ದೇವನಹಳ್ಳಿ: ಹಣಕ್ಕಾಗಿ ಜತೆಗೆ ಇದ್ದವನ ಹೆಣ ಬೀಳಿಸಿ ಪರಾರಿ ಆಗಿದ್ದ ಸೆಕ್ಯೂರಿಟಿಯನ್ನು ಚಿಕ್ಕಜಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತ್ರಿಪೂರ ಮೂಲದ ಸುಮನ್ ದಾಸ್ ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ಫೆಬ್ರವರಿ 22ರಂದು ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಬಳಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ರಾಜು ರಾವತ್ ಎಂಬಾತನ ಶವ ಬೆಂಗಳೂರು ಉತ್ತರ ತರಬನಹಳ್ಳಿ ಬಳಿಯ ಓಲ್ಡ್ ಬೆಂಗಳೂರು ವಿಲಸ್ ಬಳಿ ಪತ್ತೆಯಾಗಿತ್ತು. ಉತ್ತರಾಖಾಂಡ್ ಮೂಲದ ರಾಜು ರಾವತ್ (49) ತಲೆಗೆ ಪೆಟ್ಟು ಬಿದ್ದ ರೀತಿಯಲ್ಲಿ ಶವವು ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಕುಡಿದು ಹಳ್ಳಕ್ಕೆ ಬಿದ್ದ ಕಾರಣಕ್ಕೆ ತಲೆಗೆ ಪೆಟ್ಟಾಗಿ ಮೃತಪಟ್ಟಿರಬಹುದೆಂದು ಪೊಲೀಸರು ಅಂದಾಜಿಸಿದರು.
ನಂತರ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು. ನಂತರ ಬಂದ ವರದಿಯಲ್ಲಿ ಇದು ಆಕಸ್ಮಿಕವಲ್ಲ, ಬದಲಿಗೆ ಹಲ್ಲೆಯಿಂದಲೇ ರಾಜು ರಾವತ್ ಮೃತಪಟ್ಟಿದ್ದಾಗಿ ಗೊತ್ತಾಗಿತ್ತು.
ಇದನ್ನೂ ಓದಿ: Assault Case : ದೇವಸ್ಥಾನದಲ್ಲಿ ಸೌಂಡ್ ಕಮ್ಮಿ ಮಾಡಿ ಎಂದಿದ್ದಕ್ಕೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಮಾರಣಾಂತಿಕ ಹಲ್ಲೆ
ಈ ಸಂಬಂಧ ತನಿಖೆಗಿಳಿದ ಪೊಲೀಸರು ರಾಜು ರಾವತ್ ಹತ್ಯೆಕೋರನ ಬೆನ್ನು ಬಿದ್ದಾಗ, ಸುಮನ್ ದಾಸ್‌ನ ವಿಚಾರಣೆ ನಡೆಸಿದಾಗ ಈತನೇ ಆರೋಪಿ ಎಂಬುದು ತಿಳಿದ ಬಂದಿತ್ತು. ರಾಜು ರಾವತ್ ಹಾಗೂ ಸುಮನ್ ದಾಸ್ ಒಂದೇ ಕಡೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆಯೂ ಒಳ್ಳೆಯ ಗೆಳೆತನವಿತ್ತು. ಒಮ್ಮೆ ರಾಜು ರಾವತ್ ಬ್ಯಾಂಕ್ ಅಕೌಂಟ್ ಚೆಕ್ ಮಾಡುವಾಗ ಹಣ ಇರುವುದನ್ನೂ ಸುಮನ್ ದಾಸ್ ನೋಡಿಕೊಂಡಿದ್ದ.
ರಾಜು ಬಳಿ ಇದ್ದ ಹಣ ಕದಿಯಲು ಸುಮನ್ ದಾಸ್ ಸಂಚು ರೂಪಿಸಿದ್ದ. ಅದ್ಹೇಗೋ ರಾಜುವಿನ ಎಟಿಎಂ ಪಿನ್ ನಂಬರ್ ತಿಳಿದುಕೊಂಡಿದ್ದ, ಸುಮನ್ ಎಟಿಎಂ ಕಾರ್ಡ್ ಎಗರಿಸಲು ಯೋಜಿಸಿದ್ದ. ಅದರಂತೆ ರಾಜು ಫೆ.22ರ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ, ಹಿಂಬಾಲಿ ಬಂದ ಸುಮನ್, ದೊಣ್ಣೆಯಿಂದ ರಾಜುವಿಗೆ ಬಲವಾಗಿ ಹೊಡೆದಿದೆ. ಕುಸಿದು ಬಿದ್ದ ರಾಜು ಸ್ಥಳದಲ್ಲೇ ಮೃತಪಟ್ಟಿದ್ದ.
ನಂತರ ಈತನ ಬಳಿಯಿದ್ದ ಎಟಿಎಂ ಕಾರ್ಡ್ ದೋಚಿ ಸುಮನ್ ದಾಸ್ ಅಲ್ಲಿಂದ್ದ ಪರಾರಿ ಆಗಿದ್ದ. ಇದೀಗ ಚಿಕ್ಕಜಾಲ ಪೊಲೀಸರು ಆರೋಪಿಯನ್ನು ಹಿಡಿದು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ