Site icon Vistara News

Murder Case: ಹಳೇ ವೈಷಮ್ಯ; ಯುವಕನ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ ಹಂತಕರು

old enmity The killers of the young man

ಆನೇಕಲ್: ನಡುರಸ್ತೆಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಹತ್ಯೆ (Murder Case) ಮಾಡಲಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ (Anekal News) ಮರಸೂರು ಬಳಿ ಘಟನೆ ನಡೆದಿದೆ. ವಿಜಯ್ ಕುಮಾರ್ (27) ಹತ್ಯೆಯಾದವನು.

ಭಾನುವಾರ ಬೆಳಗ್ಗೆ 4 ಗಂಟೆಗೆ ಸುಮಾರಿಗೆ ಯಾರೋ ಫೋನ್‌ ಮಾಡಿ ವಿಜಯ್‌ನನ್ನು ಮನೆಯಿಂದ ಹೊರಗೆ ಕರೆದಿದ್ದಾರೆ. ಬಳಿಕ ಮನೆ ಎದುರಿನ ರಸ್ತೆಯಲ್ಲಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಈ ಹಿಂದೆ 2017ರಲ್ಲಿ ಮನೋಜ್ ಅಲಿಯಾಸ್‌ ಬಬ್ಲು ಎಂಬಾತನ ಕೊಲೆಗೈದು ವಿಜಯ್‌ ಕುಮಾರ್‌ ಜೈಲಿಗೆ ಹೋಗಿ ಬಂದಿದ್ದ.

ಏಳು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆ ಆಗಿದ್ದ. ಮನೋಜ್ ಕುಮಾರ್ ಸಹೋದರ ಅರ್ಜುನ ಎಂಬಾತನೇ ಕೊಲೆ ಮಾಡಿದ್ದಾನೆಂದು ವಿಜಯ್ ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Murder Case : ಮಿಸ್ಸಿಂಗ್‌ ಆದ ವಿದ್ಯಾರ್ಥಿ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆ

ಬೈಕ್‌ ಓವರ್‌ ಟೇಕ್‌ ಗಲಾಟೆ; ಯುವಕನ ಕೊಲೆಯಲ್ಲಿ ಅಂತ್ಯ

ಶಿರಸಿ: ಬೈಕ್ ಓವರ್ ಟೇಕ್ (Over take) ಮಾಡುವ ವಿಷಯಕ್ಕೆ ಶುರುವಾದ ಜಗಳವು ತಾರಕಕ್ಕೇರಿ ಯುವಕನ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಹಳಿಯಾಳ ಮೂಲದ ಪ್ರಜ್ವಲ ಪ್ರಕಾಶ ಕಕ್ಕೇರಿಕರ (24) ಮೃತ ದುರ್ದೈವಿ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಸಾಣಾ ಮರಾಠಿ, ಅನಿಕೆತ್ ಮಿರಾಶಿ, ರಿತೇಶ್ ಪಾಟೀಲ್, ಪಾಂಡುರಂಗ ಕಳಸುರಕರ್ ಹಾಗೂ ಪ್ರಶಾಂತ್ ಕಲಸುರಕರ್, ರೂಪೇಶ್ ಕೊಲೆ ಮಾಡಿರುವ ಆರೋಪಿಗಳೆಂದು ಗುರುತಿಸಲಾಗಿದೆ.

ಬೈಕ್ ಓವರ್‌ ಟೆಕ್ ಮಾಡುವ ವಿಷಯದಲ್ಲಿ ಪ್ರಜ್ವಲ ಜತೆಗೆ ಇತರೆ ಯುವಕರೊಟ್ಟಿಗೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಹೊಡಿಬಡಿ ಮಟ್ಟಕ್ಕೆ ತಲುಪಿದೆ. ಪ್ರಜ್ವಲಗೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.

ಸದ್ಯ ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version