Site icon Vistara News

Self Harming : ನೇಣು ಬಿಗಿದುಕೊಂಡು ಬಾರ್‌ ಕ್ಯಾಶಿಯರ್‌ ಆತ್ಮಹತ್ಯೆ

Bar cashier commits suicide by hanging himself

ಆನೇಕಲ್: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ (Self Harming) ಘಟನೆ ನಡೆದಿದೆ. ಸಂಜಯ್ (24) ಮೃತ ದುರ್ದೈವಿ.

ಮಂಡ್ಯ ಮೂಲದ ಬೋರಪುರ ಗ್ರಾಮದ ಸಂಜಯ್, ಕಳೆದೊಂದು ವರ್ಷದಿಂದ ಅತ್ತಿಬೆಲೆಯ ಹ್ಯಾಪಿಯಸ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ. ಬಾರ್‌ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಸಂಜಯ್, ಕಳೆದ ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ರೂಮಿಗೆ ಹೋಗಿದ್ದ.

ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ಬೆಳಗ್ಗೆ ರೂಮ್‌ನಿಂದ ಹೊರಬಾರದೆ ಇದ್ದಾಗ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Physical Abuse : 7ನೇ ಕ್ಲಾಸ್‌ ವಿದ್ಯಾರ್ಥಿನಿ ಈಗ 6 ತಿಂಗಳ ಗರ್ಭಿಣಿ!

ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಲಿದ್ದ ಮಗನನ್ನೇ ಕೊಂದ ತಂದೆ; ಏಕಿಂಥಾ ಕೃತ್ಯ?

ನವದೆಹಲಿ: ಮಗನ ಮದುವೆಗೆ ಕೆಲವೇ ಗಂಟೆ ಬಾಕಿ ಇವೆ ಎಂದಾಗ ತಂದೆಯಾದವನು ಹೇಗಿರುತ್ತಾನೆ? ಮನದ ತುಂಬ ಖುಷಿ ಇರುತ್ತದೆ. ಎಲ್ಲ ಸಿದ್ಧತೆ ಬಗ್ಗೆ ಮೇಲ್ವಿಚಾರಣೆ, ಮನೆಗೆ ಬಂದ ನೆಂಟರನ್ನು ಸಂಭಾಳಿಸುವುದು, ಊಟೋಪಚಾರ ಸೇರಿ ಬಿಡುವಿಲ್ಲದ ಓಡಾಟ ಇರುತ್ತದೆ. ಆದರೆ, ದೆಹಲಿಯಲ್ಲಿ (Delhi) ವ್ಯಕ್ತಿಯೊಬ್ಬರು ತಮ್ಮ ಮಗನ ಮದುವೆಗೆ (Marriage) ಕೆಲವೇ ಗಂಟೆಗಳು ಬಾಕಿ ಇರುವಾಗಲೇ, ಆತನನ್ನು ಭೀಕರವಾಗಿ ಕೊಲೆ (Father Kills Son) ಮಾಡಿದ್ದಾರೆ. ಹಾಗಾಗಿ, ಇಡೀ ಮದುವೆ ಮನೆಯು ಮಸಣದಂತಾಗಿದೆ.

ಹೌದು, ಗುರುವಾರ ಬೆಳಗ್ಗೆ (ಮಾರ್ಚ್‌ 7) ಗೌರವ್‌ ಸಿಂಘಾಲ್‌ (29) ಅವರು ಹಸೆಮಣೆ ಏರುವವರಿದ್ದರು. ಮದುವೆಗೆ ಕೆಲವೇ ಗಂಟೆಗಳು ಇರುವಾಗಲೇ ಹೊಸದಾಗಿ ತಂದ ಸೂಟು, ಬೂಟು ಸೇರಿ ಎಲ್ಲ ವ್ಯವಸ್ಥೆ ಆಗಿದೆಯೇ ಎಂಬುದನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಬುಧವಾರ ರಾತ್ರಿ (ಮಾರ್ಚ್‌ 6) ಗೌರವ್‌ ಸಿಂಘಾಲ್‌ ಅವರ ತಂದೆ ರಂಗಲಾಲ್‌ ಅವರು ಮಗನ ಮೇಲೆಯೇ ದಾಳಿ ನಡೆಸಿದ್ದಾರೆ. ಮಗನಿಗೆ ಸುಮಾರು 15 ಬಾರಿ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ಪ್ರಕರಣದ ಬಳಿಕ ಪೊಲೀಸರು ರಂಗಲಾಲ್‌ ಅವರನ್ನು ಬಂಧಿಸಿದ್ದಾರೆ.

ಮಗನನ್ನೇ ಕೊಲ್ಲಲು ಕಾರಣವೇನು?

ಜಿಮ್‌ ಮಾಲೀಕನಾಗಿರುವ ಗೌರವ್‌ ಸಿಂಘಾಲ್ ಅವರಿಗೆ ಮದುವೆ ಇಷ್ಟವಿರಲಿಲ್ಲ. ಆದರೆ, ರಂಗಲಾಲ್‌ ಅವರು ಪದೇಪದೆ ಒತ್ತಾಯಿಸಿದ ಕಾರಣ ಅವರು ಮದುವೆಗೆ ಒಪ್ಪಿದ್ದರು. ಇನ್ನು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಂಗಲಾಲ್‌ ಅವರನ್ನು ಗೌರವ್‌ ಸಿಂಘಾಲ್‌ ಅವರು ಅವಮಾನಿಸುತ್ತಿದ್ದರು. ಎಲ್ಲರ ಎದುರು ಮಗನಿಂದಲೇ ಅವಮಾನಕ್ಕೀಡಾದ ರಂಗಲಾಲ್‌ ಅವರು ಕುದ್ದುಹೋಗಿದ್ದರು. ಬುಧವಾರ ರಾತ್ರಿಯೂ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಕುಪಿತಗೊಂಡ ರಂಗಲಾಲ್‌ ಅವರು ಮಗನನ್ನೇ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅತ್ಯಾಚಾರದ ಬಳಿಕ ಮಗಳ ಕೊಲೆ; ಈಗ ಆಕೆಯ ತಂದೆಯೂ ನೇಣಿಗೆ ಶರಣು

“ಬುಧವಾರ ರಾತ್ರಿ ದೆಹಲಿ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಬಂತು. ಕೊಲೆಯಾಗಿರುವ ವಿಷಯ ತಿಳಿದು ಪೊಲೀಸರು ರಂಗಲಾಲ್‌ ಅವರ ಮನೆಗೆ ಹೋದರು. ಗೌರವ್‌ ಸಿಂಘಾಲ್‌ ಶವವನ್ನು ಮನೆಯಲ್ಲೇ ಬಚ್ಚಿಡಲಾಗಿತ್ತು. ಪೊಲೀಸರು ವಿಚಾರಣೆ ನಡೆಸಿದ ಬಳಿಕ ರಂಗಲಾಲ್‌ ಅವರೇ ಮಗನನ್ನು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾಯಿತು. ಬಳಿಕ ಪೊಲೀಸರು ರಂಗಲಾಲ್‌ ಅವರನ್ನು ಬಂಧಿಸಿದರು” ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ತಂದೆ-ಮಗನ ಸಂಬಂಧವು ಕೆಲ ತಿಂಗಳಿಂದ ಹಳಸಿತ್ತು ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version