಂಜಾ ಮತ್ತಿನಲ್ಲಿ ನಡುರಸ್ತೆಗೆ ಬೈಕ್ ನಿಲ್ಲಿಸಿಕೊಂಡು ಓಡಾಡುವ ಜನರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ವರುಣ್ ಅಲಿಯಾಸ್ ಕೆಂಚ, ಕಿಶೋರ್ ಅಲಿಯಾಸ್ ಡ್ಯಾನಿ, ಚೇತನ್, ಸೋಮಶೇಖರ್‌ ಎಂಬ ಆರೋಪಿಗಳಿಗೆ ಆನೇಕಲ್ ಲೀಸ್ ಠಾಣೆಯ ಪೇದೆ ರಂಗನಾಥ್ ಬುದ್ಧಿವಾದ ಹೇಳಿದ್ದಾರೆ.

ಇದನ್ನೂ ಓದಿ | Road accident | ಬ್ರೇಕ್ ಫೇಲ್ ಆಗಿ ಅರಣ್ಯಕ್ಕೆ ನುಗ್ಗಿದ ಅಯ್ಯಪ್ಪ ಮಾಲಾಧಾರಿಗಳಿದ್ದ ಮಿನಿ ಬಸ್: 15 ಜನರಿಗೆ ಗಾಯ

ನಂತರ ಮತ್ತಿನಲ್ಲಿದ್ದ ಗ್ಯಾಂಗ್ ಕರ್ತವ್ಯ ನಿರತ ರಂಗನಾಥ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಕ್‌ಗಳಲ್ಲಿ ತೆಗದುಕೊಂಡು ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರು ತೋಪಿನ ಕಡೆಗೆ ಹೋಗಿದ್ದಾರೆ. ಇವರನ್ನು ಬಿಟ್ಟರೆ ಯಾವುದಾದರೂ ಅಪರಾಧ ಕೃತ್ಯ ಎಸಗುತ್ತಾರೆಂದು ಹಿಂಬಾಲಿಸಿದ ರಂಗನಾಥ್ ತೋಪಿನ ಕಡೆ ಬರುತ್ತಿದ್ದಂತೆ ಸುತ್ತವರಿದ ಕಿರಾತಕರು ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ.

ಖಾಕಿ ಸಮವಸ್ತ್ರದಲ್ಲಿ ಇರುವ ಪೋಲೀಸ್ ಎಂದು ತಿಳಿದಿದ್ದರೂ ಪುಂಡರು ರಂಗನಾಥ್ ಮರ್ಮಾಂಗ ಹಾಗೂ ದೇಹದ ಹಲವಾರು ಕಡೆ ಹಲ್ಲೆ ಮಾಡಿ ನಾಲ್ವರು ಯುವಕರ ತಂಡ ಎಸ್ಕೇಪ್ ಆಗಿದೆ. ಎರಡು ಬೈಕ್‌ನಲ್ಲಿ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಯಾಳು ಪೇದೆ ರಂಗನಾಥ್ ಅವರನ್ನು ಚಿಕಿತ್ಸೆಗಾಗಿ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಬೆಂಗಳೂರು ಗ್ರಾಮಾಂತರ ಎಎಸ್‌ಪಿ ಪುರುಷೋತ್ತಮ್ ಭೇಟಿ ನೀಡಿ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ | High court order | ಅಶ್ಲೀಲ ವಿಡಿಯೊ ಅಪ್‌ಲೋಡ್‌: ಮೊಬೈಲ್‌ ಸಿಮ್‌ ನನ್ನದಲ್ಲ ಎಂದರೂ ಎಫ್‌ಐಆರ್‌ ರದ್ದಾಗಲ್ಲ!

Exit mobile version