ಬೆಂಗಳೂರು : ಇಲ್ಲಿನ ಬೇಗೂರು ಠಾಣೆಯಲ್ಲಿ ಪಿಸ್ತೂಲ್ನಿಂದ (Begur Police Station) ಮಿಸ್ ಫೈರ್ (,Miss Fire) ಆಗಿದೆ. ಬೇಗೂರು ಠಾಣೆ ಎಸ್ಬಿ ಕಾನ್ಸ್ಟೇಬಲ್ ವೆಂಕಣ್ಣರಿಂದ ಮಿಸ್ ಫೈರ್ ಆಗಿ ರೈಟರ್ ಅಂಬುದಾಸ್ ಎಂಬುವವರಿಗೆ ಗುಂಡು (Bengaluru News) ತಗುಲಿದೆ. ಅಂಬುದಾಸ್ ಅವರ ಎಡಕಾಲಿಗೆ ಗುಂಡು ತಗುಲಿದ್ದು, ಗಾಯಗೊಂಡಿರುವ ಅವರನ್ನು ನಗರದ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಬ್ಬಂದಿ ಬಂದೂಕುಗಳ ಜಮೆ ಮಾಡಿಕೊಳ್ಳುತ್ತಿದ್ದರು. ಮುಕುಂದರೆಡ್ಡಿ ಎನ್ನುವವರು ಪಿಸ್ತೂಲ್ ಜಮೆ ಮಾಡಿದ್ದರು. ಬುಲೆಟ್ ಮ್ಯಾಗಜಿನ್ ಕಳಚಿ ಪಿಸ್ತೂಲ್ ಜಮೆ ಮಾಡಿದ್ದರು. ಆದರೂ ಪಿಸ್ತೂಲ್ ಪರಿಶೀಲನೆ ವೇಳೆ ಮಿಸ್ ಫೈರ್ ಆಗಿದೆ.
ಪಿಸ್ತೂಲ್ನಲ್ಲಿ ಬುಲೆಟ್ ಲಾಕ್ ಆಗಿರುವ ಸಾಧ್ಯತೆ ಇದೆ. ಪರಿಶೀಲನೆ ಮಾಡುವಾಗ ಟ್ರಿಗರ್ ಒತ್ತಿದಾಗ ಮಿಸ್ ಫೈರ್ ಆಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ