Site icon Vistara News

Murder Case: 6 ವರ್ಷದ ಹಿಂದೆ ತಾಯಿಯನ್ನು ಕೊಂದವನನ್ನು ಕಲ್ಲಿನಿಂದ ಜಜ್ಜಿ ಮುಗಿಸಿದ ಮಗ

anekal murder suspect

ಆನೇಕಲ್: 3 ವರ್ಷದ ಹಿಂದೆ ತನ್ನ ತಾಯಿಯನ್ನು ಕೊಂದ ಆರೋಪಿಯನ್ನು ಮಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ (murder case) ಮಾಡಿದ್ದಾನೆ. ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಸಮಂದೂರಿನಲ್ಲಿ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ (Bangalore rural news) ಆನೇಕಲ್ ತಾಲ್ಲೂಕಿನ ಸಮಂದೂರಿನಲ್ಲಿ ನಡೆದ ಈ ಘಟನೆಯಲ್ಲಿ ನಾರಾಯಣಪ್ಪ (52) ಮೃತಪಟ್ಟ ವ್ಯಕ್ತಿ. ಮಧು (37) ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ನಾರಾಯಣಪ್ಪ ತಲೆ ಮೇಲೆ ಮಧು ಕಲ್ಲನ್ನು ಎತ್ತಿ ಹಾಕಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ನಾರಾಯಣಪ್ಪ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಆರು ವರ್ಷದ ಹಿಂದೆ ಮಧುವಿನ ತಾಯಿಯನ್ನು ನಾರಾಯಣಪ್ಪ ಕೊಂದಿದ್ದ. ನಂತರ ಜೈಲುಪಾಲಾಗಿ, ಮೂರು ವರ್ಷದ ಹಿಂದೆ ಜೈಲಿನಿಂದ ರಿಲೀಸ್ ಆಗಿ ಹೊರಬಂದಿದ್ದ. ನಿನ್ನೆ ಸಂಜೆ ಕುಡಿದು ಚಿತ್ತಾಗಿ ಮಧುವಿನ ಮನೆ ಬಳಿ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಾಜ್ ಹಾಕಿದ್ದ. ಈ ವೇಳೆ ಮಧು ಮತ್ತು ನಾರಾಯಣಪ್ಪ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ನಾರಾಯಣಪ್ಪ ತಲೆ ಮೇಲೆ ಮಧು ಕಲ್ಲನ್ನು ಎತ್ತಿ ಹಾಕಿದ್ದಾನೆ.

ಗಂಭೀರವಾಗಿ ಗಾಯಗೊಂಡ ನಾರಾಯಣಪ್ಪನನ್ನು ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆನೇಕಲ್ ಸರ್ಕಾರಿ ಶವಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಆರೋಪಿ ಮಧು ಪತ್ತೆಗೆ ಬಲೆ ಬೀಸಲಾಗಿದೆ.

ಪತ್ನಿಗೆ ಬೇರೆ ಮದುವೆ ಮಾಡಿಸಿದವನನ್ನು ಕೊಂದು ಸುಟ್ಟು ಹಾಕಿದ

ಬೆಂಗಳೂರು: ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಅರ್ಧ ಬೆಂದ ಹೆಣವೊಂದರ ಬೆನ್ನು ಹತ್ತಿ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡ ಹಾಗೂ ಆಕೆಗೆ ಬೇರೊಬ್ಬನ ಜತೆ ಮದುವೆ ಮಾಡಿಸಿದ್ದರಿಂದ ಆಕ್ರೋಶಗೊಂಡ ಆರೋಪಿ, ಸುಧಾಹರನ್ ಎಂಬಾತನನ್ನು ಹತ್ಯೆ ಮಾಡಿದ್ದ. ನಂತರ ಸುಟ್ಟು ಹಾಕಿ ಪರಾರಿಯಾಗಿದ್ದ.

ವಿಜಯ್‌ ಕುಮಾರ್‌ ಎನ್ನುವವನೇ ಆರೋಪಿ. ವಿಚಾರಣೆ ವೇಳೆ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ. ಸುಧಾಹರನ್ ಅಲಿಯಾಸ್ ಕುಳ್ಳ ಎನ್ನುವವನನ್ನು ಈತ ಮರ್ಡರ್ ಮಾಡಿದ್ದಾನೆ. ಸುಧಾಹರನ್ ಮತ್ತು ವಿಜಯ್ ಕುಮಾರ್ ಸ್ನೇಹಿತರಾಗಿದ್ದು, ಇಬ್ಬರೂ ಕಲಾಸಿಪಾಳ್ಯದ ತರಕಾರಿ ಮಾರ್ಕೆಟ್‌ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರು.

ವಿಜಯ್ ಕುಮಾರ್ ಮದ್ಯ ಮತ್ತು ಸಿಗರೇಟ್ ಸೇದುವ ಚಟಕ್ಕೆ ಬಿದ್ದಿದ್ದ. ಇದರಿಂದ 2015ರಲ್ಲಿ‌ ವಿಜಯ್‌ನನ್ನು ಆತನ ತಾಯಿ ಮದ್ಯವರ್ಜನ ಕೇಂದ್ರಕ್ಕೆ ಸೇರಿಸಿದ್ದರು. 11 ತಿಂಗಳು ಮದ್ಯವರ್ಜನ ಕೇಂದ್ರದಲ್ಲಿ ಬಂದಿಯಾಗಿದ್ದ ವಿಜಯ್ ಕುಮಾರ್. ಈ ವೇಳೆ ವಿಜಯ್ ಪತ್ನಿ ನಂದಿನಿಗೆ ಸುಧಾಹರನ್ ಬೇರೊಬ್ಬನ ಜತೆಗೆ ಮದುವೆ ಮಾಡಿಸಿದ್ದ.

ಮದ್ಯವರ್ಜನ ಕೇಂದ್ರದಿಂದ ಹೊರಬಂದಿದ್ದ ವಿಜಯ್‌ಗೆ ಇದರಿಂದ ಶಾಕ್ ಆಗಿತ್ತು. ಪತ್ನಿ‌ಗೆ ಬೇರೆ ಮದುವೆಯಾಗಿ ಹೋಗಿದ್ದರಿಂದ ಆತ ಡಿಪ್ರೆಶನ್‌ಗೆ ಹೋಗಿದ್ದ. ಈ ವಿಚಾರವಾಗಿ ಹಲವು ಬಾರಿ ಸುಧಾಹರನ್‌ನೊಂದಿಗೆ ಜಗಳವಾಡಿದ್ದ. ನಾಲ್ಕು ತಿಂಗಳ ಹಿಂದೆ ತನ್ನ ಪತ್ನಿ ನಂದಿನಿ ಮತ್ತು ಆನಂದ್ ಎಲ್ಲಿದ್ದಾರೆ ಎಂದು ಕೇಳಿದ್ದ. ಈ ವೇಳೆ ಆನಂದ್‌ಗೆ ಸುಧಾಹರನ್ ಫೋನ್ ಮಾಡಿದ್ದ. ಆಗ ಆನಂದ್ ಮತ್ತು ನಂದಿನಿ ಫೋನ್ ರಿಸೀವ್ ಮಾಡಿರಲಿಲ್ಲ.

ಇದರಿಂದ ಸುಧಾಹರನ್ ಮೇಲೆ ದ್ವೇಷ ಸಾಧಿಸಿದ್ದ ವಿಜಯ್, ತನ್ನ ಹೆಂಡತಿಗೆ ಮತ್ತೊಂದು ಮದುವೆ ಮಾಡಿಸಿ ಮೋಸ ಮಾಡಿದ್ದಿ ಎಂದು ಪದೇ ಪದೆ ಜಗಳ ಕಾಯುತ್ತಿದ್ದ. ಕೊನೆಗೆ ಸುಧಾಹರನ್ ಹತ್ಯೆ ಮಾಡಲು ನಿರ್ದರಿಸಿದ್ದ. ನವಂಬರ್ 11ರಂದು ಕಲಾಸಿಪಾಳ್ಯ ಮಾರ್ಕೆಟ್‌ನಲ್ಲಿ ಸುಧಾಹರನ್‌ನನ್ನು ಭೇಟಿಯಾಗಿ ತನ್ನ ಬಳಿ ಇದ್ದ ಒಂದೂವರೆ ಕ್ವಾರ್ಟರ್ ಮದ್ಯದ ಬಾಟಲು ನೀಡಿದ್ದ. ನನಗೆ ಆರೋಗ್ಯ ಸರಿಯಿಲ್ಲ ನೀನೇ ಕುಡಿಯೆಂದು ಸುಧಾಹರನ್‌ಗೆ ಮನವೊಲಿಸಿದ್ದ.

ನಂತರ ಸುಧಾಹರನ್‌ಗೆ ಮತ್ತೊಂದು ಕ್ವಾರ್ಟರ್ ಮದ್ಯ ಕುಡಿಸಿ, ಮಧ್ಯಾಹ್ನ 12 ಗಂಟೆಗೆ ವಿಶ್ರಾಂತಿ ಮಾಡೋಣ ಬಾ ಎಂದು‌ ತರಕಾರಿ ಮಾರ್ಕೆಟ್ ಮೇಲ್ಛಾವಣಿಗೆ ಕರೆದುಕೊಂಡು ಹೋಗಿದ್ದ. ನನ್ನ ಬಳಿ ಇದ್ದ 140 ರೂಪಾಯಿ ಕದ್ದಿದ್ದೀ ಎಂದು ಜಗಳ ತೆಗೆದಿದ್ದ. ಇದರಿಂದ ಮಾತಿಗೆ ಮಾತು ಬೆಳೆದು ಸಿಟ್ಟಿನಿಂದ ವಿಜಯ್ ಕಪಾಳಕ್ಕೆ ಸುಧಾಹರನ್ ಹೊಡೆದಿದ್ದ. ನಂತರ ವಿಜಯ್‌ ತನ್ನ ಬಳಿ ಇದ್ದ ಹಣ್ಣು ಕತ್ತರಿಸುವ ಚಾಕಿನಿಂದ ಸುಧಾಹರನ್ ಕುತ್ತಿಗೆಗೆ ಚುಚ್ಚಿದ್ದ.

ಈ ವೇಳೆ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದ ಸುಧಾಹರನ್. ಶವದ ಗುರುತು ಸಿಗದಂತೆ ಮಾಡಲು ಗೋಣಿಚೀಲ ಸುತ್ತಿ ಬೆಂಕಿ ಹಾಕಿ ವಿಜಯ್‌ ಎಸ್ಕೇಪ್ ಆಗಿದ್ದ. ಪೊಲೀಸ್ ವಿಚಾರಣೆಯಿಂದ ಇದೀಗ ಕೊಲೆ ಹಿಂದಿನ ಸತ್ಯ ಹೊರಹಾಕಿದ್ದಾನೆ.

ಇದನ್ನೂ ಓದಿ: Murder Case : ಫೋಟೊ ಶೂಟ್‌ ತಗಾದೆ ; ನಾಲ್ವರ ಗ್ಯಾಂಗ್‌ನಿಂದ ಯುವಕನ ಕೊಲೆ

Exit mobile version