ದೊಡ್ಡಬಳ್ಳಾಪುರ: ಪರೀಕ್ಷೆಗೆ ಹೆದರಿದ ಯುವಕನೊಬ್ಬ ಡೆತ್‌ನೋಟ್ (Death Note) ಬರೆದಿಟ್ಟು ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ. ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದ, ಜಗದೀಶ್ (28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ನೆಲ್ಲುಕುಂಟೆ ಸಮೀಪದ ಮಜರಾಹೊಸಹಳ್ಳಿ ನಿವಾಸಿಯಾಗಿದ್ದ ಜಗದೀಶ್, ಎಂಎಎಂಎಡ್, ವ್ಯಾಸಂಗ ಮಾಡುತ್ತಿದ್ದ. ಮಾ.12ರಂದು ಮನೆಯಲ್ಲಿ ಎಲ್ಲರೂ ಊರಿಗೆ ಹೋದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಿನ್ನೆ ರಾತ್ರಿ ಜಗದೀಶ್ ತಾಯಿ ಮರಳಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತಿಲ್ಲ ಆ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ. ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನೆಲ್ಲುಕುಂಟೆ ಸಮೀಪದ ಮಜರಾಹೊಸಹಳ್ಳಿ ಘಟನೆ ನಡೆದಿದೆ.
ಇದನ್ನೂ ಓದಿ: Murder Case : ಬೆಂಗಳೂರಲ್ಲಿ ವಿದೇಶಿ ಮಹಿಳೆ ಅನುಮಾನಾಸ್ಪದ ಸಾವು; ಉಸಿರುಗಟ್ಟಿಸಿ ಕೊಂದನೇ ಹಂತಕ!
ಗೀತಂ ಯೂನಿರ್ವಸಿಟಿಯಲ್ಲಿ ಸ್ಟೂಡೆಂಟ್ಸ್ ಸೂಸೈಡ್! 7 ಮಂದಿ ವಿರುದ್ಧ ಎಫ್‌ಐಆರ್
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯಿರುವ ಗೀತಂ ವಿಶ್ವವಿದ್ಯಾಲಯದಲ್ಲಿ (Gitam University) ಮಾ.12ರಂದು ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ (Students Death) ಮೃತಪಟ್ಟಿದ್ದ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಫ್‌ಐಆರ್ ದಾಖಲಾಗಿದೆ. ಗೀತಂ ವಿವಿ ಉಪಕುಲಪತಿ, ಕಾಂಟ್ರಾಕ್ಟರ್, ಸೆಕ್ಯೂರಿಟಿ ಇನ್ಜಾರ್ಜ್ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಾಗಿದೆ.
ಮೃತ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಪ್ರಕರಣ ದಾಖಲಾಗಿದೆ. ಐಪಿಸಿ (IPC) 304 ಅಡಿಯಲ್ಲಿ ಗೀತಂ ವಿವಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಕೇಸ್ ಫೈಲ್ ಆಗಿದೆ.
ಮುಂಜಾಗ್ರತಾ ಕ್ರಮವಿಲ್ಲದೆ ಹಾಸ್ಟೆಲ್ ಕಟ್ಟಡ ಕಾಮಗಾರಿ ಹಾಗೂ ವಿದ್ಯಾರ್ಥಿಗಳು ಹೊರ ಹೋಗದಂತೆ ಸೆಕ್ಯೂರಿಟಿಗಳ ನೇಮಕ ಮಾಡದಿರುವುದು ಸೇರಿದಂತೆ ನಿರ್ಲಕ್ಷ್ಯದ ವಿರುದ್ದ ಉಪ ಕುಲಪತಿ ಆಚಾರ್ಯ, ವಿವಿ ಅಧ್ಯಕ್ಷ ಭರತ್, ಕಾಂಟ್ರಾಕ್ಟರ್ ಮುನಿಕೃಷ್ಣ, ಆಪರೇಷನ್ ಕಾಂಟ್ರಾಕ್ಟರ್ ವಿಜಯ್ ಭಾಸ್ಕರ್ ಹಾಗೂ ಸೆಕ್ಯೂರಿಟಿ ಇನ್ಚಾರ್ಜ್ ವಿಜಯ್ ಗಜ್ಜಿ, ರಾಘವೇಂದ್ರ, ವಾರ್ಡನ್ ಇನ್ಚಾರ್ಜ್ ಟಿಂಟೂ ಮತ್ತು ಕೊಪ್ಪಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident : ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು
ಏನಿದು ಘಟನೆ?
ಕಳೆದ ಮಂಗಳವಾರ ರಾತ್ರಿ ಗೀತಂ ವಿವಿ ಹಾಸ್ಟೆಲ್‌ನ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ. ಮೊದಲನೆ ವರ್ಷದ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಆಂಧ್ರದ ಕರ್ನೂಲ್ ಮೂಲದ ದಾಸರಿ ಬ್ರಹ್ಮಸಾಯಿರೆಡ್ಡಿ ಎಂಬಾತ ರಾತ್ರಿ ಊಟ ಮಾಡಿ, ನಂತರ ಮಹಡಿ ಮೇಲೆ ಹೋದವನೇ ಕೆಳಗೆ ಬಿದ್ದಿದ್ದ. ಆದರೆ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.
4 ತಿಂಗಳಲ್ಲಿ ಮೂವರು ಸೂಸೈಡ್
ಪ್ರತಿಷ್ಠಿತ ಗೀತಂ ವಿವಿಯಲ್ಲಿ ವಿದ್ಯಾರ್ಥಿಗಳ ಸೂಸೈಡ್ ಇದೇ ಮೊದಲಲ್ಲ.. ಕಳೆದ ನಾಲ್ಕು ತಿಂಗಳಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿದ್ಯಾರ್ಥಿಗಳ ಸಾವು ಅನುಮಾನಾಸ್ಪದವಾಗಿದೆ. ಕಳೆದ ನವಂಬರ್ ತಿಂಗಳಲ್ಲಿ ವಿದೇಶಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಮೃತಪಟ್ಟಿದ್ದಳು. ಫೆಬ್ರವರಿ 06ರಂದು ಮತ್ತೊಬ್ಬ ವಿದ್ಯಾರ್ಥಿ ರೈಲಿಗೆ ಸಿಲುಕಿ ಮೃತಪಟ್ಟಿದ್ದ. ಇದೀಗ ಹಾಸ್ಟೆಲ್ ಮಹಡಿ ಮೇಲಿಂದ ಬಿದ್ದು ಆಂಧ್ರ ಮೂಲದ ಮತ್ತೋರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ವಿದ್ಯಾರ್ಥಿಗಳ ಸಾಲು ಸಾಲು ಸಾವುಗಳಿಂದ ಇತರೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಹೆಚ್ಚಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯಾದರೂ, ವಿವಿಯಲ್ಲಿ ಕಿರುಕುಳ ಮತ್ತು ಮಾದಕ ದ್ರವ್ಯಗಳ ಬಳಕೆ ಆರೋಪವು ಕೇಳಿ ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ