ದೇವನಹಳ್ಳಿ: ಬಾಳು ಕೊಡುವುದಾಗಿ ನಂಬಿಸಿ ಮಹಿಳೆಯನ್ನು ಎಲ್ಲ ರೀತಿಯಲ್ಲೂ ಬಳಸಿಕೊಂಡು ಇದೀಗ ಬೀದಿಗೆ ತಳ್ಳಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ವಂಚನೆ ಮಾಡಿದವನ ಮನೆ ಮುಂದೆ ಕುಳಿತು ಮಹಿಳೆ ಮತ್ತು ಕುಟುಂಬಸ್ಥರು ಧರಣಿ ನಡೆಸಿದರು. ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಘಟನೆ ನಡೆದಿದೆ.
ಪುರುಷೋತ್ತಮ್ ಎಂಬಾತ ಮಹಿಳೆಗೆ ಎಲ್ಲ ರೀಯಿಯಲ್ಲೂ ಬಳಸಿಕೊಂಡು, ಹಣ ಪಡೆದು ವಂಚನೆ ಮಾಡಿದವನು. ಇವರಿಬ್ಬರು ಕಳೆದ ಹಲವಾರು ವರ್ಷಗಳಿಂದ ಗಂಡ-ಹೆಂಡತಿಯಂತೆ ಒಂದೇ ಮನೆಯಲ್ಲಿ ವಾಸವಿದ್ದರು. ಮಹಿಳೆಗೆ ಆಕೆಯ ತವರು ಮನೆಯಿಂದ 10 ಲಕ್ಷ ಹಣ ಹಾಗೂ ಒಡವೆಗಳನ್ನು ಕೊಟ್ಟಿದ್ದರು. ಇದರ ಮೇಲೆ ಕಣ್ಣು ಹಾಕಿದ ಪುರುಷೋತ್ತಮಾ, ಮನೆ ಕಟ್ಟಿಸಿ ಕೊಡುವುದಾಗಿ ಪುಸಲಾಯಿಸಿ ಆಕೆಯಿಂದ ಹಣ ಪಡೆದು ಇದೀಗ ಬೀದಿಗೆ ತಳ್ಳಿದ್ದಾನೆ ಎಂದು ಆರೋಪಿಸಿದ್ದಾರೆ.
ಪುರುಷೋತ್ತಮನ ಮನೆ ಬಳಿ ಆಗಮಿಸಿದ ನೊಂದ ಮಹಿಳೆ ಕುಟುಂಬಸ್ಥರ ಜತೆ ಸೇರಿ ತಮಟೆ ಹೊಡೆಯುವ ಮೂಲಕ ಧರಣಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ವಂಚನೆ ಮಾಡಿದ ಪುರುಷೋತ್ತಮನ ವಿರುದ್ಧ ಮಹಿಳೆ ದೂರು ದಾಖಲಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : Inhuman Behaviour : ಹಣಕ್ಕಾಗಿ ರಾಕ್ಷಸಿ ಕೃತ್ಯ; ಬಾಲಕಿಯ ತೊಡೆಗೆ ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟ ದೊಡ್ಡಮ್ಮ
ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ಕೊಂದ ತಾಯಿ, ತಾನೂ ಇರಿದುಕೊಂಡು ಸಾಯಲು ಯತ್ನ
ಬೆಂಗಳೂರು: ಕೃತಕ ಬುದ್ಧಿಮತ್ತೆ (Artificial Intelligence) ಆಧರಿತ ಕಂಪನಿಯೊಂದರ ಸಿಇಒ ಸುಚನಾ ಸೇಠ್ ಗಂಡನೊಂದಿಗಿನ ಜಗಳದಿಂದ ಬೇಸತ್ತು ಮಗುವನ್ನು ಕೊಂದು ಹಾಕಿದ ಭಯಾನಕ ಘಟನೆ (Inhuman Behaviour) ಇನ್ನೂ ನೆನಪಿನಲ್ಲಿ ಹಸಿರಾಗಿರುವಾಗಲೇ ಇನ್ನೊಬ್ಬ ವಿದ್ಯಾವಂತ ತಾಯಿ ತನ್ನ ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ (Mother kills daughter and tries to end life). ಈ ಘಟನೆ ನಡೆದಿರುವುದು ಬೆಂಗಳೂರಿನ ಸೀಗೇಹಳ್ಳಿಯಲ್ಲಿ (Bangalore News).
ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ಕೌಟುಂಬಿಕ ಕಲಹದಿಂದ ನೊಂದ ಮಹಿಳೆಯೊಬ್ಬರು ತನ್ನ ಕೇವಲ ಎರಡು ವರ್ಷದ ಹೆಣ್ಣು ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿನ್ನಾ ಎಂಬ ಹೆಸರಿನ ತಾಯಿ ಎರಡು ವರ್ಷದ ಮಗು ಶೃತಿಕಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ, ಆಕೆ ಮಾತ್ರ ಬದುಕುಳಿದಿದ್ದಾಳೆ. ಗಂಡ ಲಕ್ಷ್ಮೀನಾರಾಯಣ ಪ್ರತಿ ದಿನವೂ ನೀಡುತ್ತಿದ್ದ ಹಿಂಸೆಯನ್ನು ತಡೆಯಲಾಗದೆ ಚಿನ್ನಾ ಈ ಅತಿರೇಕದ ಕೃತ್ಯಕ್ಕೆ ಮುಂದಾಗಿದ್ದಾರೆ.
ಲಕ್ಷ್ಮೀನಾರಾಯಣ ಮತ್ತು ಚಿನ್ನಾ ಮೂಲತಃ ಆಂಧ್ರ ಪ್ರದೇಶ ಚಿತ್ತೂರಿನ ದಂಪತಿ. ಲಕ್ಷ್ಮೀ ನಾರಾಯಣನಿಗೆ ಬೆಂಗಳೂರಿನಲ್ಲಿ ಉದ್ಯೋಗವಿತ್ತು. ಮೂರು ತಿಂಗಳ ಹಿಂದೆ ಆಂಧ್ರ ಪ್ರದೇಶದಿಂದ ಬಂದಿದ್ದ ಈ ಕುಟುಂಬ ಸೀಗೆಹಳ್ಳಿಯಲ್ಲಿ ವಾಸವಾಗಿತ್ತು. ಗಂಡ ಲಕ್ಷ್ಮೀನಾರಾಯಣ ಪ್ರತಿದಿನ ಹಿಂಸೆ ನೀಡುತ್ತಿದ್ದ ಬಗ್ಗೆ ಚಿನ್ನಾ ಬೇಸತ್ತು ಹೋಗಿದ್ದಳು ಎನ್ನಲಾಗಿದೆ. ಗಂಡನ ಕಾಟಕ್ಕೆ ಬೇಸತ್ತ ಪತ್ನಿ ಚಿನ್ನಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಳು. ಇಷ್ಟೆಲ್ಲ ನಡೆದರೂ ಮಾರ್ಚ್ 16ರಂದು ಲಕ್ಷ್ಮೀನಾರಾಯಣ ರಾತ್ರಿ ಮತ್ತೆ ಹೆಂಡತಿ ಜೊತೆ ಕಿರಿಕ್ ಮಾಡಿದ್ದ. ಇದರಿಂದ ಮನನೊಂದ ಆಕೆ ಮರುದಿನ ಬೆಳಗ್ಗೆ ಮಗುವನ್ನು ಉಸಿರುಗಟ್ಟಿಸಿ ಕೊಂದು ತಾನೂ ಚೂರಿಯಿಂದ ಕತ್ತು ಸೀಳಿಕೊಂಡಿದ್ದಾಳೆ.
ವಿಷಯ ತಿಳಿದ ಸ್ಥಳೀಯರು ತಕ್ಷಣವೇ ಮಗು ಮತ್ತು ಚಿನ್ನಾಳನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಮಗು ಬದುಕುಳಿಯಲಿಲ್ಲ. ಚಿನ್ನಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಗಿದೆ. ಇದೀಗ ಪೊಲೀಸರು ಗಂಡ ಲಕ್ಷ್ಮೀನಾರಾಯಣನ ದೂರಿನ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮತ್ತೆ ಮತ್ತೆ ನೆನಪಾಗುವ ರಚನಾ ಸೇಠ್ ಕೃತ್ಯ
ಬೆಂಗಳೂರಿನಲ್ಲಿನ ಮೈಂಡ್ ಫುಲ್ ಎಐ ಲ್ಯಾಬ್ ಎಂಬ ಕೃತಕ ಬುದ್ಧಿಮತ್ತೆ ಕಂಪೆನಿಯ ಸಿಇಓ ಆಗಿದ್ದ ರಚನಾ ಸೇಠ್ ಕಳೆದ ಜನವರಿ ಎಂಟರಂದು ಗೋವಾದ ಹೋಟೆಲ್‌ನಲ್ಲಿ ತನ್ನ ಮಗನನ್ನು ಕೊಂದು ದೇಹವನ್ನು ಒಂದು ಸೂಟ್‌ಕೇಸ್‌ನಲ್ಲಿ ಹಾಕಿ ಬೆಂಗಳೂರಿಗೆ ಕರೆತರುವ ವೇಳೆ ಚಿತ್ರದುರ್ಗದಲ್ಲಿ ಬಂಧಿತರಾಗಿದ್ದರು. ಗಂಡ ಹೆಂಡತಿ ನಡುವಿನ ಜಗಳದಲ್ಲಿ ನಾಲ್ಕು ವರ್ಷದ ಮುದ್ದು ಮಗುವಿನ ಪಾಲಿಗೆ ತಾಯಿಯೇ ಹಂತಕಿಯಾಗಿದ್ದಳು. ಮದುವೆಯಾಗಿ ವಿಚ್ಛೇದನ ಪಡೆದಿದ್ದ ಪತಿಗೆ ಮಗುವನ್ನು ಆಗಾಗ ನೋಡುವ ಅವಕಾಶವನ್ನು ಕೋರ್ಟ್ ಕಲ್ಪಿಸಿತ್ತು. ಈ ಅವಕಾಶ ಬಳಸಿಕೊಂಡು ಗಂಡ ಆಗಾಗ ಬರುತ್ತಿದ್ದ. ಇದು ರಚನಾ ಸೇಠ್‌ಗೆ ಇಷ್ಟವಿರಲಿಲ್ಲ. ಮಗುವೇ ಇಲ್ಲದಿದ್ದರೆ ಅವನು ಹೇಗೆ ಬರುತ್ತಾರೆ ಎಂಬ ದುಷ್ಟ ಯೋಜನೆ ಮಾಡಿದ ಈ ದುಷ್ಟೆ ಮಗುವನ್ನೇ ಕೊಂದು ಹಾಕಿದ್ದಳು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ