Site icon Vistara News

Crime News: ಬೆಲೆಯೇರಿಕೆ ಎಫೆಕ್ಟ್:‌ ಟೊಮೆಟೊ ಆಯ್ತು; ಈಗ ಶುಂಠಿ, ಹೂಕೋಸು ಕಳವು!

ginger theft

ದೇವನಹಳ್ಳಿ: ತರಕಾರಿ ಬೆಲೆಗಳು ಗಗನಕ್ಕೆ ಏರಿದ್ದು, ಟೊಮೆಟೊ ಕಳವು ಪ್ರಕರಣಗಳು ವರದಿಯಾಗುತ್ತಿವೆ. ಇದೇ ವೇಳೆಗೆ ಹೊಲದಲ್ಲಿದ್ದ ಶುಂಠಿ, ಹೂಕೋಸು ಕೂಡ ಕಳ್ಳರು ಕದ್ದೊಯ್ದ ಪ್ರಕರಣ (Crime News) ವರದಿಯಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ನಾಗಸಂದ್ರ ಮತ್ತು ದೊಡ್ಡ ತುಮಕೂರು ಗ್ರಾಮದಲ್ಲಿ ಘಟನೆ ನಡೆದಿದೆ. ದೊಡ್ಡ ತುಮಕೂರು ಗ್ರಾಮದ ರೈತ ಆಂಜಿನಪ್ಪನವರ ತೋಟದಲ್ಲಿದ್ದ ಸುಮಾರು 80 ಸಾವಿರ ರೂ. ಮೌಲ್ಯದ ಹೂಕೋಸು ಕಳ್ಳತನವಾಗಿದೆ. ನಾಗಸಂದ್ರ ಗ್ರಾಮದ ರೈತ ಬಸವರಾಜ್ ಎಂಬವರ ಜಮೀನಿನಲ್ಲಿ ಬೆಳೆದ ಶುಂಠಿ ಕಳವು ಮಾಡಲಾಗಿದೆ. ಇತ್ತೀಚೆಗಷ್ಟೇ ಲಕ್ಷ್ಮೀದೇವಿಪುರ ಗ್ರಾಮದಲ್ಲಿ ಖದೀಮರು 1.50 ಲಕ್ಷ ರೂ. ಮೌಲ್ಯದ ಟೊಮೆಟೊ ಕದ್ದಿದ್ದರು.

ಶುಂಠಿ ಬೆಲೆ ಕಿಲೋಗೆ 220 ರೂಪಾಯಿ ತಲುಪಿದೆ. ಇದರಿಂದಲೇ ಕಳವು ಆಗಿದೆ ಎಂದು ರೈತ ಬಸವರಾಜ್ ಅಳಲು ತೋಡಿಕೊಂಡಿದ್ದಾರೆ. ತರಕಾರಿ ಬೆಳೆದ ರೈತರು ರಾತ್ರಿಯಲ್ಲ ತೋಟಗಳಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಘಟನೆಗಳಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಟೊಮೆಟೊ ಬೆಲೆ ಗಗನಕ್ಕೆ; ಇದು ದಾಸ್ತಾನು ಅವ್ಯವಸ್ಥೆಯ ಫಲ

Exit mobile version