Site icon Vistara News

Cracker Tragedy : ಅತ್ತಿಬೆಲೆ ಪಟಾಕಿ ದುರಂತ ಬಲಿ ಸಂಖ್ಯೆ 17ಕ್ಕೇರಿಕೆ, ಅಂಗಡಿ ಕಾರ್ಮಿಕನ ದಾರುಣ ಮರಣ

Attibele Cracker tragedy 17th death

ಆನೇಕಲ್: ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದ ಬಾಲಾಜಿ ಟ್ರೇಡರ್ಸ್ ಪಟಾಕಿ ಅಂಗಡಿಯಲ್ಲಿ (Fireworks shop) ನಡೆದ ಅಗ್ನಿ ದುರಂತದಲ್ಲಿ (Attibele Fire Accident) ಮೃತಪಟ್ಟವರ ಸಂಖ್ಯೆ 17ಕ್ಕೇರಿದೆ. ಅಕ್ಟೋಬರ್‌ 7ರಂದು ಮಧ್ಯಾಹ್ನದ ಹೊತ್ತಿಗೆ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು (Cracker Tragedy) ಅಂದೇ 14 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮುಂದೆ ಹಂತ ಹಂತವಾಗಿ ಇಬ್ಬರು ಪ್ರಾಣ ಕಳೆದುಕೊಂಡು ಸಾವಿನ ಸಂಖ್ಯೆ 16ಕ್ಕೆ ಏರಿತ್ತು. ಇದೀಗ ಮಂಗಳವಾರ (ಅಕ್ಟೋಬರ್‌ 17) ಅಂಗಡಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ರಾಜೇಶ್‌ ಪ್ರಾಣ ಕಳೆದುಕೊಂಡಿದ್ದಾನೆ. ಅಲ್ಲಿಗೆ ಬಲಿಯಾದವರ ಸಂಖ್ಯೆ 17ಕ್ಕೇರಿದಂತಾಗಿದೆ. ಇನ್ನೂ ಇಬ್ಬರು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಮೃತ್ಯು

ಅಂದು ದುರಂತದಲ್ಲಿ ಗಾಯಗೊಂಡಿದ್ದ ತಮಿಳುನಾಡು ಮೂಲದ ರಾಜೇಶ್‌ (19) ಅವರನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರೀಗ ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ. ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದ ಮೂವರು ಗಾಯಾಳುಗಳ ಪೈಕಿ ಈಗ ಇಬ್ಬರು ಮೃತಪಟ್ಟಂತಾಗಿದೆ.

ಪಟಾಕಿ ಮಳಿಗೆ ಮಾಲೀಕ ನವೀನ್, ಗ್ರಾಹಕ ವೆಂಕಟೇಶ್ ಹಾಗೂ ಕಾರ್ಮಿಕ ರಾಜೇಶ್ ಅವರು ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಪೈಕಿ ತನ್ನ ಗೆಳೆಯನ ಬರ್ತ್‌ಡೇಗೆ ಪಟಾಕಿ ಕೊಳ್ಳಲು ಬಂದಿದ್ದ ಬಾಡಿ ಬಿಲ್ಡರ್‌ ಕೂಡಾ ಆಗಿದ್ದ ಫೋಟೋ ಗ್ರಾಫರ್‌ ವೆಂಕಟೇಶ್‌ ಮತ್ತು ಈಗ ಕಾರ್ಮಿಕ ರಾಜೇಶ್‌ ಮೃತಪಟ್ಟಿದ್ದಾರೆ. ಪಟಾಕಿ ಅಂಗಡಿ ಮಾಲೀಕ ನವೀನ್‌ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: Fire Accident: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದ ಮ್ಯಾಜಿಸ್ಟೀರಿಯಲ್‌ ತನಿಖೆಗೆ ಆದೇಶ

ಐವರ ಮೇಲೆ ಕೇಸು ದಾಖಲು

ಅತ್ತಿಬೆಲೆ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 285, 286, 337, 338, 427, 304 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಕಾರಣರಾದ ಆರೋಪಿ ಲೈಸನ್ಸ್‌ ಹೊಂದಿದ್ದ ರಾಮಸ್ವಾಮಿ ರೆಡ್ಡಿ, ಆತನ ಪುತ್ರ ನವೀನ್ ರೆಡ್ಡಿ ಹಾಗೂ ಜಾಗದ ಮಾಲೀಕರಾದ ಜಯಮ್ಮ ಹಾಗೂ ಪುತ್ರ ಅನಿಲ್ ರೆಡ್ಡಿ, ಅಂಗಡಿ ಮ್ಯಾನೇಜರ್ ಲೋಕೇಶ್ ವಿರುದ್ಧ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಪಟಾಕಿ ಮಳಿಗೆಗಳು ಭಸ್ಮ, 9 ಮಹಿಳೆಯರು ಸೇರಿ 11 ಜನರು ಮೃತ

ಅತ್ತಿಬೆಲೆ ದುರಂತದಲ್ಲಿ ಪ್ರಾಣ ಕಳೆದುಕೊಂಡವರು

1.ಗಿರಿ ಬಿನ್ ವೇಡಿಯಪ್ಪನ್‌
2. ಚೀನ್ ಬಿನ್ ಲೇಟ್ ವೇಡಿಯಪ್ಪನ್‌
3. ಜಯರಾಘವನ್
4. ವಿಳಂಬರತಿ ಬಿನ್ ಸೆಂದಿಲ್
5.ಆಕಾಶ ಬಿನ್ ರಾಜಾ
6. ವೇಡಿಯಪ್ಪನ್
7. ಆದಿಕೇಶವ ಬಿನ್ ಪೆರಿಯಾಸ್ವಾಮಿ
(ಇವೆರಲ್ಲರೂ ಧರ್ಮಪುರಿ ಜಿಲ್ಲೆಯ ಅಮ್ಮಾಪೇಟ್ ನಿವಾಸಿಗಳು)

8.ಪ್ರಕಾಶ್ ಬಿನ್ ರಾಮು:ತಿರುವಣ್ಣಾಮಲೈ ಮೂಲದವರು
9. ವಸಂತರಾಜು ಬಿನ್ ಗೋವಿಂದ ರಾಜು
10.ಅಬ್ಬಾಸ್ ಬಿಸ್ ಶಂಕರ್
11. ಪ್ರಭಾಕರನ್ ಬಿನ್ ಗೋಪಿನಾಥ್
(ಮೇಲಿನ ಮೂವರು ಕಲ್ಕುರ್ಚಿ ಜಿಲ್ಲೆಯ ವೆಡುತ್ತ ವೈನತ್ತಂ ಮೂಲದವರು)

12. ನಿತೀಶ್ ಬಿನ್ ಮೇಘನಾಥ್
13. ಸಂತೋಷ್ ಬಿನ್ ಕುಮಾರ್
(ಇಬ್ಬರು ತಿರುಪತ್ತೂರು ಜಿಲ್ಲೆಯ ವೆಲ್ಲಕುಟೈ ಗ್ರಾಮದವರು)

14.ಮತ್ತೊಬ್ಬನ ಹೆಸರು ವಿಳಾಸ ಪತ್ತೆ ಆಗಿಲ್ಲ.

15. ದಿನೇಶ್‌ ಕಾರ್ಮಿಕ
16. ವೆಂಕಟೇಶ್‌, ಬೊಮ್ಮನಹಳ್ಳಿ ನಿವಾಸಿ
17. ರಾಜೇಶ್‌, ಅಂಗಡಿ ಕಾರ್ಮಿಕ

Exit mobile version