Site icon Vistara News

Murder Case : ಸಪ್ಲೇಯರ್‌ ಸಿಟ್ಟಿಗೆ ಬಲಿಯಾದ ಹೋಟೆಲ್‌ ಮಾಲೀಕ

Murder case

ಬೆಂಗಳೂರು ಗ್ರಾಮಾಂತರ: ಕಳೆದ ಜೂ.18ರಂದು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸಿಲಿಕಾನ್ ಟೌನ್‌ನಲ್ಲಿ ಕುಂದಾಪುರ ಮೂಲದ ವಿಜಯೇಂದ್ರ ಶೆಟ್ಟಿ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ (Attempt to murder) ನಡೆದಿತ್ತು. ಬಾಯಿಗೆ ಬಂದಂತೆ ಬೈದಿದ್ದಕ್ಕೆ ಸಿಟ್ಟಾದ ಸಪ್ಲೇಯರ್‌, ರಾಡಿನಿಂದ ಹೊಡೆದು ಕೋಮಾಗೆ ಕಳಿಸಿದ್ದ. ಸತತ 27 ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ವಿಜಯೇಂದ್ರ ಶೆಟ್ಟಿ, ಚಿಕಿತ್ಸೆ ಫಲಿಸದೇ ಭಾನುವಾರ (Murder case) ಕೊನೆಯುಸಿರೆಳೆದಿದ್ದಾರೆ.

ಪೊಲೀಸರ ದಿಕ್ಕು ತಪ್ಪಿಸಿದ್ದ ಹಂತಕ

ಕೃತ್ಯ ನಡೆದ ಬಳಿಕ ಪೊಲೀಸರ ದಿಕ್ಕು ತಪ್ಪಿಸಲು ಹೋಗಿ ಆರೋಪಿ ಸಪ್ಲೇಯರ್‌ ಮಂಜಪ್ಪ (Attempt To Murder) ಜೈಲುಪಾಲಾಗಿದ್ದ. ಮಂಜುನಾಥ್ ಟಿಪನ್ ಸೆಂಟರ್‌ನಲ್ಲಿ ಸಪ್ಲೇಯರ್‌ ಆಗಿದ್ದ ಮಂಜಪ್ಪ ತನಗೆ ಅನ್ನ ಹಾಕಿದ ಮಾಲೀಕ ಬೈದ ಎಂದು ರಾತ್ರಿ ಮಲಗಿದ್ದ ವೇಳೆ ಮಾರಣಾಂತಿಕ ಹಲ್ಲೆ ನಡೆಸಿದ್ದ.

ವಿಜಯೇಂದ್ರರ ಚಿರಾಟ ಕೇಳಿ ಅಕ್ಕ-ಪಕ್ಕದವರು ಸಹಾಯಕ್ಕೆ ಧಾವಿಸಿದ್ದರು. ಬಳಿಕ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆಗೀಳಿದ ಪೊಲೀಸರಿಗೆ ಶಾಕ್‌ ಕಾದಿತ್ತು. ಯಾಕಂದರೆ ಮಾಲೀಕನ ಹೆಣ ಉರುಳಿಸಲು ಜತೆಗೆ ಇದ್ದ ಹೋಟೆಲ್ ಸಿಬ್ಬಂದಿಯೇ ಮುಂದಾಗಿದ್ದ.

ಮಾಲೀಕ ವಿಜಯೇಂದ್ರ ಹೋಟೆಲ್‌ನಲ್ಲಿ ದಿನನಿತ್ಯ ಬಾಯಿಗೆ ಬಂದಂತೆ ಬಯ್ಯುತ್ತಿದ್ದರಂತೆ. ಇದರಿಂದ ಕುಪಿತಗೊಂಡಿದ್ದ ಸಪ್ಲೇಯರ್ ಮಂಜಪ್ಪನಿಂದ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ವಿಜಯೇಂದ್ರ ಮಲಗಿದ್ದ ವೇಳೆ ಎಂಟ್ರಿ ಕೊಟ್ಟ ಮಂಜಪ್ಪ ಜಿಮ್ ರಾಡ್‌ನಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿ ಕಾಲ್ಕಿತ್ತಿದ್ದ.

ಕೊಲೆಯಾದ ವಿಜಯೇಂದ್ರ ಹಾಗೂ ಹಂತಕ ಮಂಜಪ್ಪ

ಇದನ್ನೂ ಓದಿ: Self Harming: ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಯೊಂದಿಗೆ ಆತ್ಮಹತ್ಯೆಗೆ ಶರಣಾದ ವಿವಾಹಿತೆ; 10 ವರ್ಷದ ಬಾಲಕಿ ಅನುಮಾನಾಸ್ಪದ ಸಾವು

ರಕ್ತದ ಮಡುವಿನಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ ವಿಜಯೇಂದ್ರ ಅವರನ್ನು ಸ್ಥಳೀಯರು, ಹೋಟೆಲ್‌ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ದರು. ಬೆಳಗ್ಗೆ ವಾಪಸ್‌ ಕೃತ್ಯ ನಡೆದ ಸ್ಥಳಕ್ಕೆ ಬಂದಿದ್ದ ಮಂಜಪ್ಪ, ಏನು ಗೊತ್ತಿಲ್ಲದಂತೆ ನಾಟಕವಾಡಿದ್ದ. ಮಾತ್ರವಲ್ಲ ಯಾವುದೇ ಅಂಜಿಕೆಯಿಲ್ಲದೇ ಮಾಧ್ಯಮಗಳಿಗೆ ಹೇಳಿಕೆಯನ್ನೂ ಕೊಟ್ಟಿದ್ದ.

ಆದರೆ ಪೊಲೀಸರ ತನಿಖೆ ವೇಳೆ ಸಪ್ಲೇಯರ್ ಮಂಜಪ್ಪನ ಕೃತ್ಯ ಬಯಲಾಗಿತ್ತು. ಬಳಿಕ ಆರೋಪಿ ಮಂಜಪ್ಪನನ್ನು ಬಂಧಿಸಿರುವ ಪೊಲೀರು ಜೈಲಿಗೆ ಅಟ್ಟಿದ್ದಾರೆ. ಇತ್ತ ವಿಜಯೇಂದ್ರ ಮಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಿಜಯೇಂದ್ರ ಕೋಮಾ ಸ್ಥಿತಿಯಲ್ಲಿದ್ದರು. ಆದರೆ 27 ದಿನಗಳ ಈ ಹೋರಾಟದಲ್ಲಿ ಗಂಭೀರ ಗಾಯಗೊಂಡಿದ್ದ ವಿಜಯೇಂದ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version