ಬೆಂಗಳೂರು ಗ್ರಾಮಾಂತರ: ಕೊನೆಗೂ ಪುಂಡ ಮಕ್ನಾ ಆನೆ (Elephant attack) ಸೆರೆಯಾಗಿದೆ. ಮಕ್ನಾ ಅಡ್ಡೆಗೆ ನುಗ್ಗಿದ ಭೀಮ, ಮಹೇಂದ್ರ ತಟ್ಟಗುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ (Elephant combing) ಸೆರೆಹಿಡಿದಿದ್ದಾರೆ.
ಡ್ರೋನ್ ಮೂಲಕ ಮಕ್ನಾ ಲೋಕೇಷನ್ ಟ್ರಾಕ್ ಮಾಡಿ ಬಳಿಕ ಮಾವುತರು, ಕಾವಾಡಿಗಳು ಸುತ್ತುವರಿದರು. ಮಾವುತರು ಮತ್ತು ಕಾವಾಡಿಗಳ ಮಾಹಿತಿ ಆಧರಿಸಿ ವೈದ್ಯರ ತಂಡ ಅಖಾಡಕ್ಕೆ ಇಳಿದರು. ತಗ್ಗು ಪ್ರದೇಶದಲ್ಲಿದ್ದ ಮಕ್ನಾ ಚಲನವಲನ ಆಧರಿಸಿ ಶಾರ್ಟ್ ಶೂಟರ್ ರಂಜನ್ ಶೂಟ್ ಮಾಡಿದ್ದಾರೆ.
ಸಮೀಪದ ದಿಬ್ಬದ ಮೇಲೆ ನಿಂತು ಡಾಟ್ ಆಗುತ್ತಿದ್ದಂತೆ ಆಕ್ರೋಶಗೊಂಡ ಮಕ್ನಾ ಆನೆ ಸುಮಾರು ಒಂದು ಕಿ.ಮೀ ದೂರ ಸಾಗಿ ನಿತ್ರಾಣಗೊಂಡಿದೆ. ನಿತ್ರಾಣಗೊಂಡಿರುವುದನ್ನು ವೈದ್ಯರು ಖಚಿತ ಪಡಿಸುತ್ತಿದ್ದಂತೆ ಭೀಮ ಮತ್ತು ಮಹೇಂದ್ರ ಸಾಕಾನೆ ಫೀಲ್ಡಿಗಿಳಿದಿದೆ.
ಭೀಮ ಹಾಗೂ ಮಹೇಂದ್ರ ಎದುರಿಗೆ ಬಾಲ ಬಿಚ್ಚದ ಮಕ್ನಾ ಆನೆಯನ್ನು ದಪ್ಪದಾಗಿರುವ ಹಗ್ಗದಿಂದ ಕಟ್ಟಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸೀಗೆ ಕಟ್ಟೆಯ ಆನೆ ಬಿಡಾರಕ್ಕೆ ರವಾನಿಸಿದ್ದಾರೆ.
ಸೆರೆಗೂ ಮುನ್ನ ಪುಂಡ ಮಕ್ನಾ ಕಾಡಾನೆಯ ಆರ್ಭಟ ಜೋರಾಗಿತ್ತು. ಈ ಹಿಂದೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಹಾವಳಿ ಎಬ್ಬಿಸಿದ್ದ ಮಕ್ನಾ ಆನೆ, ಅರಣ್ಯ ಸಿಬ್ಬಂದಿಯ ವಾಹನದ ಮೇಲೆ ಅಟ್ಯಾಕ್ ಮಾಡಿತ್ತು. ವಾಹನವನ್ನು ಹಿಂಬಾಲಿಸಿ ಅಟ್ಟಾಡಿಸಿತ್ತು. ಬನ್ನೇರುಘಟ್ಟ ಕಾಡಂಚಿನ ಭಾಗದಲ್ಲಿ ದಾಂಧಲೆ ಎಬ್ಬಿಸಿತ್ತು. ಮೂರು ಮಂದಿಯನ್ನು ತುಳಿದು ಕೊಂದು ಹಾಕಿತ್ತು.
ಇದನ್ನೂ ಓದಿ:Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ
ಕಾಫಿ ತೋಟದಲ್ಲಿ ಮಕ್ನಾ ಕಾಡಾನೆ ಸಾವು
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲದ ಹುಂಡಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಮಕ್ನಾ ಆನೆ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನೂ ಆಹಾರ ಅರಸಿ ಕಾಡಿನಿಂದ ನಾಡಿಗೆ ಕಾಡಾನೆ ಹಿಂಡು ಲಗ್ಗೆ ಇಟ್ಟಿವೆ. ಹುಂಡಿ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದು, ಹಗಲು ಹೊತ್ತಿನಲ್ಲೂ ಕಾಣಿಸಿಕೊಳ್ಳುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ