Site icon Vistara News

Fire Accident : ವಿದ್ಯುತ್‌ ತಂತಿ ತಗುಲಿ ಕಂಟೇನರ್‌ನಲ್ಲಿದ್ದ 40 ಬೈಕ್‌ಗಳು ಸುಟ್ಟು ಭಸ್ಮ; ಕರೆಂಟ್‌ ಶಾಕ್‌ಗೆ ವಿಲವಿಲ ಒದ್ದಾಡಿ ರೈತ ಸಾವು

Fire Accident

ಆನೇಕಲ್: ರಾಷ್ಟ್ರೀಯ ಹೆದ್ದಾರಿಯ ರಾಯಕೋಟೆ ಸಮೀಪದ ಕೆಲಮಂಗಳ ಬಳಿಯ ಧಮ್ಮನರಹಳ್ಳಿ ಚಲಿಸುತ್ತಿದ್ದ ಕಂಟೇನರ್‌ ವಾಹನಕ್ಕೆ ವಿದ್ಯುತ್‌ ತಂತಿ (Fire Accident) ತಗುಲಿದೆ. ಪರಿಣಾಮ ಕ್ಷಣಾರ್ಧದಲ್ಲೇ ಬೈಕ್‌ಗಳನ್ನು ಸಾಗಿಸುತ್ತಿದ್ದ ಕಂಟೇನರ್‌ ವಾಹನವು ಧಗಧಗಿಸಿ ಹೊತ್ತಿ ಉರಿದಿದೆ.

ಟಿವಿಎಸ್ ಕಂಪನಿಯ ಸುಮಾರು 40 ದ್ವಿಚಕ್ರ ವಾಹನಗಳನ್ನು ಕಂಟೇನರ್‌ ಮೂಲಕ ಉತ್ತನಹಳ್ಳಿಯ ಗೋಡೌನ್‌ನಿಂದ ಕೊತ್ತಕೊಂಡಹಳ್ಳಿಗೆ ಕೊಂಡೊಯ್ಯುತ್ತಿದ್ದಾಗ ಈ ಅವಘಡ ನಡೆದಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಕಂಟೇನರ್ ವಾಹನಕ್ಕೆ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಕಂಟೇನರ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ 30 ಲಕ್ಷ ಬೆಲೆಬಾಳುವ 40 ದ್ವಿಚಕ್ರ ವಾಹನಗಳು ಬೆಂಕಿಗಾಹುತಿ ಆಗಿವೆ. ಅದೃಶ್ಯವಶಾತ್‌ ಬೆಂಕಿ ಕಾಣಿಸಿಕೊಳ್ಳುತ್ತಿದ್ದ ಚಾಲಕ ಹಾಗೂ ಕ್ಲಿನರ್‌ ಜಿಗಿದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ. ಏಕಾಏಕಿ ಕಂಟೇನರ್‌ ಸೇರಿ 40ವಾಹನಗಳು ಬೆಂಕಿಗಾಹುತಿಯಾದ ಕಾರಣಕ್ಕೆ ಸುತ್ತಲೂ ದಟ್ಟ ಹೊಗೆ ಆವರಿಸಿತ್ತು. ಮಧ್ಯೆ ರಸ್ತೆಯಲ್ಲೇ ಅಗ್ನಿ ಅವಘಡ ಸಂಭವಿಸಿದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕೆಲಮಂಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕರೆಂಟ್‌ ಶಾಕ್‌ಗೆ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ರೈತ

ಚಿಕ್ಕಮಗಳೂರಲ್ಲಿ ಕರೆಂಟ್‌ ಶಾಕ್‌ಗೆ ರೈತರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ತೋಟಕ್ಕೆ ನೀರು ಹಾಯಿಸಲು ಹೋದಗ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ರೈತ ದಿನೇಶ್ (34) ಎಂಬುವವರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಘಟನೆ ನಡೆದಿದೆ.

ಜಮೀನಿನಲ್ಲಿ ಮೋಟರ್ ಆನ್ ಮಾಡುವಾಗ ಕರೆಂಟ್ ಶಾಕ್ ಹೊಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಇಂತಹ ಶಿಕ್ಷಕರೂ ಇರ್ತಾರಾ? ಹೋಮ್‌ವರ್ಕ್‌ ಮಾಡದ ವಿದ್ಯಾರ್ಥಿಯ ಹಲ್ಲು ಮುರಿಯುವಂತೆ ಹೊಡೆದ ಆಸಿಫ್‌ ಈಗ ಪೊಲೀಸ್‌ ಅತಿಥಿ

ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಬಳಿಕ 40 ಬಾರಿ ಪ್ರೇಯಸಿಗೆ ಕರೆ ಮಾಡಿ ಮಾತನಾಡಿದ್ದ ಆರೋಪಿ ಮಿಹಿರ್‌ ಶಾ

ಮುಂಬೈ: ಜು. 7ರಂದು ಮಹಾರಾಷ್ಟ್ರದ ವರ್ಲಿಯಲ್ಲಿ ಬಿಎಂಡಬ್ಲ್ಯು ಕಾರು ಚಲಾಯಿಸಿ, ಸ್ಕೂಟರ್‌ಗೆ ಗುದ್ದಿ ಓರ್ವ ಮಹಿಳೆಯ ಸಾವಿಗೆ ಕಾರಣನಾದ ಶಿವಸೇನೆ ಮುಖಂಡ ರಾಜೇಶ್‌ ಶಾ (Rajesh Shah) ಅವರ ಪುತ್ರ ಮಿಹಿರ್‌ ಶಾ (Mihir Shah) ಕುರಿತಾದ ಕುತೂಹಲಕಾರಿ ಸಂಗತಿಯೊಂದು ಹೊರ ಬಿದ್ದಿದೆ. ಸ್ಕೂಟರ್‌ಗೆ ಡಿಕ್ಕಿ ಹೊಡೆದ ಬಳಿಕ ಆತ ಕಾರು ನಿಲ್ಲಿಸದೆ ಮುಂದೆ ಸಾಗಿದ್ದ ಆತ ತನ್ನ ಪ್ರೇಯಸಿಗೆ ಸುಮಾರು 40 ಬಾರಿ ಕರೆ ಮಾಡಿ ಮಾತನಾಡಿದ್ದ. ಬಳಿಕ ಆಟೋದಲ್ಲಿ ಆಕೆಯ ಮನೆಗೆ ತೆರಳಿ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ (Hit And Run Case).

ಸದ್ಯ ಮಿಹಿರ್‌ ಶಾ ಪೊಲೀಸರ ವಶದಲ್ಲಿದ್ದಾನೆ. ಪ್ರಕರಣದ ಸಂಬಂಧ ಆತನ ಗೆಳತಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಸೇನೆ (ಏಕನಾಥ್ ಶಿಂಧೆ ಬಣ) ನಾಯಕರಾಗಿರುವ ರಾಜೇಶ್‌ ಶಾ ಅವರ 24 ವರ್ಷದ ಪುತ್ರ ಮಿಹಿರ್‌ ಶಾ ಕುಡಿದು ಕಾರು ಚಲಾಯಿಸಿ ವರ್ಲಿಯಲ್ಲಿ ಮೀನು ಮಾರಾಟಗಾರ ದಂಪತಿ ಪ್ರದೀಪ್ ನಖ್ವಾ ಮತ್ತು ಕಾವೇರಿ ನಖ್ವಾ ಅವರು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದ. ಭಾನುವಾರ ಬೆಳಿಗ್ಗೆ 5.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಕಾರು ಡಿಕ್ಕಿ ಹೊಡೆದ ಪರಿಣಾಮ ಪ್ರದೀಪ್ ಎಸೆಯಲ್ಪಟ್ಟರೆ, ಕಾವೇರಿ ಅವರ ದೇಹ ಚಕ್ರಗಳ ಅಡಿಯಲ್ಲಿ ಸಿಕ್ಕಿ ಬಿದ್ದಿದ್ದು, ಕಾರು 1.5 ಕಿ.ಮೀ. ದೂರ ಎಳೆದೊಯ್ದಿತ್ತು.

ಅಪಘಾತ ನಡೆದ ನಂತರ ಮಿಹಿರ್‌ ಚಾಲಕ ರಾಜರ್ಷಿ ಬಿದಾವತ್‌ನನ್ನು ಡ್ರೈವರ್‌ ಸೀಟ್‌ನಲ್ಲಿ ಕೂರಿಸಿದ್ದನು. ಬಳಿಕ ಅವರು ಬಾಂದ್ರಾದ ಕಲಾ ನಗರಕ್ಕೆ ತೆರಳಿ ಅಲ್ಲಿ ನಂಬರ್ ಪ್ಲೇಟ್ ಅನ್ನು ತೆಗೆದು ತಲೆ ಮರೆಸಿಕೊಂಡಿದ್ದರು. ಈ ವೇಳೆ ಮಿಹಿರ್‌ ಶಾ ತನ್ನ ಪ್ರೇಯಸಿಯೊಂದಿಗೆ ಸುಮಾರು 40 ಬಾರಿ ಮಾತನಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕಲಾ ನಗರದಲ್ಲಿ ಕಾರು ನಿಲ್ಲಿಸಿ ಮಿಹಿರ್‌ ಶಾ ಆಟೋ ಹತ್ತಿ ಗೋರೆಗಾಂವ್‌ನಲ್ಲಿರುವ ಪ್ರೇಯಸಿ ಮನೆಗೆ ತೆರಳಿದ್ದ. ಅಪಘಾತದ ವಿಚಾರವನ್ನು ಪ್ರೇಯಸಿ ತನ್ನ ಸಹೋದರಿ ಜತೆಗೆ ಹಂಚಿಕೊಂಡಿದ್ದಳು. ಬಳಿಕ ಸಹೋದರಿ ಆಗಮಿಸಿ ಮಿಹಿರ್‌ನನ್ನು ಬೋರಿವಲಿಯಲ್ಲಿರುವ ತಮ್ಮ ಮನೆಗೆ ಕರೆದೊಯ್ದಿದ್ದರು. ಈ ವೇಳೆ ಮಿಹಿರ್‌ನ ಕುಟುಂಬ ಆತ ಎಲ್ಲಿ ತಲೆ ಮರೆಸಿಕೊಂಡಿದ್ದಾನೆ ಎನ್ನುವ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಪೊಲೀಸರ 14 ತಂಡ ಆತನಿಗಾಗಿ ತೀವ್ರ ಶೋಧ ನಡೆಸುತ್ತಿತ್ತು.

ಸೋಮವಾರ ರಾತ್ರಿ ಮಿಹಿರ್‌ ವಿರಾರ್‌ನಲ್ಲಿರುವ ತನ್ನ ಮನೆಗೆ ತೆರಳಿದ್ದ. ಮಂಗಳವಾರ ಬೆಳಿಗ್ಗೆ ಆತನ ಸ್ನೇಹಿತ ಅವದೀಪ್ ತನ್ನ ಫೋನ್ ಅನ್ನು 15 ನಿಮಿಷಗಳ ಕಾಲ ಆನ್ ಮಾಡಿದಾಗ ಪೊಲೀಸರು ಅವರಿರುವ ಜಾಗ ಪತ್ತೆ ಮಾಡಿ ಮಿಹಿರ್‌ನನ್ನು ವಶಕ್ಕೆ ಪಡೆದುಕೊಂಡಿದ್ದರು. ಮಿಹಿರ್‌ನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜುಲೈ 16ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.

10 ಲಕ್ಷ ರೂ. ಪರಿಹಾರ ಘೋಷಣೆ

ಬುಧವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮೃತ ಕಾವೇರಿ ನಖ್ವಾ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. “ನಾವು ಸಂತ್ರಸ್ತೆಯ ಕುಟುಂಬದೊಂದಿಗೆ ನಿಲ್ಲುತ್ತೇವೆ. ಅವರೂ ನಮ್ಮ ಕುಟುಂಬ. ಅವರಿಗೆ ಯಾವುದೇ ಸಹಾಯದ ಅಗತ್ಯವಿದ್ದರೂ ಅದು ಕಾನೂನು ಅಥವಾ ಆರ್ಥಿಕವಾಗಿರಲಿ ಒದಗಿಸಲಾಗುವುದು. ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಿದೆ” ಎಂದು ಅವರು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version