ಆನೇಕಲ್: ಪತ್ನಿಯನ್ನು ಬರ್ಬರವಾಗಿ ಕೊಂದು (Murder case) ಪತಿಯೊಬ್ಬ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಟೌನ್‌ನಲ್ಲಿ ಈ ಘಟನೆ ನಡೆದಿದೆ. ಅರ್ಬಿಯಾ ತಾಜ್( 24) ಮೃತ ದುರ್ದೈವಿ. ಮುಬಾರಕ್(28) ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದವನು.
ಮುಬಾರಕ್ ಮಚ್ಚಿನಿಂದ ಕೊಚ್ಚಿ ಅರ್ಬಿಯಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅರ್ಬಿಯಾ ತಾಜ್ ಮುಬಾರಕ್‌ನ ಕಿರುಕುಳದಿಂದ ಬೇಸತ್ತಿದ್ದಳು. ಹೀಗಾಗಿ ತಿಂಗಳ ಹಿಂದೆ ತವರು ಮನೆಗೆ ಸೇರಿಕೊಂಡಿದ್ದಳು. ವಾರದ ಹಿಂದೆ ಅರ್ಬಿಯಾಳನ್ನು ಮನೆಗೆ ವಾಪಸ್ ಬರುವಂತೆ ಒತ್ತಾಯಿಸಿದ್ದ.
ಆದರೆ ಅರ್ಬಿಯಾ ತಾಜ್ ಗಂಡನ ಮನೆಗೆ ತೆರಳಲು ನಿರಾಕರಿಸಿದ್ದಳು. ಪತ್ನಿಯ ತವರು ಮನೆಗೆ ಬಂದಿದ್ದ ಮುಬಾರಕ್, ಬಾಗಿಲು ಬಡಿದಿದ್ದ. ತೆರೆಯದೇ ಇದ್ದಾಗ ಕೊಡಲಿ ಹಾಗೂ ಮಚ್ಚಿನಿಂದ ಬಾಗಿಲು ಮುರಿದು ಒಳ ನುಗ್ಗಿದ್ದಾನೆ. ನಂತರ ಮುಬಾರಕ್ ಮಚ್ಚಿನಿಂದ ಪತ್ನಿಗೆ ಹಲ್ಲೆ ನಡೆಸಿ ಬರ್ಬರವಾಗಿ ಕೊಂದಿದ್ದಾನೆ. ಇತ್ತ ಮಗಳ ಕೂಗಾಟ ಕೇಳಿ ತಾಯಿ ನೆರವಿಗೆ ಧಾವಿಸಿದಾಗ, ರೂಮಿನ ಬಾಗಿಲು ಲಾಕ್ ಮಾಡಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರ್ಬಿಯಾ ತಾಜ್‌ಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್ ಆಗಿ ಯುವಕ ಸಾವು
ಎದುರಾಳಿಯ ಮುಗಿಸಲು ತಾನೇ ರೆಡಿ ಮಾಡಿದ್ದ ಹುಡುಗರಿಂದಲೇ ಕೊಲೆಯಾದ ರೌಡಿಶೀಟರ್
ಬೆಂಗಳೂರು: ಎದುರಾಳಿಯ ಕೊಲೆಗೆ ಸ್ಕೆಚ್ ಹಾಕಿ ಹುಡುಗರನ್ನು ರೆಡಿ ಮಾಡಿದ್ದ ರೌಡಿಶೀಟರ್ ದಿನೇಶ್ ಕುಮಾರ್, ಅವರಿಂದಲೇ ಬರ್ಬರವಾಗಿ ಕೊಲೆಯಾಗಿ (Murder case) ಹೋಗಿದ್ದ. ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮುಹೂರ್ತ ಇಟ್ಟು ಕೊಂದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ದಿನೇಶ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸರು 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಇಬ್ಬರು ಕೊತ್ತನೂರು ಹಾಗೂ ರಾಮಮೂರ್ತಿನಗರ ಪೊಲೀಸ್ ಠಾಣೆಯ ರೌಡಿಶೀಟರ್‌ಗಳಾಗಿದ್ದಾರೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದಿನೇಶ್ ಕುಮಾರ್‌ನನ್ನು ಹತ್ಯೆಗೈದಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಆರೋಪಿಗಳ ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Child Abduction: ಮಲೆನಾಡಿನ ಗ್ರಾಮದಲ್ಲಿ ಹೆಣ್ಣು ಮಗು ಅಪಹರಣ, ಆತಂಕ
ತಿರುಗು ಬಾಣ ಬಿಟ್ಟ ರೌಡಿ ದಿಲೀಪ್
ಇನ್ನೂ ಈ ದಿನೇಶ್ ತನ್ನ ಎದುರಾಳಿ ಆಗಿರುವ ರಾಮಮೂರ್ತಿನಗರದ ರೌಡಿಶೀಟರ್ ದಿಲೀಪ್‌ನ ಕೊಲೆಗೆ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಸತೀಶ್ ಅರವಿಂದ , ಗೌತಮ್ ಸೇರಿ ಹತ್ತು ಜನ ಹುಡುಗರನ್ನು ರೆಡಿ ಮಾಡಿದ್ದ. ಆದರೆ ಈ ಹತ್ತು ಜನರು ದಿನೇಶ್‌ನ ವಿರೋಧಿ ಆಗಿರುವ ರೌಡಿ ದಿಲೀಪ್ ಜತೆಗೆ ಸಂಪರ್ಕದಲ್ಲಿ ಇದ್ದರು.
ಯಾವ ಹುಡುಗರ ಜತೆಗೆ ದಿನೇಶ್ ಪ್ಲಾನ್ ಮಾಡಿದ್ದನೋ ಅವರನ್ನೇ ಸೆಟ್ ಮಾಡಿಕೊಂಡ ರೌಡಿ ದಿಲೀಪ್ ತಿರುಗು ಬಾಣ ಬಿಟ್ಟಿದ್ದ. ದಿನೇಶ್ ಜತೆಗಿದ್ದುಕೊಂಡೇ ಆತನನ್ನೇ ಕೊಂದು ಮುಗಿಸಿದ್ದಾರೆ. ದಿಲೀಪ್, ಕ್ರಿಸ್ಟೋಫರ್, ಅರವಿಂದ, ಗೌತಮ್ ಸೇರಿ ಒಟ್ಟು ಹನ್ನೆರಡು ಜನರನ್ನು ಜೈಲಿಗೆ ಕಳುಹಿಸಲಾಗಿದೆ.
ಮೂರೇ ನಿಮಿಷದಲ್ಲಿ ಕೊಂದು ಹಾಕಿದ್ರು
ಮಾ.27ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಕಂ ಸುಪಾರಿ ಕಿಲ್ಲರ್ ದಿನೇಶ್‌ನನ್ನು ಕಮ್ಮನಹಳ್ಳಿ ಓಯೋ ರೂಂ ಬಳಿ ಬರ್ಬರ ಹತ್ಯೆ ನಡೆದಿತ್ತು. ಹಣ ಇಲ್ಲ ಎಂದು ಕಾರ್ಡ್ ಕೊಡುವ ಬಗ್ಗೆ ರಿಸೆಪ್ಷನಿಸ್ಟ್ ಜತೆ ಆತನ ಹುಡುಗರು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಸೋಫಾದಲ್ಲಿ ಕೂತಿದ್ದ ದಿನೇಶ್ ಮೇಲೆ ಏಕಾಏಕಿ ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ, ಕೇವಲ ಮೂರು ನಿಮಿಷದಲ್ಲಿ ಕೊಂದು ಹಂತಕರು ಪರಾರಿಯಾಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ