ದೇವನಹಳ್ಳಿ: ಗೃಹಿಣಿಯೊಬ್ಬರ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಪ್ರಿಯಕರನಿಂದಲೇ ಗೃಹಿಣಿ ಕೊಲೆಯಾಗಿರುವ (Murder Case) ಶಂಕೆ ವ್ಯಕ್ತವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಭಾರತಿ (27) ಮೃತಪಟ್ಟಿರುವ ದುರ್ದೈವಿ. ತಮ್ಮ ಬಾಡಿಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಗೃಹಿಣಿ ಮೃತ ದೇಹ ಪತ್ತೆಯಾಗಿದೆ.
ಈಕೆಯ ಸುಮಾರು 5 ವರ್ಷದ ಹೆಣ್ಣು ಮಗು ಸ್ಥಳದಿಂದ ಕಾಣೆ(child kidnap)ಯಾಗಿದೆ. ಮೃತ ಭಾರತಿಯ ಪ್ರಿಯಕರ ಹರೀಶ್ ಎಂಬಾತ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈತನೇ ಮಗುವನ್ನೂ ಅಪರಹಣ ಮಾಡಿದ್ದಾನೆ ಎಂದು ತರ್ಕಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಲೆಯೇರಿಕೆ ಎಫೆಕ್ಟ್: ಟೊಮೆಟೊ ಆಯ್ತು; ಈಗ ಶುಂಠಿ, ಹೂಕೋಸು ಕಳವು!
ದೇವನಹಳ್ಳಿ: ತರಕಾರಿ ಬೆಲೆಗಳು ಗಗನಕ್ಕೆ ಏರಿದ್ದು, ಟೊಮೆಟೊ ಕಳವು ಪ್ರಕರಣಗಳು ವರದಿಯಾಗುತ್ತಿವೆ. ಇದೇ ವೇಳೆಗೆ ಹೊಲದಲ್ಲಿದ್ದ ಶುಂಠಿ, ಹೂಕೋಸು ಕೂಡ ಕಳ್ಳರು ಕದ್ದೊಯ್ದ ಪ್ರಕರಣ ವರದಿಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ನಾಗಸಂದ್ರ ಮತ್ತು ದೊಡ್ಡ ತುಮಕೂರು ಗ್ರಾಮದಲ್ಲಿ ಘಟನೆ ನಡೆದಿದೆ. ದೊಡ್ಡ ತುಮಕೂರು ಗ್ರಾಮದ ರೈತ ಆಂಜಿನಪ್ಪನವರ ತೋಟದಲ್ಲಿದ್ದ ಸುಮಾರು 80 ಸಾವಿರ ರೂ. ಮೌಲ್ಯದ ಹೂಕೋಸು ಕಳ್ಳತನವಾಗಿದೆ. ನಾಗಸಂದ್ರ ಗ್ರಾಮದ ರೈತ ಬಸವರಾಜ್ ಎಂಬವರ ಜಮೀನಿನಲ್ಲಿ ಬೆಳೆದ ಶುಂಠಿ ಕಳವು ಮಾಡಲಾಗಿದೆ. ಇತ್ತೀಚೆಗಷ್ಟೇ ಲಕ್ಷ್ಮೀದೇವಿಪುರ ಗ್ರಾಮದಲ್ಲಿ ಖದೀಮರು 1.50 ಲಕ್ಷ ರೂ. ಮೌಲ್ಯದ ಟೊಮೆಟೊ ಕದ್ದಿದ್ದರು.
ಶುಂಠಿ ಬೆಲೆ ಕಿಲೋಗೆ 220 ರೂಪಾಯಿ ತಲುಪಿದೆ. ಇದರಿಂದಲೇ ಕಳವು ಆಗಿದೆ ಎಂದು ರೈತ ಬಸವರಾಜ್ ಅಳಲು ತೋಡಿಕೊಂಡಿದ್ದಾರೆ. ತರಕಾರಿ ಬೆಳೆದ ರೈತರು ರಾತ್ರಿಯಲ್ಲ ತೋಟಗಳಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಘಟನೆಗಳಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Murder Case: ಡಿ.ಜೆ.ಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ